ನಾವು ಹೋದ ಮೇಲೆ ನಮ್ಮದೊಂದು ಬ್ರ್ಯಾಂಡ್ ಬೇಕಲ್ವಾ…! ಅದಕ್ಕೆ‘ಇವರು’ ಬರ್ತಾರೆ..! ದರ್ಶನ್ ಹೀಗೆ ಹೇಳಿದ್ಯಾಕೆ…?

07 Mar 2019 5:43 PM | Entertainment
183 Report

ಈಗ ಸ್ಯಾಂಡಲ್ವುಡ್ ನ ಅದೆಷ್ಟೋ ಸ್ಟಾರ್ ನಟ ನಟಿಯರ ಮಕ್ಕಳು ಸಿನಿಮಾ ಜಗತ್ತಿಗೆ ಬಂದಿದ್ದು ಆಗಿದೆ.. ಸ್ಟಾರ್ ನಟ ನಟಿಯರು ಇಂಡಸ್ಟ್ರಿಗೆ ತಮ್ಮ ಮಕ್ಕಳನ್ನು ಕರೆ ತರುವುದು ಸಾಮಾನ್ಯವಾಗಿದೆ.. ಡಾ. ರಾಜ್ ಕುಟುಂಬದಿಂದ ಬಣ್ಣದ ಲೋಕಕ್ಕೆ ಬಂದಿದ್ದು ಅದೆಷ್ಟು ಮಂದಿ ಅನ್ನೋದು ಕೂಡ ನಿಮಗೂ ಗೊತ್ತಿದೆ… ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿ ಕೂಡ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದಾರೆ.. ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ದರ್ಶನ್ ಮುಂದಾಗಿದ್ದಾರೆ..

ಡಾ.ರಾಜ್ ಮಗ ಪುನೀತ್‌ರಂತೆಯೇ ದರ್ಶನ್ ಮಗ ವಿನೀಶ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಸಿನಿ ಜರ್ನಿಯನ್ನಯ ಪ್ರಾರಂಭ ಮಾಡಿದ್ದಾರೆ..  ಇದನ್ನು ದರ್ಶನ್ ಅವರೇ ಬಹಿರಂಗ ಪಡಿಸಿದ್ದಾರೆ. 'ಯಜಮಾನ' ಚಿತ್ರ ಯಶಸ್ಸು ಕಂಡಿದ್ದು, ಚಿತ್ರ ತಂಡ ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿತ್ತು.

ಅ ವೇಳೆ ಪ್ರತಿನಿಧಿಯೊಬ್ಬರು ನಿಮ್ಮ ಮಗ ಚಿತ್ರರಂಗಕ್ಕೆ ಬರುತ್ತಾರಾ ಎಂದು ಕೇಳಿದಾಗ, 'ನನ್ನ ಮಗನನ್ನೂ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೋದ ಮೇಲೆ ನಮ್ಮದೊಂದು ಬ್ರ್ಯಾಂಡ್ ಬೇಕಲ್ವಾ?' ಎಂದು ಉತ್ತರಿಸಿದ್ದಾರೆ. ಸದ್ಯ ವಿನೀಶ್ ಈಗಾಗಲೇ ಬಣ್ಣ ಹಚ್ಚಿದ್ದಾನೆ.. ಮುಂದೆ ಸ್ಯಾಂಡಲ್ ವುಡ್ ನಲ್ಲಿ ನೆಲೆಕಂಡುಕೊಳ್ಳುತ್ತಾನ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments