ವಿಮಾನದಲ್ಲಿ ಪ್ರಯಾಣಿಸುವ ಆಸೆ ಇದ್ಯಾ : ಈ ಬಾರಿ ಸಿಕ್ತಾಯಿದೆ ಭರ್ಜರಿ ಆಫರ್..?!!

05 Mar 2019 3:53 PM | Entertainment
271 Report

ಅಂದಹಾಗೇ ವಿಮಾನದಲ್ಲಿ ಪ್ರಯಾಣಿಸುವ ಆಸೆ ಇರುವವರಿಗೆ ಈ ಬಾರಿ ಏರ್ ಲೈನ್ಸ್ ಕಂಪನಿ ವತಿಯಿಂದ ಭರ್ಜರಿ ಆಫರ್ ಸಿಕ್ಕಿದೆ. ಅದರಲ್ಲೂ ದೇಶ-ವಿದೇಶ ಪ್ರಯಾಣಿಸುವವರಿಗೆ ಅತೀ ಕಡಿಮೆ ದರದಲ್ಲಿ  ಪ್ರಯಾಣ ದರವನ್ನು ನಿಗಧಿ ಮಾಡಲಾಗುವುದು ಎಂದು ಇಂಡಿಗೋ ಏರ್ ಲೈನ್ಸ್ ಕಂಪನಿ ಪ್ರಕಟಿಸಿದೆ. ಹೋಳಿ ಹಬ್ಬ ಮಾಡುವವರಿಗೆ ಈ ವರ್ಷ ಮತ್ತಷ್ಟು ಕಲರ್ಫುಲ್ ಆಗಲಿದೆ. ಮಾರ್ಚ್ 5 ರಿಂದ 7 ರವರೆಗೆ ಯಾವುದೇ ನಗರಕ್ಕೆ ಕೇವಲ 899 ರೂಪಾಯಿಗಳಲ್ಲಿ ವಿಮಾನಯಾನ ಕೈಗೊಳ್ಳಬಹುದು. ಹಾಗೂ ಅಲ್ಲಿನ ವಿಶೇಷ ಸ್ಥಳಗಳ ಸೊಬಗನ್ನು ಸವಿಯಬಹುದಾಗಿದೆ.

ಇನ್ನೂ ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಕಂಪನಿ ವತಿಯಿಂದ ರಿಯಾಯಿತಿ ದರದಲ್ಲಿ ಪ್ರಯಾಣ ದರ ನಿಗಧಿ ಮಾಡಲಾಗಿದೆ. ವಿದೇಶ ಸುತ್ತುವವರಿಗೆ ಮಾರ್ಚ 19ರಿಂದ ಸೆಪ್ಟೆಂಬರ್ 28ರವರೆಗೆ ಕೇವಲ 3.399 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಈ ಬಾರಿ ವಿಮಾನದಲ್ಲಿ ಪ್ರಯಾಣಿಕರಿಗೆ ಬಹುದೊಡ್ಡ ಆಫರ್ ನೀಡಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ತಿಳಿಸಿದೆ. ಈ ಬಾರಿ ರಜೆಗಳ ಮಜಾ ಸವಿಯಲು ವಿದೇಶ ಪ್ರವಾಸ ಕೈಗೊಳ್ಳುತ್ತಿರುವವರಿಗೆ ಅತೀ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಲಭಿಸ್ತಾಯಿದೆ.  ರಾಷ್ಟ್ರೀಯ ಒಟ್ಟು ವಿಮಾನದಲ್ಲಿ ಶೇ. 40 ರಷ್ಟು ಪ್ರಯಾಣಿಕರನ್ನು ಈಕಂಪನಿ ಹೊಂದಿದೆ.ಹೋಳಿ ವಿಶೇಷವಾಗಿ ನಮ್ಮ ಸಂಸ್ಥೆಯಿಂದ ಈ ಬಿಗ್ ಆಫರ್ ನೀಡಲಾಗಿದೆ ಎಂದು ಇಂಡಿಗೋ ಏರ್‍ಲೈನ್ಸ್ ಸಂಸ್ಥೆಯ ಕಮರ್ಷಿಯಲ್ ಹೆಡ್ ವಿಲಿಯಂ ಬಟ್ಲರ್ ತಿಳಿಸಿದ್ದಾರೆ

Edited By

Kavya shree

Reported By

Kavya shree

Comments