ತನನ್ನು ಟ್ರೋಲ್ ಮಾಡ್ತಿದ್ದವರಿಗೆ ರಶ್ಮಿಕಾ ಭಾವುಕರಾಗಿ ಹೇಳಿದ್ದೇನು ಗೊತ್ತಾ..? ಆ ಪತ್ರದಲ್ಲಿ ಅಂತದ್ದೇನಿತ್ತು..?!!!

05 Mar 2019 12:33 PM | Entertainment
1008 Report

ಸ್ಯಾಂಡಲ್ವುಡ್ ನ, ಕನ್ನಡಿಗರ ಕ್ರಶ್ ರಶ್ಮಿಕಾ ಒಂದಷ್ಟು ದಿನಗಳ ಕಾಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಒಂದು ಕಡೆ ಪರ್ಸನಲ್ ಲೈಫ್, ಮತ್ತೊಂದು ಕಡೆ ಪ್ರೊಫೆಷನಲ್ ಲೈಫ್, ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡೋಕಾಗದೇ ಅವರು ಕೂಡ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದರು. ಆದರೆ ಕತ್ತಲು ಆದ ಮೇಲೆ ಬೆಳಕು ಆಗಲೇ ಬರಬೇಕಲ್ಲವೇ, ರಶ್ಮಿಕಾ ಲೈಫ್ ನಲ್ಲಿಯೂ ಹಾಗೆ. ಯಾವ ಅಭಿಮಾನಿಗಳು ರಶ್ಮಿಕಾರನ್ನು ಕಂಡರೆ ಸಿಡಿಮಿಡಿಗೊಳ್ತಿದ್ರೋ ಅವರೇ ಈಗ ರಶ್ಮಿಕಾರನ್ನು ಹಾಡಿ ಹೊಗಳುತ್ತಿದ್ದಾರೆ. ರಶ್ಮಿಕಾ ಬಗ್ಗೆ ಅಭಿಮಾನದ ಹೊಳೆಯನ್ನೇ ಹರಿಸಿದ್ದಾರೆ.

ಈ ಹಿಂದೆ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆದ್ರು. ಕನ್ನಡಕ್ಕೆ ಮತ್ತೆ ವಾಪಸ್ ಬರೋದೇ ಇಲ್ಲ ಎನ್ನುತ್ತಿದ್ದವರಿಗೆ ಶಾಕ್ ಕಾದಿತ್ತು.  ರಶ್ಮಿಕಾ ದರ್ಶನ್ ಜೊತೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಕಳೆದ ವಾರವಷ್ಟೇ ಯಜಮಾನ ಸಿನಿಮಾ ರಿಲೀಸ್ ಆಗಿವೆ. ಅಂದಹಾಗೇ ರಶ್ಮಿಕಾ  ಯಾವ ಮಟ್ಟಿಗೆ ಟ್ರೋಲ್ ಆಗಿದ್ರು ಎಂದರೇ ಅಭಿಮಾನಿಗಳು ಅವರು ಇನ್ನುಮುಂದೆ ಕನ್ನಡ ಸಿನಿಮಾದಲ್ಲಿ ನಟಿಸಬಾರದು ಅಂತಾ ಟ್ವೀಟ್ ಸಮರ ಸಾರಿದ್ದರು. ಅದಕ್ಕೆ ಕಾರಣ ಸಾಕಷ್ಟು ಇರಬಹುದು… ಅದೇನೇ ಇರಲೀ ರಶ್ಮಿಕಾ ಕನ್ನಡಕ್ಕೆ ಬಂದಿದ್ದೂ ಆಯ್ತು, ಅಭಿಮಾನಿಗಳು ಕೂಡ ಅವರನ್ನು ಕ್ಷಮಿಸಿದ್ದೂ ಆಯ್ತು. ಅಂದಹಾಗೇ ಯಜಮಾನ ಸಕ್ಸಸ್ ನಲ್ಲೇ ರಶ್ಮಿಕಾ ಫ್ಯಾನ್ಸ್ ಉದ್ದೇಶಿಸಿ ಒಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿತ್ತು ಗೊತ್ತಾ..?'ನನ್ನ ಬಗ್ಗೆ ಇದ್ದ ದ್ವೇಷ, ಮಾಡಿದ್ದ ಟ್ರೋಲ್​ಗಳಿಂದ ತುಂಬಾ ನೋವಿನಲ್ಲಿದ್ದೆ. ಆದರೆ ಈಗ ಕಾವೇರಿಗೆ ನೀವು ತೋರುತ್ತಿರುವ ಪ್ರೀತಿ ಹಾಗೂ ವಿಶ್ವಾಸ ನೋಡಿದ ಮೇಲಂತೂ ನನಗೆ ತುಂಬಾ ಖುಷಿಯಾಗಿದೆ.

ಪ್ರೀತಿಯ ಮೇಲೆ ಯಾವ ದ್ವೇಷವೂ ನಿಲ್ಲುವುದಿಲ್ಲ. ನಿಮ್ಮ ಪ್ರೀತಿಗೆ ನಾನು ಚಿರಋಣಿ' ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.ಅಂದಹಾಗೇ ನಟ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ಅಪ್, ಕನ್ನಡಿಗಳಾಗಿ ಕನ್ನಡವನ್ನು ಸರಿಯಾಗಿ ಮಾತನಾಡದೇ ತೆಲಗು ಮೇಲಿನ ವ್ಯಾಮೋಹ ಕಂಡು  ರಶ್ಮಿಕಾ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದರು. ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಸೀನ್ ಲೀಕ್ ಹಾಗಿದ್ದೇ ತಡ ರಶ್ಮಿಕಾಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಯ್ತು, ಯಾವ ಮಟ್ಟಿಗೆ ಎಂದರೆ ಸಿನಿಮಾದಲ್ಲಿ ಆ ಸೀನ್ ಗೆ ಕತ್ತರಿ ಹಾಕೋವರೆಗೂ. ಆದ್ರು ಅದೆಲ್ಲಾ ಅವಮಾನಗಳ ನಡುವೆ  ರಶ್ಮಿಕಾ ಕನ್ನಡಕ್ಕೆ ಮತ್ತೆ ಬಂದಿದ್ದಾರೆ, ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

Edited By

Kavya shree

Reported By

Kavya shree

Comments