ಬರ್ತ್'ಡೇ ಖುಷಿಯಲ್ಲಿರಬೇಕಾದ ಸ್ಯಾಂಡಲ್'ವುಡ್ ಸಿಂಡ್ರೆಲಾ ಮುಖದಲ್ಲಿ ಬೇಸರ : ವಿಡಿಯೋದಲ್ಲಿ ರಾಧಿಕಾ ಹೇಳಿದ್ದೇನು..?!!!

07 Mar 2019 11:03 AM | Entertainment
294 Report

ಸ್ಯಾಂಡಲ್’ವುಡ್ ನಲ್ಲಿ ತಾರೆಗಳ ಹುಟ್ಟುಹಬ್ಬ ಬಂದ್ರೆ ಸಾಕು ಅಭಿಮಾನಿಗಳಿಗೆನೇ ಸಂಭ್ರಮ ಜಾಸ್ತಿ. ಇಂದು ಯಶ್ ಪ್ರೀತಿಯ ಮಡದಿ, ಸ್ವೀಟ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ಬರ್ತ್ ಡೇ. ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಸಸ್ ರಾಮಾಚಾ ಅಂದಹಾಗೇ ಮುದ್ದಾದ ಕ್ಯೂಟ್ ಜೂ.ಸಿಂಡ್ರೆಲಾ ಜೊತೆ ಖುಷಿ ಖುಷಿಯಾಗಿ ಬರ್ತ್ ಡೇ  ಆಚರಿಸಿಕೊಳ್ಳ ಬೇಕಿದ್ದ ರಾಧಿಕಾ ಬೇಸರದಲ್ಲಿರೋದು ಯಾಕೆ..? ಅಂದಹಾಗೇ ವಿಡಿಯೋ ಮೂಲಕ ಸ್ಸಾರಿ ಕೇಳ್ತಿರೋದ್ಯಾರಿಗೆ. ಅವರ ಮನಸ್ಸಿಗೆ ನೋವು ಮಾಡಿದ್ದೀನಿ, ಈ ಬಾರಿ ಬರ್ತ್ ಡೇ ಮಾಡಿಕೊಳ್ಳುವಾಗ ಖಂಡಿತಾ ನಿಮ್ಮ ನೆನಪಾಗ್ತಿದೆ, ಪ್ಲೀಸ್ ಸ್ಸಾರಿ  ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ  ರಾಧಿಕಾ ಪಂಡಿತ್.

ಅಂದಹಾಗೇ ರಾಧಿಕಾ ಪಂಡಿತ್ ಈಗ ಬಾಣಂತಿ. ಮಗುವಿನ ಹಾರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಬಾರಿ ಬಂದಿರುವ ಬರ್ತ್ಡೇ'ಗೆ ನಿಮ್ಮನ್ನೆಲ್ಲಾ ಮಿಸ್ ಮಾಡಿಕೊಳ್ತಿದ್ದಾರೆ, ಕ್ಷಮಿಸಿ ಎಂದು ತಮ್ಮ ಫ್ಯಾನ್ಸ್ , ಫಾಲೋಯರ್ಸ್ ಗೆ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ಅಂದಹಾಗೇ ಪ್ರತೀ ಬಾರಿಯೂ ಅಭಿಮಾನಿಗಳೊಟ್ಟಿಗೆ ಬರ್ತ್ ಡೇ ಮಾಡಿಕೊಳ್ಳುತ್ತಿದ್ದೆ, ಅವರೊಂದಿಗೆ ಕೇಕ್ ಕಟ್ ಮಾಡ್ತಿದ್ದೇ ಆದರೆ ಈ ಬಾರಿ ಆ ಖುಷಿ ಕಡಿಮೆಯಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ನಿನ್ನೆಯೇ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಇದರಿಂದ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ನೀವೆಲ್ಲಾ ನನ್ನ ಭೇಟಿ ಮಾಡಲು ಬರುತ್ತೀರಿ. ನಿಮ್ಮ ಊರಿನಿಂದ ನನ್ನ ಹುಟ್ಟುಹಬ್ಬ ಆಚರಿಸಲು ಪ್ರೀತಿಯಿಂದ ಬರುತ್ತೀರಿ. ಆದರೆ ಈ ವರ್ಷ ನಾನು ಬೆಂಗಳೂರಿನಲ್ಲಿ ಇರಲ್ಲ. ನನ್ನ ಬರ್ತ್' ಡೇ ದಿನ ಬೆಂಗಳೂರಿನಲ್ಲಿ ಇರಬೇಕು ಎಂದು ತುಂಬಾ ಪ್ರಯತ್ನ ಪಟ್ಟೆ.

ಆದರೆ ಕಾರಣಾಂತರದಿಂದ ನಾನು ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.ನಾನು ಬೆಂಗಳೂರಿಗೆ ಬಂದ ಮೇಲೆ ಎಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದೇ ರೀತಿ ನಿಮ್ಮ ಪ್ರೀತಿ, ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ಈ ಸಂದೇಶವನ್ನು ಎಲ್ಲರಿಗೂ ಶೇರ್ ಮಾಡಿ, ಲವ್ ಯು ಆಲ್ ಎಂದು ರಾಧಿಕಾ ಅವರು ಹೇಳಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಮಗುವಿನ ಹಾರೈಕೆ ನಂತರ ಸಿಲ್ವರ್ ಸ್ಕ್ರೀನ್'ಗೆ ಕಂ- ಬ್ಯಾಕ್ ಮಾಡಲಿದ್ದಾರೆ. ಈಗಾಗಲೇ ಸಿನಿಮಾ ಅವಕಾಶಗಳು ಬರುತ್ತಿವೆ, ಸ್ವಲ್ವ ದಿನಗಳ ನಂತರ ಸಿನಿಮಾ ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

Edited By

Kavya shree

Reported By

Kavya shree

Comments