ಸ್ಯಾಂಡಲ್ ವುಡ್ ‘ದಾಸ’ನನಿಗೂ ‘ಕೆಂಪೇಗೌಡ’ನಿಗೂ ಇಂದು ಕರಾಳ ದಿನವಂತೆ…!!? ಯಾಕೆ ಗೊತ್ತಾ..?

05 Mar 2019 3:57 PM | Entertainment
2388 Report

ಸ್ಯಾಂಡಲ್’ವುಡ್ ನಲ್ಲಿ ಸ್ಟಾರ್ ವಾರ್’ಗಳು ಅನ್ನೋದು ಕಾಮನ್… ಸ್ಟಾರ್’ಗಳು ಸುಮ್ಮನಿದ್ದರೂ ಕೂಡ ಅಭಿಮಾನಿಗಳು ಸುಮ್ಮನೆ ಇರುವುದಿಲ್ಲ….ನಮ್ಮ ಸ್ಟಾರ್ ಅವರು ಇವರು ಅಂತ ವಾರ್ ಶುರು ಮಾಡೇ ಬಿಡ್ತಾರೆ,.. ಸ್ಟಾರ್ ಗಳು ಎಷ್ಟೆ ಹೇಳಿದರೂ ಕೂಡ ಅಭಿಮಾನಿಗಳು ಮಾತನ್ನು ಕೇಳುವುದಿಲ್ಲ… ಏನೆ ಸ್ಟಾರ್ ವಾರ್ ಆದರೂ ಅದನ್ನೆಲ್ಲಾ ಮರೆತು ಒಂದಾಗಿ ಇರೋಣ ಅಂದುಕೊಂಡರೂ ಮೊದಲಿನಂತೆ ಯಾವುದು ಸರಿ ಇರುವುದಿಲ್ಲ… ಒಮ್ಮೆ ಸ್ಟಾರ್ ವಾರ್ ಶುರುವಾದರೆ ಮೇಲ್ನೊಟಕ್ಕೆ ಎಲ್ಲಾ ಸರಿ ಕಂಡರೂ ಕೂಡ ಯಾವುದು ಸರಿ ಹೋಗಿರುವುದಿಲ್ಲ.. ಒಳಗೊಳಗೆ ವೈಮನಸ್ಸು ಇದ್ದೆ ಇರುತ್ತದೆ… ಅದೇ ರೀತಿ ದಚ್ಚು ಕಿಚ್ಚ ನ ನಡುವೆ ಕೂಡ ಈ ರೀತಿಯದ್ದು ಒಂದು ಸಮರ ನಡೆಯುತ್ತಿದೆ..

ಮಾರ್ಚ್ 5....ಸ್ಯಾಂಡಲ್ ವುಡ್ ಇತಿಹಾಸದಲ್ಲಿಯೇ ಮರೆಯಲಾಗದ ದಿನವಾಗಿ ಬಿಟ್ಟಿದೆಯಂತೆ.. ಅದರಲ್ಲೂ  ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ದಿನವನ್ನ ಎಂದು ಮರೆಯಲ್ಲ ಎಂದು ಹೇಳಿಕೊಂಡಿದ್ದಾರೆ... ಬಹುಶಃ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಪಾಲಿಗೂ ಕೂಡ  ಕರಾಳ ದಿನ ಅಂತ ಹೇಳಬಹುದಾಗಿದೆ.. ಅಷ್ಟು ದಿನ ಚೆನ್ನಾಗಿದ್ದ ಇವರಿಬ್ಬರ ಮಧ್ಯೆ ಬಿರುಕು ಬಂದಿದ್ದೆ ಅವತ್ತು…ಯಾಕಂದ್ರೆ, ಈ ದಿನದಿಂದಲೇ ಸ್ಯಾಂಡಲ್ ವುಡ್ ಯುವ ದಿಗ್ಗಜರ ಸ್ನೇಹ ಮುರಿದುಬಿದ್ದಿತ್ತು. ಮಾರ್ಚ್ 5 2017 ರಂದು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕ್ಷಣ ಯೋಚಿಸುವಂತೆ ಮಾಡಿತ್ತು…

ಅಲ್ಲಿಯವರೆಗೂ ಚೆನ್ನಾಗಿದ್ದ ಇವರಿಬ್ಬರ ಸ್ನೇಹ ಈ ಟ್ವೀಟ್ ಬಳಿಕ ಎಲ್ಲವೂ ಬದಲಾಯಿತು. ಅಷ್ಟಕ್ಕೂ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಕಾರಣ ಏನ್ ಗೊತ್ತಾ..? ಆ ಒಂದು ಟ್ವೀಟ್… ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರು ಮಾತ್ರ ಇದು ಮುಗಿದು ಹೋದ ಕಥೆ'' ಎಂದು ರಾತ್ರಿ 8.15 ಕ್ಕೆ ದರ್ಶನ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ನೋಡಿದ ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಒಂದು ಕ್ಷಣ ಅಚ್ಚರಿಗೊಂಡರು…ಇದಕ್ಕೆ ಕಾರಣ ಮೆಜಸ್ಟಿಕ್ ಚಿತ್ರವಂತೆ.. ಈ ಸಿನಿಮಾದ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು.. ಮೆಜೆಸ್ಟಿಕ್ ಸಿನಿಮಾಗೆ  ದರ್ಶನ್ ಅವರನ್ನ ನಾನೇ ಸೂಚಿಸಿದ್ದು ಎಂಬ ಸುದೀಪ್ ಹೇಳಿಕೆಗೆ ದರ್ಶನ್ ಟ್ವೀಟ್ ಮಾಡಿದ್ದರು

Edited By

Manjula M

Reported By

Manjula M

Comments