ಮತ್ತೆ ಸಂಕಷ್ಟದಲ್ಲಿ ಕನ್ನಡದ ಹಿರಿಯ ನಟಿ : ಸಹಾಯಕ್ಕೆ ಅಂಗಲಾಚಿದ ಡಾ.ಲೀಲಾವತಿ..?!!

07 Mar 2019 10:43 AM | Entertainment
265 Report

ಕನ್ನಡ ಚಿತ್ರರಂಗದ ಖ್ಯಾತ ನಟಿ ಡಾ. ಲೀಲಾವತಿಯಮ್ಮ ಅವರು ಮತ್ತೆ ಸಂಕಷ್ಟದಲ್ಲಿದ್ದಾರೆ. ಲೀಲಾವತಿಗೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಕಷ್ಟ ಎದುರಾಗುತ್ತಿದೆ. ಸದ್ಯ ಈ ಬಾರಿ ಬಡವರ ಅನುಕೂಲಕ್ಕಾಗಿ, ಅದರಲ್ಲೂ ಗ್ರಾಮೀಣ ಭಾಗದ ಜನರಿಗಾಗಿ ಒಂದು ಆಸ್ಪತ್ರೆ ನಿರ್ಮಾಣ ಮಾಡಿದ್ದರು. ಇದೀಗ ಆ  ಆಸ್ಪತ್ರೆಗೆ ಸಂಕಷ್ಟ ಎದುರಾಗಿದೆ. ಲೀಲಾವತಿ ಈ ಬಗ್ಗೆ ಹೇಳೋದೇನು ಗೊತ್ತಾ..? ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ 2009ರಲ್ಲಿ ನಟಿ ಲೀಲಾವತಿಯವರೇ  ಆಸ್ಪತ್ರೆ ಕಟ್ಟಿಸಿದರು.

ತಮ್ಮ ಸ್ವಂತ ಜಮೀನಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ನಂತರ ಆಸ್ಪತ್ರೆಯನ್ನು ಸರ್ಕಾರದ ಸ್ವಾಧೀನಕ್ಕೆ ನೀಡಿ, ನೆಲಮಂಗಲ ಆಡಳಿತ ವೈದ್ಯಾಧಿಕಾರಿ ಹೆಸರಿಗೆ ದಾಖಲಾತಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಇದೂವರೆಗೂ  ಸೂಕ್ತ ವೈದ್ಯರಿಲ್ಲದೇ  ಆ ಆಸ್ಪತ್ರೆ ಪಾಳು ಬಿದ್ದಿದೆ. ತಾವು  ಪ್ರೀತಿಯಿಂದ ಕಟ್ಟಿಸಿದ ಆಸ್ಪತ್ರೆಗೆ ಯಾರು ದಿಕ್ಕು ದೆಸೆಯಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಸದಾ ಕಾಲ ಆಸ್ಪತ್ರೆ ಬಾಗಿಲು ಮುಚ್ಚಿದಂತೆಯೇ ಇರುತ್ತದೆ ಎಂದು ಹೇಳಿದ್ದಾರೆ.  ಕೆಲದಿನಗಳ ಹಿಂದಷ್ಟೇ ಕೆಲ ದುಷ್ಕರ್ಮಿಗಳು ಗುಂಪೊಂದು ಆಸ್ಪತ್ರೆಯ ಮೇಲ್ಚಾವಣಿ ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿತ್ತು.

ಇಂತಹ ಘಟನೆಗಳನ್ನು ನಿಯಂತ್ರಿಸಲು ಆಸ್ಪತ್ರೆಯ ವೈದ್ಯಾಧಿಕಾರಿಗಳು  ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸುವಂತೆ ತಿಳಿಸಿತ್ತು. ನೇಮಕ ಮಾಡಿದ ಸೆಕ್ಯೂರಿಟಿಗಳಿಗೆ ಯಾರಿಗೂ ಸಂಬಳ ನೀಡದೇ ಸತಾಯಿಸುತ್ತಾ ಬಂದಿದೆ. ಆದರೆ ಇದುವರೆಗೂ ಅವರಿಗೆ ಸಂಬಳ ನೀಡದೆ ಆರೋಗ್ಯ ಇಲಾಖೆ ಸತಾಯಿಸುತ್ತಲೇ  ಬಂದಿದೆ.  ಅವರನ್ನು ನಾವೇ  ನಿಭಾಯಿಸಿಕೊಂಡು ಬಂದಿದ್ದೇವೆ ಎಂದರು.ಅನೇಕ ಜನ ಸಚಿವರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ರೂ ಯಾರಿಂದಲೂ ಸಹಾಯವಾಗಿಲ್ಲ. ಕಳೆದ  ಕೆಲ ದಿನಗಳಿಂದ ಮಂಜುಳಾ ಅನ್ನೂ  ವೈದ್ಯರು ಬರ್ತಾಯಿದ್ರು, ಸದ್ಯ ಅವರು ಕೂಡ ಇಲ್ಲ. ಅವರಿಗೆ ಆಸ್ಪತ್ರೆ ಬಾಗಿಲು ಹಾಕ್ಕೊಂಡು ಬರುವಂತೆ ತಾಲ್ಲೋಕು ಆಸ್ಪತ್ರೆ ಅಧಿಕಾರಿ ತಿಳಿಸಿದ್ದಾರಂತೆ. ಒಟ್ಟಾರೆ, ನಾನು ಕಂಡ ಕನಸಿನ ಕೂಸು ಇದು. ಆಸ್ಪತ್ರೆ ಬಡವರಿಗೆ ಸಹಾಯವಾಗಲೀ ಅಂತಾ ಕಟ್ಟಿಸಿದ್ದೀವೀ, ಇದೀಗ ಕೊಂಪೆಯಾಗುತ್ತಿದೆ. ಬಾಗಿಲು ಹಾಕಿ ಬೀಗ ಜಡಿದು ಬಿಟ್ಟಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ ನಟಿ ಲೀಲಾವತಿ.

Edited By

Kavya shree

Reported By

Kavya shree

Comments