ದರ್ಶನ್ ಸಿನಿಮಾ ಅಂದ್ರೆ ಪೈಸಾ ವಸೂಲಿ ಗ್ಯಾರಂಟಿ : ಆದರೆ ‘ಯಜಮಾನ’ ಗಳಿಸಿದೆಷ್ಟು ಗೊತ್ತಾ..?!!!

08 Mar 2019 9:57 AM | Entertainment
2142 Report

ದರ್ಶನ್ ಸಿನಿಮಾ ಅಂದ್ರೆ ಅಲ್ಲಿ ಪೈಸಾ ವಸೂಲಿ ಗ್ಯಾರಂಟಿ ಎಂಬ ಮಾತು ಗಾಂಧಿನಗರದಲ್ಲಿದೆ. ಹೇಳಿ ಕೇಳಿ ಇದು ಡಿಜಿಟಟಲ್ ಸಾಮ್ರಾಜ್ಯ. ಎಷ್ಟೇ ಕಷ್ಟಪಟ್ಟು , ವರ್ಷಾನುಗಟ್ಟಲೇ ಸಿನಿಮಾಗಾಗಿ ಬೆವರು ಹರಿಸಿದ್ರೂ , ಪೈರಸಿ ಕಾಟದಿಂದಾಗಿ ಬಿಗ್ ಬಜೆಟ್ ಚಿತ್ರಗಳು ನೆಲಕಚ್ಚಿ ಬಿಡುತ್ತವೆ. ಆದ್ರೂ ಸಿನಿ ಕಲಾವಿದರು ದೊಡ್ಡ ಮಟ್ಟದ ಬಂಡವಾಳದ ಚಿತ್ರಗಳಲ್ಲಿ ನಟಿಸಲು ಬಿಡೋದಿಲ್ಲ. ಸ್ಯಾಂಡಲ್ವುಡ್’ನಲ್ಲಿ ಬಾಕ್ಸ್ ಆಪೀಸ್ ಸುಲ್ತಾನರ ಚಿತ್ರಗಳು ಪೈಪೋಟಿಯಲ್ಲಿ ನಿರ್ಮಾಣವಾಗುತ್ತಿವೆ. ಇತ್ತೀಚೆಗೆ  ಡಿ ಬಾಸ್ ಅಭಿಯನದ ಯಜಮಾನ ಗಳಿಸಿದ ಮೊತ್ತವೆಷ್ಟು ಗೊತ್ತಾ..?

ಈಗ ಸರದಿ 'ಯಜಮಾನ'ನದ್ದು. ಯಜಮಾನ ಡಿಜಿಟಲ್​ ಹಕ್ಕನ್ನು ಅಮೆಜಾನ್​ ಪ್ರೈಂ ಖರೀದಿಸಿದೆಯಂತೆ. ಅದು ಸಹ 3.75 ಕೋಟಿ ಮೊತ್ತಕ್ಕೆ ಡಿಜಿಟಲ್​ ಹಕ್ಕು ಮಾರಾಟವಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಈ ಸಿನಿಮಾದ ಹಿಂದಿ ಡಬ್ಬಿಂಗ್​ ಹಕ್ಕು 6 ಕೋಟಿ ಹಾಗೂ ಟಿವಿ ಹಕ್ಕನ್ನು ಅಂದಾಜು 10 ಕೋಟಿಗೆ ಮಾರಾಟ ಮಾಡಲಾಗಿದೆ ಅನ್ನೊ ಸುದ್ದಿ​ ಗಾಂಧೀನಗರದಲ್ಲಿ ಓಡಾಡುತ್ತಿದೆ. ಆದರೆ ಥಿಯೇಟರ್’ಗಳಲ್ಲಿ ಆಗಿರುವ ಕಲೆಕ್ಷನ್ ಎಷ್ಟು ಗೊತ್ತಾ..? ಅಂದಹಾಗೇ ಈಗಾಗಲೇ ಯಜಮಾನನ್ನು ಮೆಚ್ಚಿಕೊಂಡಿರುವ  ಅಭಿಮಾನಿಗಳು ಸರಿ ಸುಮಾರುಸಿ ನಿ ಮಂದಿರಗಳಲ್ಲೇ 50 ಕೋಟಿ ಗಳಿಸಿದೆ ಚಿತ್ರ ಎನ್ನುತ್ತಿದ್ದಾರೆ. ಆದರೆ ಇದು ಎಷ್ಟು ಸತ್ಯವೋ ..ಸುಳ್ಳೊ ಗೊತ್ತಿಲ್ಲ. ಟಿವಿ, ಡಬ್ಬಿಂಗ್, ಡಿಜಿಟಲ್ ಎಲ್ಲ ಸೇರಿ 50 ಕೋಟಿ ಬಂದಿರಬಹುದೇನೋ…. ಆದರೆ ಅದರ ಬಗ್ಗೆ ಅಧಿಕೃತವಾಗಿ ಯಾರು ಹೇಳಿಲ್ಲ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಯಜಮಾನ  ರಿಲೀಸ್ ಆಗಿ ಮೂರೇ ದಿನಕ್ಕೆ 30 ಕೋಟಿ ಗಳಿಕೆ ಮಾಡಿದ್ದಾರೆ ಈಗ 50 ಕೋಟಿ ಸಂಪಾದನೆ ಮಾಡಿದ್ದಾನೆ ಎನ್ನುತ್ತಿದ್ದಾರೆ. ಇದರ ಬಗ್ಗೆ ಅಭಿಮಾನಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್  ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ.

Edited By

Kavya shree

Reported By

Kavya shree

Comments