ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ಫಿಕ್ಸ್..!?

06 Mar 2019 5:25 PM | Entertainment
3270 Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ… ಆದರೆ ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಸಿನಿಮಾ ಬಿಡುಗಡೆ ಯಾವಾಗ ಎಂಬ ಗುಟ್ಟನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ…. ದರ್ಶನ್ ಅವರ ಕೆರಿಯರ್ ನಲ್ಲೆ ಇದು ಬಹು ಮುಖ್ಯವಾದ ಚಿತ್ರವಾಗಿದೆ… ಸಿನಿಮಾಗೇ ಯಾಕೋ ಬಿಡುಗಡೆಯ ಭಾಗ್ಯ ಇನ್ನೂ ಸಿಕ್ಕೆ ಇಲ್ಲ…

ಇದೀಗ ನಾಗಣ್ಣ ನಿರ್ದೇಶನದ ಬಹು ನಿರೀಕ್ಷೆಯ ಸಿನಿಮಾವಾದ ಕುರುಕ್ಷೇತ್ರ' ಸಿನಿಮಾ ಬಿಡುಗಡೆಯ ದಿನಾಂಕ ಪಕ್ಕಾ ಆಗಿದೆ ಎನ್ನಲಾಗುತ್ತಿದೆ.. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುನಿರತ್ನ ಅವರು ಮುಂದಿನ ತಿಂಗಳು ಈ ಚಿತ್ರವನ್ನು ತೆರೆಗೆ ತರಲು ನಿರ್ಧಾರ ಮಾಡಿದ್ದಾರಂತೆ… ಏಪ್ರಿಲ್‌ 5 ರಂದು ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ... ಈಗಾಗಲೇ ಆ ನಿಟ್ಟಿನಲ್ಲಿ ತಯಾರಿಗಳು ಜೋರಾಗಿಯೆ ನಡೆಯುತ್ತಿದ್ದು, ಇನ್ನೂ 3ಡಿ ಹಾಗೂ ಗ್ರಾಫಿಕ್ಸ್‌ ಕೆಲಸ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.ಒಂದು ನಿಖಿಲ್ ಲೋಕಸಭಾ ಅಖಾಡಕ್ಕೆ ಇಳಿದರೆ ನೀತಿ ಸಂಹಿತೆಯ ಆಧಾರದ ಮೇಲೆ ಸಿನಿಮಾವನ್ನು ಬಿಡುಗಡೆ ಮಾಡುವಂತಿಲ್ಲ.,..ಹಾಗಾಗಿ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೆ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಅಭಿಪ್ರಾಯವಾಗಿದೆ..

Edited By

Manjula M

Reported By

Manjula M

Comments