ಮದುವೆ ಸಿಲ್ವರ್ ಜ್ಯೂಬಿಲಿ ಸಂಭ್ರಮದಲ್ಲಿರಬೇಕಾದ ನನಗೆ ಆ ದಿನ ಬಹುದೊಡ್ಡ ದುರ್ಗತಿ : ರಾಘಣ್ಣನ ಮನದಾಳದ ಮಾತು…?!!!

07 Mar 2019 3:21 PM | Entertainment
245 Report

ನನ್ನ ಬಳಿ ಸಿನಿಮಾ ಆಫರ್’ಗಳನ್ನು ತೆಗೆದುಕೊಂಡು  ಬರ್ತಾಯಿದ್ದ ನಿರ್ದೇಶಕರಿಗೆ ನಾನು ಹೇಳಿದ್ದೂ ಒಂದೇ ಮಾತು. ಅಂದಹಾಗೇ ರಾಘವೇಂದ್ರ ರಾಜ್ ಕುಮಾರ್ ಅವರು ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಟುವ್ವಿ ಟುವ್ವಿ ಟುವ್ವಿ ಸಿನಿಮಾಗಳನ್ನು ಕೊಟ್ಟರು. ಸದ್ಯ ತಾವು ಹಾಸಿಗೆ ಹಿಡಿದು ಅನುಭವಿಸಿದ ಕಷ್ಟ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.  ಮಾತನಾಡುತ್ತಾ ಅವರು, ಅಂದಹಾಗೇ ನನಗೆ ಆರೋಗ್ಯ ಕೈ ಕೊಟ್ಟಿದ್ದೂ ನಿಮಗೆ ಗೊತ್ತೇ ಇದೆ. ನನಗೆ ಸ್ಟ್ರೋಕ್ ಆಗಿತ್ತು. ನನ್ನ ದೇಹದ ಎಡಭಾಗ ಸ್ವಾದೀನ ಇರಲಿಲ್ಲ.  ನನಗೆ ಬೆಡ್ ಬಿಟ್ಟು ಹೊರ ಪ್ರಪಂಚವೇ ಇರಲಿಲ್ಲ. ನನಗೆ ನಾನು ಬದುಕುವುದೇ ದೊಡ್ಡ ಕನಸೇನೋ ಎಂಬತ್ತಾಗಿತ್ತು. ನನ್ನ ಕೊನೆಯ ದಿನಗಳು ಇಲ್ಲಿಯೇ ಎಂದು ನಂಬಿದ್ದೆ. ಆದರೆ ದೇವರು ದೊಡ್ಡವನು ಮತ್ತೆ ನನಗೆ ಜೀವ ಕೊಟ್ಟ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನಗೆ ಸ್ಟ್ರೋಕ್ ಆಗಿದ್ದಕ್ಕೆ ಥ್ಯಾಂಕ್ಸ್ ಹೇಳ್ತೀನಿ.

ಏಕಂದ್ರೆ ನನಗೆ ಕಳೆದುಕೊಂಡಿದ್ದಕ್ಕಿಂತ ಹೆಚ್ಚಾಗಿ, ಪಡೆದುಕೊಂಡಿದ್ದೇ ಹೆಚ್ಚು.  ಏಕಂದ್ರೆ  ನಾನು ಆಸ್ಪತ್ರೆಯಲ್ಲಿ  ಅಡ್ಮಿಟ್ ಆಗಿದ್ದ ಸಂದರ್ಭದಲ್ಲಿ ಎಲ್ಲರೂ ನನ್ನ ಬೆಡ್ ಪಕ್ಕದಲ್ಲಿಯೇ ಇದ್ದು ನನಗೆ ಧೈರ್ಯ ತುಂಬಿ ಹಾರೈಕೆ ಮಾಡಿದ್ರು. ಹಾಗ ಅನಿಸಿತು,  ನಾನು ಇವರಿಗೆ ಅಷ್ಟು ಇಂಪಾರ್ಡೆಂಟಾ, ನನ್ನನ್ನು ಇಷ್ಟು ಮಿಸ್ ಮಾಡ್ಕೊಳ್ತಾರಾ…ಪ್ರೀತಿಸ್ತಾರಾ ಅಂತಾ. ನಿಜ ನನಗೆ ಆಗ ಬದುಕಬೇಕು ಅನಿಸಿತು. ಅಂದಹಾಗೇ  ಕಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. 2013 ಅಂದು ನನಗೆ ಮರೆಯಲಾರದ ದಿನ. ಅಂದು ನನ್ನ ಮದುವೆಯಾಗಿ 25 ವರ್ಷ ಆಗಿತ್ತು. ಸಿಲ್ವರ್ ಜ್ಯೂಬಿಲಿ ಆಚರಿಸಿಕೊಳ್ತಾ ಇರಬೇಕಿದ್ದವನು ವೀಲ್ ಚೇರ್ನಲ್ಲಿ ಪತ್ನಿ ಕೈಯಲ್ಲಿ ತಳ್ಳಿಸಿಕೊಂಡು ಹೋಗುವ ದುರ್ಗತಿ ಬಂತು.

ಸಿಂಗಾಪೂರ್ ದಲ್ಲಿ ಟ್ರೀಟ್ ಮೆಂಟ್ಗೆ ಹೋದಾಗ, ವೀಲ್ ಚೇರ್ನಲ್ಲಿ ನಾನು ಸ್ಟ್ರೋಕ್ ಆಗಿ ಕೂತಿದ್ದೆ, ನನ್ನ ಪತ್ನಿ ನನ್ನೊಂದಿಗೆ ಬರ್ತಾಯಿದ್ಳು. ಪಾಪಾ ಅವಳಿಗೆ ಆ ಖುಷಿಯನ್ನೇ ಕೊಟ್ಟಿಲ್ಲ, ಆ ಬೇಸರವಿದೆ ನನಗೆ ಎನ್ನುತ್ತಾರೆ ರಾಘವೇಂದ್ರ ರಾಜ್ ಕುಮಾರ್. ನನ್ನೊಂದಿಗೆ ಸಿಂಗಪೂರ್ ಗೆ ಶಿವಣ್ಣ ಮತ್ತು ಅತ್ತಿಗೆ ಗೀತಾ ಕೂಡ ಬಂದಿದ್ದರು. ಅಲ್ಲಿ ಹೆವ್ವಿ ಖರ್ಚು. ಅದನ್ನೆಲ್ಲಾ ಸೇವ್ ಮಾಡಬೇಕು ಅಂತಾ ಅಪಾರ್ಟ್ ಮೆಂಟ್ ನಲ್ಲಿ ಇದ್ವಿ. ಅಲ್ಲಿ ಶಿವಣ್ಣ ತರಕಾರಿ ತರೋಕೆ ಮಾರ್ಕೆಟ್ ಗೆ ಹೋಗ್ತಾಯಿದ್ರು. ಗೀತಾ ಅಡುಗೆ ಮಾಡ್ತಾಯಿದ್ರು, ನನ್ನ ಪತ್ನಿ  ಮನೆ ಕೆಲಸ ಮಾಡ್ತಾ ಇದ್ಲು. ನನ್ನ ಅಣ್ಣನಲ್ಲಿ ನನ್ನ ಅಪ್ಪನನ್ನು ನೋಡಿದೆ, ನನ್ನ ಅತ್ತಿಗೆಯಲ್ಲಿ ಅಮ್ಮನನ್ನು ನೋಡಿದೆ. ನನ್ನ ಹೆಂಡತಿ ನನ್ನ ಮಗು ಥರಾ ನೋಡಿದ್ಳು .ನನ್ನನ್ನು ಎಲ್ಲರೂ ಮಗು ಥರಾ ಸಾಕಿದ್ರು. ಅಮ್ಮನ ಮನೆ ಸಿನಿಮಾ ಕಥೆ ಕೂಡ ಪಾರ್ವತಮ್ಮ ನನ್ನು ನೆನಪು ಮಾಡುತ್ತದೆ. ಅದಕ್ಕಾಗಿಯೇ ನಾನು ಪಾತ್ರ ಮಾಡಲು ಒಪ್ಪಿಕೊಂಡೆ. ನಾನು ಅಮ್ಮನ ಮನೆ ಸಿನಿಮಾಗೆ ಬಣ್ಣ ಹಚ್ಚಿದಾಗ ನನ್ನಮ್ಮ ಇರಬೇಕಿತ್ತು ತುಂಬಾ ಅನಿಸಿತು. ನಾಳೆ ಅಮ್ಮನ ಮನೆ ಸಿನಿಮಾ ರಿಲೀಸ್ ಆಗ್ತಾಯಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮತ್ತೆ ಬಣ್ಣ ಹಚ್ಚಿದ್ದೇನೆ. ಹರಸಿ, ಆಶೀರ್ವಧಿಸಿ ಎಂದರು.

Edited By

Kavya shree

Reported By

Kavya shree

Comments