ತನ್ನೆಲ್ಲಾ ಆಸ್ತಿಯನ್ನು ಹುತಾತ್ಮ ಯೋಧರಿಗೆ ದಾನ ಮಾಡಿದ ಟಾಪ್ ಸ್ಟಾರ್ ನಟ ಯಾರು ಗೊತ್ತಾ..?

01 Mar 2019 11:41 AM | Entertainment
1116 Report

 ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಿರುವ ವೀರ ಯೋಧರಿಗೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ಬದುಕಿನ   ಆಸೆ ಬಿಟ್ಟು ಹಗಲು- ರಾತ್ರಿ ಸೈನಿಕರು ನಮಗೆ ಕಾವಲಾಗಿದ್ದಾರೆ. ನಾವಿಲ್ಲಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರು. ಕನ್ನಡ ಸೇರಿದಂತೇ, ಬಹುಭಾಷಾ ನಟರೊಬ್ಬರು ವೀರ ಯೋಧರಿಗೆ ತನ್ನ ನೂರಾರು ಎಕರೆ ಭೂಮಿಯನ್ನು ದಾನ ಕೊಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಅವರು ಯಾರು. ಆ ಟಾಪ್ ಸ್ಟಾರ್ ನಟ ಎಷ್ಟು ಎಕರೆ ಜಮೀನು ಕೊಟ್ಟಿದ್ದಾರೆ, ಗೊತ್ತಾ….?

ತಮ್ಮನ್ನೆಲ್ಲಾ ಕಾಯುವ ವೀರಯೋಧರಿಗೆ, ತನ್ನ 170 ಎಕರೆ ಜಮೀನನ್ನು ದಾನ ಕೊಟ್ಟ ನಟ ಬೇರೆ ಯಾರು ಅಲ್ಲ. ಕನ್ನಡ, ತೆಲುಗು, ಇನ್ನೂ ಹಲವು ಭಾಷೆಗಳಲ್ಲಿ ಮಿಂಚಿದ್ದ ನಂ.1 ಸ್ಟಾರ್ ನಟ ಸುಮನ್ ಅವರು. ಹೈದರಬಾದಿನ ಸಮೀಪದ ಭುವನಗಿರಿಯಲ್ಲಿದ್ದ ತನ್ನ 170 ಎಕರೆ ಭೂಮಿಯನ್ನು ಹುತಾತ್ಮ ಯೋಧರಿಗೆ ಕೊಟ್ಟಿದ್ದಾರೆ.  ಜನ ತುಂಡು ಭೂಮಿಗಾಗಿ ಕಚ್ಚಾಡುವ ಈ ಕಾಲದಲ್ಲಿ  ದೇಶಕ್ಕಾಗಿ ಹೋರಾಡುವ ಯೋಧರಿಗಾಗಿ ಕೊಟ್ಟಿರುವ ಸುಮನ್ ಅವರ ಹೃದಯ ಶ್ರೀಮಂತಿಕೆಯನ್ನು ಮೆಚ್ಚಲೇಬೇಕು. ಹೈದರಬಾದಿನ ಭುವನಗಿರಿಯೆಂದರೇ ಕೇಳಬೇಕೇ…ಏನಿಲ್ಲ ಅಂದ್ರೂ ಎಕರೆಗೆ ಹತ್ತಾರು ಲಕ್ಷ ರುಪಾಯಿಗಳು ಬೆಲೆ ಬಾಳುತ್ತದೆ.

ಸುಮನ್ ಅವರು ವೀರ ಯೋಧರಿಗೆ ಸಹಾಯ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ವೀರ ಯೋಧರಿಗೆ ತಮ್ಮ ಕಾಣಿಕೆಯನ್ನು ಕೊಟ್ಟಿದ್ದಾರೆ. ನಟ ಸುಮನ್,  ಈ ಬಗ್ಗೆ ಹೇಳುವ ಮಾತು ಕೇಳಿದ್ರೆ ಶಾಕ್ ಆಗ್ತೀರಾ.. ಇಷ್ಟು ಬೆಲೆ ಬಾಳುವ ಜಮೀನು ಕೊಟ್ಟಿದ್ದೀರಲ್ಲಾ ಎಂದು ಯಾರಾದ್ರು ಕೇಳಿದ್ರೆ, ದೇಶಕ್ಕಾಗಿ ಅವರು ಮಾಡುವ ಕೆಲಸದ ಮುಂದೆ ಇದು ಏನೇನೂ ಅಲ್ಲ, ಬಿಡಿ ಎಂದಿದ್ದಾರೆ. ಒಟ್ಟಾರೆ ಸಿನಿಮಾಗಳಲ್ಲಿ ರೀಲ್ ಡೈಲಾಗ್ಗಳನ್ನು ಹೇಳಿಕೊಂಡು ಅಭಿಮಾನಿಗಳಿಂದ ಶಿಳ್ಳೆ-ಚಪ್ಪಾಳೆಗಿಟ್ಟಿಸಿಕೊಳ್ಳುವ ಸ್ಟಾರ್ ನಟರ ಮಧ್ಯೆ ಸುಮನ್  ಬಹು ಎತ್ತರದ ಸ್ಟಾರ್ ನಟರಾಗಿ ಕಾಣಿಸಿಕೊಳ್ಳುತ್ತಾರೆ. ರೀಲ್' ನಲ್ಲಷ್ಟೇ ಅಲ್ಲಾ ರಿಯಲ್ ನಲ್ಲಿ ನಾನು ಹೀರೋನೇ ಎಂದು ಸಾಭೀತು ಮಾಡಿದ್ದಾರೆ. ನಟ ಸುಮನ್ ಅವರ ಈ ಹೃದಯ ಶ್ರೀಮಂತಿಕೆ ಕಂಡು ಭಾರತೀಯರು ಅವರನ್ನು ಮೆಚ್ಚಿ  ಕೊಂಡಾಡಿದ್ದಾರೆ..

Edited By

Kavya shree

Reported By

Kavya shree

Comments