2 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು…!

06 Mar 2019 9:47 AM | Entertainment
215 Report

ಸದ್ಯಎಲ್ಲರ ಅಭಿಮಾನಿಗಳ ಆಸಕ್ತಿ ಎಲ್ಲಾ ಕ್ರಿಕೆಟ್’ನತ್ತ ವಾಲಿದೆ. ಈಗಾಗಲೇ ಮ್ಯಾಚ್’ಗಳು ಶುರುವಾಗಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ನಾಗಪುರ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ  2 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್’ಗಳ  ಅಂತರದ ರೋಚಕ ಜಯಗಳಿಸಿದೆ. ಟೀಂ ಇಂಡಿಯಾ ನಾಯಿ ವಿರಾಟ್ ಕೊಹ್ಲಿ 116 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಪಡೆದಿದ್ದಾರೆ.ಆಸ್ಟ್ರೇಲಿಯಾ 49.3 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 242 ರನ್ ಗಳಿಸಿ ಸೋಲು ಕಂಡಿದೆ.

ಆಸ್ಟ್ರೇಲಿಯಾ ಪರವಾಗಿ ಆರನ್ ಫಿಂಚ್ 37, ಉಸ್ಮಾನ್ ಕ್ವಾಜಾ 38, ಶಾನ್ ಮಾರ್ಷ್ 16 ಪೀಟರ್ ಹ್ಯಂಡ್ಸ್ ಕಾಂಬ್ 48, ಗ್ಲೆನ್ ಮ್ಯಾಕ್ಸ್ ವೆಲ್ 4, ಮಾರ್ಕಸ್ ಸ್ಟೋನಿಯಸ್ 52, ಅಲೆಕ್ಸ್ ಕ್ಯಾರಿ 22 ರನ್ ಗಳಿಸಿದರು. ಭಾರತದ ಪರವಾಗಿ ಕುಲದೀಪ್ ಯಾದವ್ 3, ವಿಜಯಶಂಕರ್ 2, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.  ಭಾರತ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿತು.  ಖಾತೆ ಆರಂಭಕ್ಕೂ ಮೊದಲೇ ರೋಹಿತ್ ಶರ್ಮಾ ಅವರು ವಿಕೆಟ್ ಕಳೆದುಕೊಂಡರು. ಶಿಖರ್ ಧವನ್21,  ವಿರಾಟ್ ಕೊಹ್ಲಿ 116, ಅಂಬಾಟಿ ರಾಯುಡು 18, ವಿಜಯಶಂಕರ 46, ಕೇದಾರ್ ಜಾಧವ್ 11, ಎಂ.ಎಸ್. ಧೋನಿ 0, ರವೀಂದ್ರ ಜಡೇಜ 21, ಕುಲದೀಪ್ ಯಾದವ್ 3, ಮೊಹಮ್ಮದ್ ಶಮಿ ಅಜೇಯ 2, ಜಸ್ಪ್ರೀತ್ ಬೂಮ್ರಾ 0 ರನ್ ಗಳಿಸಿದರು. ಅಂತಿಮವಾಗಿ ಭಾರತ 48.2 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 250 ರನ್ ಗಳಿಸಿತು.

Edited By

Kavya shree

Reported By

Kavya shree

Comments