ಚಾಲೆಂಜಿಂಗ್ ಸ್ಟಾರ್ ತೆಗೆದ ಫೋಟೋಗಳು ಗಳಿಸಿದ ಹಣವೆಷ್ಟು ಗೊತ್ತಾ..?!

05 Mar 2019 11:18 AM | Entertainment
1636 Report

ಚಾಲೆಂಜಿಂಗ್ ಸ್ಟಾರ್ ಸಿನಿಮಾಗಳಷ್ಟೇ ಅಲ್ಲಾ, ಸಮಾಜ ಸೇವೆಗಳಲ್ಲೂ ಬ್ಯುಸಿಯಾಗಿದ್ದಾರೆ. ಅಂದಹಾಗೇ ಕಾಡು, ಕಾಡು ಪ್ರಾಣಿಗಳೆಂದರೇ ದರ್ಶನ್’ಗೆ  ಎಲ್ಲಿಲ್ಲದ ಪ್ರೀತಿ.  ಇತ್ತೀಚೆಗೆ ಒಂದು ಛಾಯಚಿತ್ರ ಮೇಳವನ್ನು ಆಯೋಜನೆ ಮಾಡಲಾಗಿತ್ತು.  ಚಾಲೆಂಜಿಂಗ್ ಸ್ಟಾರ್ ತೆಗೆದ ಫೋಟೋಗಳನ್ನು ಪ್ರರ್ಶನಕ್ಕೆ ಇಡಲಾಗಿತ್ತು. ಸೆರೆಹಿಡಿದ ಫೋಟೋಗಳಿಂದ ಬಂದ ಮೊತ್ತವೆಷ್ಟು ಗೊತ್ತಾ..?

ಮೊದಲೆಲ್ಲಾ ಪ್ರಾಣಿ ಪಕ್ಷಿಗಳ ಫೋಟೋ ತೆಗೆಯಲು ಬಾರದ ದರ್ಶನ್’ಗೆ ಫ್ರೆಂಡ್ಸ್ ಸಹಾಯದಿಂದ ಅದೇ ಅಭ್ಯಾಸವಾಗಿಹೋಯ್ತು. ಸದ್ಯ ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಲ್ಲಾ ಅಂದ್ರೆ ಚಾಲೆಂಜಿಂಗ್ ಸ್ಟಾರ್ ಗೆ ಏನೋ ಕಳೆದುಕೊಂಡಂತೆ ಫೀಲ್ ಆಗುತ್ತಂತೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೆರೆ ಹಿಡದ ಫೋಟೋಗಳ ಮಾರಾಟದಿಂದ 3 ಲಕ್ಷಕ್ಕೂ ಅಧಿಕ ರೂ. ಸಂಗ್ರಹವಾಗಿದೆ.  ಮಾರ್ಚ್ .3 ವನ್ಯಜಿವಿ ದಿನದ ಹಿನ್ನಲೆಯಲ್ಲಿ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೇಲ್ ನಲ್ಲಿ ದರ್ಶನಅವರು ಸೆರೆ ಹಿಡಿದ 75 ಆಯ್ದ ಛಾಯಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿತ್ತು.ಒಟ್ಟು 3.75 ಲಕ್ಷ ರೂ. ಹಣ ಸಂಗ್ರಹವಾಗಿದೆ. ಪ್ರತೀ ಛಾಯಚಿತ್ರಕ್ಕೆ 2 ಸಾವಿರ ರೂ. ಬೆಲೆ ನಿಗಧಿ ಆಗಿತ್ತು.ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗಿತ್ತು. ಮೂರು ದಿನಗಳು ಪ್ರದರ್ಶನ ನಡೆದ ಜಾಗದಲ್ಲಿ ದರ್ಶನ್ ಆಟೋಗ್ರಾಫ್ ನೀಡಿದ್ದಾರೆ. ದರ್ಶನ್ ಈ ಬಗ್ಗೆ ಮಾತನಾಡಿ ನಾವು ಮಾಡುತ್ತಿರುವ ಈ ಕಾರ್ಯ  ಬಂಡೀಪುರ ಅರಣ್ಯ  ಸಂರಕ್ಷಣೆಗೆ ಬಳಸಲಾಗುವುದು.

Edited By

Kavya shree

Reported By

Kavya shree

Comments