ದಚ್ಚು-ಕಿಚ್ಚ ಒಂದಾಗ್ತಿದ್ದಾರೆ ಈ ಸಿನಿಮಾದ ಮೂಲಕ..!! ಯಾವ ಸಿನಿಮಾ ಗೊತ್ತಾ..?

02 Mar 2019 5:05 PM | Entertainment
751 Report

ಸ್ಟಾರ್ ಹೀರೋಗಳು ಅಂದ್ರೆ ಒಂದೇ ಸಿನಿಮಾದಲ್ಲಿ ಅಭಿನಯ ಮಾಡ್ತಿದ್ದಾರೆ ಎಂದರೆ ಸಾಕು ಅಭಿಮಾನಿಗಳಿಗೆ ಖುಷಿಯೋ ಖುಷಿ… ಇಡೀ ಸ್ಯಾಂಡಲ್ ವುಡ್ ಒಮ್ಮೆ ಆ ಸ್ವಾರ್’ಗಳತ್ತ ತಿರುಗಿ ನೋಡುತ್ತಾರೆ… ಆದರೆ ಸ್ಟಾರ್ ಹೀರೋಗಳು ಒಂದೇ ಸಿನಿಮಾದಲ್ಲಿ ಮಾಡುವುದು ಕಡಿಮೆ… ಕೆಲವೊಮ್ಮೆ ಈ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿದ್ದುಂಟು… ಹಾಗಾಗಿ ಮಲ್ಟಿ ಸ್ಟಾರ್ ಗಳನ್ನು ಹಾಕಿಕೊಮಡು ಸಿನಿಮಾ ಮಾಡುವುದು ಬಲು ಅಪರೂಪ ನಮ್ಮ ಸ್ಯಾಂಡಲ್’ವುಡ್ ನಲ್ಲಿ….

ಮಾಸ್ಟರ್ ಡೈರೆಕ್ಟರ್ ಅಂತಾನೇ ಫೇಮಸ್ ಆಗಿರುವ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ  ಬಹುಭಾಷಾ ಹಾಗೂ ಬಹುನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಗಿದೆ. ಇದರಲ್ಲಿ ಸ್ಪೆಷಲ್ ಏನಿದೆ ಅಂತಿರಾ…? ವಿಶೇಷ ಅಂದ್ರೆ ಈ ಸಿನಿಮಾದ ಟ್ರೇಲರ್ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಮೂಡಿ ಬಂದಿದ್ದು, ನಾಲ್ಕೂ ಭಾಷೆಯ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾರ್ಚ್ 5, 2019ರಂದು ಬಿಡುಗಡೆ ಮಾಡಲಿದ್ದಾರೆ. ಸಿನಿಮಾದಲ್ಲಿ ಬಹುತಾರಾಗಣವಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡವನ್ನು ತಿಳಿಸಿಲ್ಲ…

Edited By

Manjula M

Reported By

Manjula M

Comments