ನಾನ್ ಡಮ್ಮಿ ಹೀರೋ ಸರ್, ನಿಜವಾದ ಹೀರೋ ಅವ್ರು, ಗ್ರೇಟ್ ಸರ್ ಅವ್ರು ಗ್ರೇಟ್ : ಚಾಲೆಂಜಿಂಗ್ ಸ್ಟಾರ್ ಹೇಳಿದ್ಯಾರಿಗೆ…!!!

01 Mar 2019 1:48 PM | Entertainment
330 Report

ಅಂದಹಾಗೇ ಚಾಲೆಂಜಿಂಗ್ ಸ್ಟಾರ್ ಇಂದು ಸ್ಯಾಂಡಲ್’ವುಡ್ ಆಳುತ್ತಿರುವ ನಂ.1 ನಾಯಕ. ಸದ್ಯ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಡುತ್ತಾ ಅಭಿಮಾನಿಗಳನ್ನು ರಂಜಿಸ್ತಾ ಇದ್ದಾರೆ ಈ ಖಳನಟನ ಮಗ. ಹಾಲು ಮಾರಿ ಜೀವನ ಮಾಡುತ್ತಿದ್ದ ದಚ್ಚು, ಫಸ್ಟ್ ಟೈಮ್ ಇಂಡಸ್ಟ್ರಿಗೆ ಬಂದಿದ್ದು ಲೈಟ್ ಬಾಯ್ ಆಗಿ. ಆದರೆ ಈಗ ದರ್ಶನ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ಟಾಪ್ ಮೋಸ್ಟ್ ನಟ. ಸಿನಿಮಾ ವಿಚಾರದಲ್ಲಿ ಅಷ್ಟೇ ಅಲ್ದೇ ದರ್ಶನ್ ಸಮಾಜ ಸೇವೆಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದಾರೆ.

ಹೇಳಿ-ಕೇಳಿ ದರ್ಶನ್ ಗೆ ಪ್ರಾಣಿ-ಪಕ್ಷಿಗಳೆಂದರೇ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿಯೇ ಕಾಡನ್ನೇ ದತ್ತು ತೆಗೆದುಕೊಂಡಿದ್ದಾರೆ ಇರಲೀ ಬಿಡಿ, ನಾವು ದರ್ಶನ್ ಅವರನ್ನು ಎಷ್ಟೇ ಹೊಗಳಿದ್ರೂ ಹೀರೋ ಅಂತಾ ಕೊಂಡಾಡಿದ್ರೂ ದರ್ಶನ್ ಈ ಬಗ್ಗೆ ಹೇಳಿದ್ದೇನು ಗೊತ್ತಾ..?ನಾನು ಡಮ್ಮಿ ಹೀರೋ ಸರ್,ರಿಯಲ್ ಹೀರೋ ಅವ್ರು ಸರ್ ಅಂತಾ ಅವರ ಕಡೆ ಬೆರಳು ಮಾಡಿ ಹೇಳಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ.ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೋ,. ಮೈಸೂರಿನ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ ನಟ ದರ್ಶನ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ವಿಂಗ್ ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೋ, ನಾವೆಲ್ಲಾ ಡಮ್ಮಿ. ಇನ್ನೊಬ್ಬರ ನೆಲದಲ್ಲಿ ನಿಂತು ಅಷ್ಟು ಧೈರ್ಯವಾಗಿರುವ ಅವರ  ಗ್ರೇಟ್ ಹಾಗೂ ಅವರಿಗೆ ಹ್ಯಾಟ್ಸಾಫ್ ಹೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

ಛಾಯಚಿತ್ರ ಪ್ರದರ್ಶನವನ್ನು ಒಂದು ಒಳ್ಳೆಯ ಉದ್ದೇಶದಿಂದ ಆಯೋಜಿಸಿದ್ದೇವೆ, ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಬಳಸಲಾಗುವುದು ಎಂದು  ಹೇಳಿದ್ದಾರೆ. ಅಂದಹಾಗೇ ನನಗೆ ಫೊಟೋ ತೆಗೆಯೋಕೆ ಬರ್ತಾ ಇರಲಿಲ್ಲ, ಜೊತೆಗ ಅದರ ಹುಚ್ಚು ಕೂಡ ನನಗಿರಲಿಲ್ಲ. ನನ್ನ ಸ್ನೇಹಿತರು ಕಲಿಸಿಕೊಟ್ಟರು. ಬಳಿಕ ನಾನು ಕಬಿನಿ, ಕೇರಳ ಸೇರಿದಂತೆ ಹಲವೆಡೆ ಓಡಾಡಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಕಾಡಿನಲ್ಲಿ ಪ್ರಾಣಿಗಳನ್ನು ನೋಡುವುದೇ ಒಂದು ಚಾಲೆಂಜ್. ಆ ಅನುಭವದ ಮುಂದೆ ಬೇರೆ ಏನು ಇಲ್ಲ. ಅಪರೂಪದ ಕ್ಷಣಗಳಿಗೆ ಕಾಡಿನ ಪ್ರವಾಸ ಸಾಕ್ಷಿಯಾಗಿದೆ ಎಂದರು.ಕಾಡನ್ನು ಉಳಿಸದಿದ್ದರೇ ಖಂಡಿತಾ ನಾವು ಬದುಕಿರೋವಾಗಲೇ ಪ್ರಾಣಿ-ಪಕ್ಷಿಗಳನ್ನು ಫೋಟೋಗಳಲ್ಲಿ ನೋಡಿಕೊಂಡು ಇರಬೇಕಾಗುತ್ತದೆ. ಕಾಡಿದ್ದರೇ ನಾಡು, ದಯಮಾಡಿ ನಾವೆಲ್ಲಾ ಕಾಡಿನ ಸಂರಕ್ಷಣೆ ಮಾಡೋಣ ಎಂದು ಮನವಿ ಮಾಡಿಕೊಂಡರು. ಇನ್ನು ಸಿನಿಮಾ ಯಜಮಾನ ರಿಲೀಸ್ ಆಗಿದೆ. ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ. ಎರಡು –ಮೂರು ದಿನ ಆದಮೇಲೆ ನಾನು ಸಿನಿಮಾ ಬಗ್ಗೆ ಮಾತನಾಡುತ್ತೇನೆ, ಸಿನಿಮಾ ನೋಡಿ ನೀವೆಲ್ಲಾ ಎಂದಿದ್ದಾರೆ.

Edited By

Kavya shree

Reported By

Kavya shree

Comments