ಸಾವಿನ ಬಗ್ಗೆ ಮಾತನಾಡುತ್ತಾ ವೇದಿಕೆ ಮೇಲೆ ಗಳಗಳನೆ ಅತ್ತಿದ್ಯಾಕೆ ನಟ ಬುಲೆಟ್ ಪ್ರಕಾಶ್…?!!!

28 Feb 2019 10:13 AM | Entertainment
884 Report

ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತಿದ್ದ ಬುಲೆಟ್ ಪ್ರಕಾಶ್ ಮಾತನಾಡುತ್ತಲೇ ಜೋರಾಗಿ ಕಣ್ಣೀರು ಸುರಿಸಿದ್ರು. ನನ್ನ ಪ್ರಾಣ ಹೋಗಲೀ ಎಂದು ಭಾವುಕರಾಗಿ ನುಡಿದ್ರು. ಅಂತದ್ದೇನಾಯ್ತು  ಬುಲೆಟ್ ಪ್ರಕಾಶ್’ಗೆ. ಕೆಲ ದಿನಗಳ ಹಿಂದಷ್ಟೇ ನಟ ಬುಲೆಟ್ ಪ್ರಕಾಶ್ ತೀರಿಹೋಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸೌಂಡು ಮಾಡಿತ್ತು. ನಟ ಬುಲೆಟ್ ಪ್ರಕಾಶ್ ಅನಾರೋಗ್ಯವಾಗಿ  ತುಂಬಾ ದಿನಗಳ ಕಾಲ ಹಾಸಿಗೆ ಹಿಡಿದಿದ್ದರು. ಇದನ್ನೇ ಕೆಲ ಕಿಡಿಗೇಡಿಗಳು ಬುಲೆಟ್ ಪ್ರಕಾಶ್  ಚಿತ್ರರಂಗಕ್ಕೆ ಕೇವಲ ನೆನಪು ಅಷ್ಟೆ ಎಂದಿದ್ದರು. ಈ ಸುದ್ದಿ ಹಬ್ಬುತ್ತಿದ್ದಂತೇ ಬುಲೆಟ್ ಪ್ರಕಾಶ್ ವಿಡಿಯೋ ಮುಖಾಂತರ ನಾನು ಸತ್ತಿಲ್ಲ, ಬದುಕಿದ್ದೇನೆ ನನ್ನ ಬಗ್ಗೆ ಯಾರೋ ಕಿಡಿಗೇಡಿಗಳು ಈ ಥರಾ ಅಪಪ್ರಚಾರ ನಡೆಸಿದ್ದಾರೆ ಅಷ್ಟೆ ಎಂದು ಸ್ಪಷ್ಟೀಕರಣ ನೀಡಿದ್ದರು. ಕೆಲ ಸಿನಿಮಾಗಳಲ್ಲಿ ನೀವು ನೋಡಿದರೇ ಅಲ್ಲಿ ಬುಲೆಟ್ ಪ್ರಕಾಶ್ ಇದ್ದೇ ಇರುತ್ತಿದ್ದರು. ಬುಲೆಟ್ ಪ್ರಕಾಶ್ ಎಂಥಾ ಭಾವನಾತ್ಮ ಕ ಜೀವಿ ಗೊತ್ತೇ...?

ಅವರ ಹಾಸ್ಯಕ್ಕೆ ಫಿದಾ ಆಗದೇ ಇರುವವರೇ ಇಲ್ಲ. ಅವರ ಡೈಲಾಗ್, ಅವರ ದೇಹತೂಕ, ಕಪ್ಪು ಬಣ್ಣದಿಂದಲೇ ಬಹಳ ಫೇಮಸ್. ಆದರೆ ಸದ್ಯ ಚಿತ್ರರಂಗದಿಂದ ದೂರವಾಗಿದ್ದಾರೆ. ಅಭಿಮಾನಿಗಳನ್ನು ತಮ್ಮ ಹಾಸ್ಯ ಸಂಭಾಷಣೆ ಮೂಲಕ ರಂಜಿಸುತ್ತಿದ್ದವರು ಇದೀಗ ಬಣ್ಣದ ಲೋಕದಿಂದ ದೂರ ಸರಿದಿದ್ದಾರೆ. ಅದಕ್ಕೆ ಬಹುಮುಖ್ಯ ಕಾರಣ ಅವರ ಆರೋಗ್ಯ ಕೈ ಕೊಟ್ಟಿರುವುದು. ಕೆಲದಿನಗಳ ಹಿಂದೆ ಚಿಕಿತ್ಸೆಗೆ ಹಣವಿಲ್ಲದೇ ಪರದಾಡಿದ ಸ್ಥಿತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಮತ್ತೇ ಬುಲೆಟ್​ ಆರೋಗ್ಯವಾಗಿದ್ದಾರೆ. ದೇಹ ತೂಕ ಕಡಿಮೆ ಮಾಡಿಕೊಂಡು ಕ್ಯಾಮರಾಗಳ ಮುಂದೆ ಹಾಜರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಕಾಶ್​ ಕನ್ನಡದ ಮಜಾ ಭಾರತ ರಿಯಾಲಿಟಿ ಶೋಗೆ ಬಂದಿದ್ದರು. ಅದೇಕೋ ಏನೋ ಸ್ವಲ್ಪ ಜಾಸ್ತಿನೇ ಭಾವುಕರಾಗಿ ಕಣ್ಣೀರು ಸುರಿಸಿದ್ರು. ವೇದಿಕೆ ಮೇಲೆ ಮೈಕ್ ಹಿಡಿದು ಕಲೆಯ ಬಗ್ಗೆ  ಮಾತನಾಡುತ್ತಾ..ಕಲೆ ಯಾರಪ್ಪನ ಸ್ವತ್ತು ಅಲ್ಲ, ಯಾವುದೇ ಕಾರಣಕ್ಕೂ ಅದನ್ನು ಬಚ್ಚಿಡಲು ಸಾಧ್ಯವೂ ಇಲ್ಲ. ಕಲೆಯಂತೆ ಕಲಾವಿದನಿಗೂ ಸಾವಿಲ್ಲ. ಕಲಾ ಸರಸ್ವತಿ ನಮ್ಮನ್ನ ಅವಳ ಒಡಲಿನಲ್ಲಿ ಹಾಕಿಕೊಂಡಿದ್ದಾರೆ ಎಂದೇಳುತ್ತಾ....

ಜೀವನದಲ್ಲಿ  ಸ್ವಲ್ಪ ಲಯ ತಪ್ಪಿದ್ರೂ ಜೀವನವೇ ಸ್ಪಾಯಿಲ್ ಆಗಿ ಬಿಡುತ್ತೆ. ನಾನೇ ಒಂದು ಉದಾಹರಣೆ. ನನಗೆ ಬಂದಿರುವ ನೋವು ಯಾವ ಕಲಾವಿದರಿಗೂ ಬರಬಾರದು ಎನ್ನುತ್ತಲೇ ಗದ್ಘದಿತರಾದ ಬುಲೆಟ್ ಪ್ರಕಾಶ್ ಎಲ್ರಿಗೂ ದೇವರು ಒಳ್ಳೆಯದು ಮಾಡಲೀ ಎಂದರು. ಮುಂದುವರೆದು ಮಾತನಾಡುತ್ತಾ ಕಲಾವಿದರು ಕಲೆಯನ್ನು ತುಂಬಾ ಪ್ರತೀಸುತ್ತಾರೆ. ಅವರಿಗೆ ನಟನೆ ಬಿಟ್ಟು ಬದುಕಲು ಆಗಲ್ಲ, ನನಗೂ ಕೂಡ ಕಲೆ ಇಲ್ಲದೇ ಬದುಕು ನಡೆಸಲು ಸಾಧ್ಯವೇ ಇಲ್ಲ. ಮೇಕಪ್ ಹಚ್ಚಲಿಲ್ಲ  ಎಂದರೇ ನನಗೆ ಪ್ರಾಣವೇ ಹೋದಂತಾಗುತ್ತದೆ. ದೇವರು ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದ್ದಾನೆ. ನನ್ನ ಉಸಿರುವವರೆಗೂ ಮುಖಕ್ಕೆ ಬಣ್ಣ ಹಚ್ಚುವೆ. ಮೇಕಪ್ ನಲ್ಲಿಯೇ ನನ್ನ ಪ್ರಾಣ ಹೋಗಲೀ ಎಂದು ಬಯಸುವೇ ಎಂದು ಭಾವುಕರಾಗಿ ಕಣ್ಣೀರು ಸುರಿಸಿದ್ರು. ಬುಲೆಟ್ ಪ್ರಕಾಶ್ ನಟನೆಯನ್ನು ತುಂಬಾ ಪ್ರೀತಿಸುವ ವ್ಯಕ್ತಿ. ನನ್ನ ಸಾವು ಮೇಕಪ್ನಲ್ಲಿಯೇ ಆಗಬೇಕೆಂಬುದು ನನ್ನ ಬಯಕೆ ಎಂದು ಹೇಳುವಾಗ ನಟ ಬುಲೆಟ್ ಪ್ರಕಾಶ್ ಕಣ್ಣಾಲಿಗಳು ತುಂಬಿದ್ದವು.

Edited By

Kavya shree

Reported By

Kavya shree

Comments