ಆ ಸ್ಟಾರ್ ನಟನೊಬ್ಬನನ್ನು ಬಿಟ್ರೆ ಬೇರೆ ಯಾರ್ ಜೊತೆನೂ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದ ಮಿಲ್ಕಿ ಬ್ಯೂಟಿ…!!

02 Mar 2019 9:37 AM | Entertainment
8996 Report

 ಸಿನಿಮಾ ಅಂದ ಮೇಲೆ ಎಲ್ಲಾ ರೀತಿಯ ದೃಶ್ಯಗಳು ಇರುವುದು ಕಾಮನ್,, ರೊಮ್ಯಾಂಟಿಕ್,ಸರಸ,ವಿರಸ ಎಲ್ಲವೂ ಸಿನಿಮಾಗಳಲ್ಲಿ ಇರುತ್ತದೆ.. ಅದರಲ್ಲೂ ರೊಮ್ಯಾಂಟಿಕ್ ಸಿನಿಮಾ ಅಂದ್ರೆ ನೋಡುಗರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ…ಅದರಲ್ಲೂ ಕಿಸ್ಸಿಂಗ್ ಸೀನ್ ಇದ್ದರಂತೂ ಮುಗಿದೇ ಹೋಯಿತು… ಸ್ಟಾರ್ ನಟ ನಟಿಯರ ಕಿಸ್ಸಿಂಗ್ ನೀನ್ ನೋಡೋಕೆ ಕೆಲವರು ಥಿಯೇಟರ್ ಗೆ ಹೋಗ್ತಾರೆ… ಆದರೆ ಕೆಲವು ನಟ ನಟಿಯರು ಕಿಸ್ಸಿಂಗ್ ಸೀನ್ ಮಾಡಲು ಇಷ್ಟ ಪಡುವುದಿಲ್ಲ… ಅದರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎಂಬ ನಿಯಮ ಹಾಕಿಕೊಂಡಿದ್ದರು..…

ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಇದೀಗ ತಾವೇ ಹಾಕಿಕೊಂಡಿದ್ದ ನಿಯಮವನ್ನು ಮುರಿಯಲು ಮುಂದಾಗಿದ್ದಾರಂತೆ… ತಮನ್ನಾ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿಯೇ ಯಾವ ನಟರೊಂದಿಗೆ ಕಿಸ್ಸಿಂಗ್ ಸೀನ್’ಗಳಲ್ಲಿ ಕಾಣಿಸಿಕೊಂಡಿಲ್ಲ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಅವರೊಂದಿಗೆ ನಟಿಸಿದರೆ ಈ ನಿಯಮವನ್ನು ಮುರಿಯುವುದಾಗಿ ತಮನ್ನಾ ಭಾಟಿಯಾ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಫಿಲಂ ಫೇರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಮಾತನಾಡಿದ ತಮನ್ನಾ ಹದಿನಾಲ್ಕು ವರ್ಷಗಳ ವೃತ್ತಿ ಜೀವನದಲ್ಲಿ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಹೃತಿಕ್ ರೋಷನ್ ಅವರ ಅಭಿಮಾನಿಯಾಗಿರುವ ನಾನು ಕಿಸ್ಸಿಂಗ್ ಕುರಿತಾದ ನಿಯಮ ಮುರಿಯುವುದಾಗಿ ಸ್ನೇಹಿತೆಯರೊಂದಿಗೆ ಹೇಳಿಕೊಂಡು ಹಾಸ್ಯ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಅಷ್ಟೆ ಅಲ್ಲದೇ ಸಾಮಾಜಿಕ ಜಾಲತಾಣ ಇನ್’ಸ್ಟಾಗ್ರಾಂನಲ್ಲಿ ಹೃತಿಕ್ ಜೊತೆಗಿರುವ ಫೋಟೋ ಪೋಸ್ಟ್ ಮಾಡಿರುವ ಅವರು, ಹೃತಿಕ್ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಎಂದು ತಮನ್ನಾ ತಿಳಿಸಿಕೊಂಡಿದ್ದಾರೆ…

Edited By

Manjula M

Reported By

Manjula M

Comments