‘ಸಾಹೋ’ ಸಾಹುಕಾರ ಈ ನಟಿಯ ಬರ್ತಡೇ ಗೆ ವಿಶ್ ಮಾಡಿದ್ದು ಹೇಗೆ ಗೊತ್ತಾ..?

04 Mar 2019 10:47 AM | Entertainment
180 Report

ಸ್ಟಾರ್’ಗಳ ಹುಟ್ಟು ಹಬ್ಬ ಅಂದ್ರೆ ಸಾಕು ಅಭಿಮಾನಿಗಳು ಪುಲ್ ಖುಷಿಯಾಗುತ್ತಾರೆ… ಅವರ ಹುಟ್ಟುಹಬ್ಬವನ್ನು ಆಚರಿಸುವುದೇ ಒಂಥರಾ ಸಂಭ್ರಮ ಅಭಿಮಾನಿಗಳಿಗೆ…ಇಂದೂ ಬಾಲಿವುಡ್ ಸ್ಟಾರ್ ನಟಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ..ಬಾಲಿವುಡ್’ನ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಇಂದು ತಮ್ಮ 32ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಬಾಹುಬಲಿ ಪ್ರಭಾಸ್ ಶ್ರದ್ದಾಗೆ  ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದ ಶೈಲಿಗೆ ಬಾಹುಬಲಿಯ ಅಭಿಮಾನಿಗಳು ಸಿಕ್ಕಾಪಟ್ಟೆ  ಖುಷಿಯಾಗಿದ್ದಾರೆ..

 

ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಸಾಹೋ ಚಿತ್ರದ ನಟಿಯಾಗಿರುವ ಶ್ರದ್ಧಾ ಕಪೂರ್ ಬರ್ತ್ ಡೇ ಶುಭಕೋರಿ, ಸಿನಿಮಾದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾ ಪ್ರಾರಂಭದಿಂದಲೂ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.. ಆದರೆ ಸಾಹೋದ ಸಣ್ಣ ಝಲಕ್  ಕೂಡ ಅಭಿಮಾನಿಗಳ ಕಣ್ಣಿಗೆ ಕಾಣಿಸಿರಲಿಲ್ಲ.. ಸಾಹೋ ಮೇಕಿಂಗ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು.. ಇದೀಗ ಶ್ರದ್ದಾ ಹುಟ್ಟುಹಬ್ಬದ ಪ್ರಯುಕ್ತ ಆ್ಯಕ್ಷನ್ ಧಮಾಕಾದ ಜೊತೆಗೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ.. ಈ ಮೂಲಕ ಅಭಿಮಾನಿಗಳಿಗೆ ಸಾಹೋ ಚಿತ್ರತಂಡ ಭರ್ಜರಿ ಭೋಜನವನ್ನೆ ನೀಡಿದೆ. ಸಾಹೋ ಸಿನಿಮಾದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಶ್ರದ್ಧಾಕಪೂರ್ ಅಭಿನಯಿಸುತ್ತಿದ್ದಾರೆ. ಸಾಹೋ ಇದೇ ಆಗಸ್ಟ್ 15ರಂದು ತೆರೆ ಮೇಲೆ ಬರಲಿದೆ,, ಅಭಿಮಾನಿಗಳು ಸಾಹೋ ನ ಆಗಮನಕ್ಕಾಗಿ ಕಾಯುತ್ತಿದ್ದಾರೆ.. ಸಿನಿಮಾ ಬಿಡುಗಡೆಯಾದ ಮೇಲೆ ಸಿನಿಮಾ ಯಾವ ರೀತಿಯ ರೆಸ್ಪಾಸ್ ಗಿಟ್ಟಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments