ಹುತಾತ್ಮ ಯೋಧ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಗಾನ ಕೋಗಿಲೆ..!

27 Feb 2019 5:20 PM | Entertainment
198 Report

ಪುಲ್ವಾಮಾ ದಾಳಿಯಿಂದಾಗಿ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲು ಅನೇಕ ಭಾರತೀಯರು ಮುಂದೆ ಬರುತ್ತಿದ್ದಾರೆ. ಸಿನಿಮಾ, ರಾಜಕೀಯ ಎನ್ನದೇ ಎಲ್ಲಾ ವಲಯದವರು ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ನಮಗಾಗಿ ನೆತ್ತರು ಹರಿಸಿ ತನ್ನ ಕುಟುಂಬವನ್ನು ಅನಾಥರನ್ನಾಗಿ ಬಿಟ್ಟು ಹೋದ ಅನೇಕ ಯೋಧರನ್ನು ನೆನದು ಕಣ್ಣೀರಿಟ್ಟಿದ್ದಾರೆ ಗಾನ ಕೋಗಿಲೆ ಲತಾ ಮಂಗೇಶ್ಕರ್. ತಾವು ಭಾರತೀಯ ಸೈನಿಕರ ಅಭ್ಯದಯಕ್ಕಾಗಿ, ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ತನ್ನ ಕೈಲಾದ ಸಹಾಯ ಮಾಡುತ್ತಿರುವೆ ಎಂದಿದ್ದಾರೆ. ಒಂದು ಕೋಟಿ ಹಣದ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ಕುಟುಂಬಗಳಿಗೆ ನಮ್ಮ ಚಿತ್ರೋದ್ಯಮ ಸ್ನೇಹಿತರು ನೆರವು ನೀಡಿ ಗೌರವ ಸಲ್ಲಿಸಿದ್ದಾರೆ. ನನ್ನ ಕೈಲಾದ ಸಹಾಯವನ್ನು ನೀಡಲು ನಾನು ಮುಂದೆ ಬಂದಿದ್ದೇನೆ ಎಂದರು. ಅಂದಹಾಗೇ ನಾನು ಇದನ್ನು ನನ್ನ ಅಪ್ಪ ದೀನನಾಥ್ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ದಿನವಾದ ಏಪ್ರಿಲ್ 24ರಂದು ಈ ಹಣವನ್ನು ನಾನು ಸೈನಿಕರ ಪರವಾಗಿ ಭಾರತೀಯ ಸೆೇನೆಗೆ ನೀಡಲಿದ್ದೇನೆ”  ಎಂದು ತಿಳಿಸಿದ್ದಾರೆ. ನಾನು ಕೊಡುವ ಹಣ ವೀರಯೋಧರ ಕುಟುಂಬಗಳಿಗೆ ಕಣ್ಣೊರೆಸುವ ಕೆಲಸವಾಗಬೇಕು. ಈ ದೇಶಕ್ಕಾಗಿ ಬಹಳಷ್ಟು ವೀರ ಯೋಧರು ಶ್ರಮಿಸಿದ್ದಾರೆ. ಈ ಹಣವನ್ನು ನಾನು ಸೈನಿಕರ ಅಭ್ಯುದಯಕ್ಕಾಗಿ ಕೊಡಲಿದ್ದು ಅದನ್ನು, ಸೈನಿಕರ ಅಭ್ಯುದಯಕ್ಕಾಗಿಯೇ ವಿನಿಯೋಗಿಸ ಬೇಕು ಎಂದಿದ್ದಾರೆ.  ಉಗ್ರರ ಮೇಲೆ ಏರ್​​ಸ್ಟ್ರೈಕ್​ ನಡೆಸುವ ಮೂಲಕ ಇಂಡಿಯನ್ ಆರ್ಮಿ ಪಾಕ್‌ಗೆ ತಕ್ಕ ಉತ್ತರ ಕೊಟ್ಟ ಬಗ್ಗೆ ಟ್ವಿಟರ್‌ನಲ್ಲಿ ಹೆಮ್ಮೆಯಿಂದ ಜೈ ಹಿಂದ್ ಜವಾನ್ ಜೈ ಹಿಂದ್ ಕಿಸಾನ್‌ ಅಂತಾ ಬರೆದು ತಮ್ಮ ದೇಶಭಕ್ತಿ ಮೆರೆದಿದ್ದಾರೆ.

Edited By

Kavya shree

Reported By

Kavya shree

Comments