ವಿಲನ್ ದೇವಿಶೆಟ್ಟಿಯಿಂದ ‘ಯಜಮಾನ’ನಿಗೆ ಸಿಕ್ತು ಬಂಪರ್ ಗಿಫ್ಟ್ : ಸರ್ಪ್ರೈಸ್ ನೋಡಿ ಗಾಬರಿಯಾದ್ರಂತೆ ದಚ್ಚು...!!!

07 Mar 2019 1:39 PM | Entertainment
259 Report

ಅಂದಹಾಗೇ ಸ್ಯಾಂಡಲ್’ವುಡ್ ನಲ್ಲಿ ದರ್ಶನ್ ಅವರನ್ನು ಲಕ್ಕಿ ಹ್ಯಾಂಡ್ ಅಂತಾನೇ ಕರೆಯೋದು. ಈ ಬಾಕ್ಸ್ ಆಪೀಸ್ ಸುಲ್ತಾನಾನನ ಕೈಯಲ್ಲಿ  ಟೀಸರ್, ಅಥವಾ ಟ್ರೈಲರ್ ಲಾಂಚ್  ಮಾಡಿಸಿದ್ರೆ ಖಂಡಿತಾ ಸಿನಿಮಾ ಸಕ್ಸಸ್ ಆಗುತ್ತದೆ ಎಂಬ ನಂಬಿಕೆ. ಅಂದಹಾಗೇ ಈ ಬಾರಿ ತಮ್ಮ ಸ್ನೇಹಿತನ ಸಿನಿಮಾ ಟ್ರೇಲರ್ ಲಾಂಚ್ ಮಾಡೋಕೆ ಹೋಗಿದ್ದರು.  ಅಂದಹಾಗೇ ಅಲ್ಲಿ ದರ್ಶನ್ ಗೆ ಕಾದಿತ್ತು ಅಲ್ಲಿ ಬಿಗ್ ಸರ್ಪ್ರೈಸ್.

ಅಂದಹಾಗೇ ಸ್ಯಾಂಡಲ್ವುಡ್ನ ಥ್ರಿಲ್ಲಿಂಗ್, ಸಸ್ಪೆನ್ಸ್ ಸಿನಿಮಾಗಳ ನಿರ್ದೇಶನಕ್ಕೆ ಫೇಮಸ್ ಆಗಿರುವ ಸುನೀಲ್ ಕುಮಾರ್ ದೇಸಾಯಿ ಅವರು ಹೊಸ ಸಿನಿಮಾ ‘ಉದ್ಘರ್ಷ’ ಮಾಡ್ತಿದ್ದಾರೆ. ಇದರ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ಅವರಿಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಉಡುಗೊರೆಯಾಗಿ ಸಿಕ್ಕಿದೆ.ನಟ ಠಾಕೂರ್ ಅನೂಪ್ ಸಿಂಗ್ ಅವರು ದರ್ಶನ್ ಅವರಿಗೆ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ್ದಾರೆ.  ಅತಿಥಿಯಾಗಿ ಆಗಮಿಸಿದ ಡಿ ಬಾಸ್ ಗೆ ಗಿಫ್ಟ್ ನೋಡಿ ಗಾಬರಿಯಾಯ್ತಂತೆ. ಅಂದಹಾಗೇ ಅನೂಪ್ ಅವರು ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಅಂದಹಾಗೇ ಉದ್ಘರ್ಷ ಸಿನಿಮಾದಲ್ಲಿ ಠಾಕೂರ್ ಅವರು ನಾಯಕನಟನಾಗಿ ಆ್ಯಕ್ಟ್ ಮಾಡಿದ್ದಾರೆ.

ಅತಿಥಿಯಾಗಿ ಆಗಮಿಸಿದ್ದ ಗೆಳೆಯ ದಚ್ಚುಗೆ ಠಾಕೂರ್ 1 ಕೆಜಿ ತೂಕದ ವಾಚ್ ನ್ನು  ಗಿಫ್ಟ್ ಆಗಿ ನೀಡಿದ್ದಾರೆ. ಅಲ್ಲದೇ ವಾಚ್ ಬೆಲೆಯನ್ನು ತಿಳಿಸದ ಠಾಕೂರ್ ನನ್ನ ಪ್ರೀತಿಗಾಗಿ ಕೊಟ್ತಾಯಿರೋ ಉಡುಗೊರೆ ಎಂದಿದ್ದಾರೆ. ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಸಿನಿಮಾದಲ್ಲಿ ಅಭಿನಯಿಸಿ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವಿಚಾರದಲ್ಲಿ ಠಾಕೂರ್ ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಸಂತಸ ತಂದಿದೆ. ಸಿನಿಮಾದಲ್ಲಿ ಅಭಿನಯಿಸಿ ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ” ಎಂದು ದರ್ಶನ್ ಹೇಳಿದ್ದರು. 

Edited By

Kavya shree

Reported By

Kavya shree

Comments