ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಡಿಂಪಲ್ ಕ್ವೀನ್…!!

02 Mar 2019 10:22 AM | Entertainment
1243 Report

ನಮ್ಮ ದೇಶದಲ್ಲಿ  ಜಾತಿ ಎಂಬುದು ಒಂದು ದೊಡ್ಡ ತಲೆ ನೋವಾಗಿ ಬಿಟ್ಟಿದೆ… ಎಲ್ಲಿ ನೋಡಿದರೂ ಜಾತಿ ವಿಚಾರವೇ ಹೆಚ್ಚು…ಕೆಲಸದ ವಿಚಾರದಲ್ಲಿ ಆಗಲೀ, ವಿದ್ಯಾಭ್ಯಾಸದಲ್ಲೆ ಆಗಲಿ ಎಲ್ಲ ಕಡೆಗಳಲ್ಲೂ ಕೂಡ ಜಾತಿಯದ್ದೆ ಮೇಲುಗೈ ಆಗಿರುತ್ತದೆ.. ರಾಜಕೀಯಕಷ್ಟೆ ಸೀಮತವಾಗಿದ್ದ ಜಾತಿ ಇದೀಗ ಎಲ್ಲಾ ಕ್ಷೇತ್ರಗಳನ್ನು ಕೂಡ ಆವರಿಸಿಕೊಂಡಿದೆ. ರಾಜಕಾರಣಿಗಳು ಯಾವಾಗಲೂ ಕೂಡ ಜಾತಿ ಜಾತಿ ಅಂತ ಸಾಯುತ್ತಿರುತ್ತಾರೆ,..ಜಾತಿ ರಾಜಕಾರಣ ನಡೆಸುವುದರಲ್ಲಿ ನಮ್ಮ ರಾಜಕೀಯ ಗಣ್ಯರು ಎತ್ತಿದ ಕೈ… ಇದೀಗ ಜಾತಿ ಎಂಬುದು ಸಿನಿಮಾ ರಂಗಕ್ಕೂ ಅಂಟಿಕೊಂಡಿದೆ.. ಕೆಲವು ನಟ ನಟಿಯರು ಮಾನವೀಯತೆ ಹೆಚ್ಚು ಗೌರವ ನೀಡುತ್ತಾರೆ ಜಾತಿ ವಿಷಯವನ್ನು ತಲೆಗೂ ಕೂಡ ಹಾಕಿಕೊಳ್ಳುವುದಿಲ್ಲ…

ಇತ್ತೀಚಿನ ದಿನಗಳಲ್ಲಿ ಜಾತಿ ಭೇದ ಭಾವದ ಆಲೋಚನೆಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿವೆ… ಸ್ವಲ್ಪ ದಿನಗಳ ಹಿಂದೆ  ನಟಿ ರಚಿತಾ ರಾಮ್ ಪ್ರೆಸ್ ಮೀಟ್ ನಲ್ಲಿ ತಮ್ಮ ಜಾತಿಯ ಬಗ್ಗೆ ಅನಾವಶ್ಯಕವಾಗಿ ಹೇಳಿಕೊಂಡು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ… ಪ್ರೆಸ್ ಮೀಟ್ ನಲ್ಲಿ ಜಾತಿಯ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂಬುದು ಅಭಿಮಾನಗಳ ಮಾತಾಗಿದೆ.. ಸೀತಾ ರಾಮ ಕಲ್ಯಾಣ ಚಿತ್ರ ದ ಬಗ್ಗೆ ಮಾತನಾಡುವಾಗ ನಿಮಗೆ ಅರೆಂಗ್  ಮ್ಯಾರೇಜ್ ಇಷ್ಟನೋ ಅಥವಾ  ಲವ್ ಮ್ಯಾರೇಜ್ ಇಷ್ಟವೆ ಎಂದು ಕೇಳಿದ ಪ್ರಶ್ನೆಗೆ ನಾನು ಗೌಡರ ಹುಡುಗಿ ಅಲ್ಲವೇ ನಾನು ಒಬ್ಬ ಗೌಡರ ಹುಡುಗ ನನ್ನೇ ಮದುವೆ ಯಾಗುವುದು ಎಂದು ಹೇಳಿದರು. ಈ ವಿಷಯ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. ಪ್ರೆಸ್ ಮೀಟ್ ನಲ್ಲಿ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಿ.. ಎಲ್ಲೆಂದರಲ್ಲಿ ಜಾತಿಯ ಬಗ್ಗೆ ಮಾತನಾಡಬೇಡಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Manjula M

Comments