ಕೆಜಿಎಫ್ ಪರ ಬ್ಯಾಟಿಂಗ್ ಬೀಸಿದ ‘ಯಜಮಾನ’ ..!! ಕಾರಣ ಏನ್ ಗೊತ್ತಾ..?

27 Feb 2019 11:17 AM | Entertainment
860 Report

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಬಹುನಿರೀಕ್ಷಿತ ಸಿನಿಮಾದ ಯಜಮಾನ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ… ವರ್ಷಗಳಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು..ಯಾಕಂದ್ರೆ ದರ್ಶನ್ ಅವರ ಯಾವುದೇ ಸಿನಿಮಾವು ಕೂಡ ರಿಲೀಸ್  ಆಗಿರಲಿಲ್ಲ. ಇದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತು… ಆದರೆ ಇದೀಗ ಯಜಮಾನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ..ಯಜಮಾನ ರಿಲೀಸ್ ಗೆ ರೆಡಿಯಾಗಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಜಿಎಫ್ ಸಿನಿಮಾ ಪರ ಬ್ಯಾಟಿಂಗ್ ಮಾಡಿದ್ದಾರೆ.

ದರ್ಶನ್‌ ಅಭಿನಯದ 'ಯಜಮಾನ' ಸಿನಿಮಾ ಮಾರ್ಚ್ 1ರಂದು ತೆರೆಗೆ ಬರುತ್ತಿದೆ. ಬಹು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಇದಾಗಿದೆ..ಈ ಸಮಯದಲ್ಲಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ದಚ್ಚು ಬಿಂದಾಸ್ ಆಗಿಯೇ ಉತ್ತರ ನೀಡಿದ್ದಾರೆ.. ಯಜಮಾನ ಸಿನಿಮಾ ಮೇಲೆ ದರ್ಶನ್ ಹೆಚ್ಚು ಅಭಿಮಾನವನ್ನು ತೋರಿಸಿದ್ದಾರೆ.. ನನ್ನ ಎಲ್ಲಾ ಸಿನಿಮಾಗಿಂತ ಈ ಸಿನಿಮಾದ ಮೇಲೆ ನನಗೆ ಒಲವು ಜಾಸ್ತಿ ಎಂದಿದ್ದಾರೆ.ಅಷ್ಟೆ ಅಲ್ಲದೆ ಬಾಹುಬಲಿ ಇಷ್ಟವೋ ಅಥವಾ ಕೆಜಿಎಫ್ ಇಷ್ಟವೋ ಎಂದು ಕೇಳಿದಕ್ಕೆ ಕೆಜಿಎಫ್ ಇಷ್ಟ.. ಏಕೆಂದರೆ ಅದು ನಮ್ಮ ಕನ್ನಡ ಸಿನಿಮಾ ಎಂದು ಹೇಳಿ ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟ್ ಬೀಸಿದ್ದಾರೆ.. ಇದರಲ್ಲೆ ಗೊತ್ತಾಗುತ್ತೆ ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ನಮ್ಮ ಕನ್ನಡ ಸಿನಿಮಾ ಕಂಡರೆ ಎಷ್ಟು ಪ್ರೀತಿ ಎಂದು.. ಸ್ಟಾರ್ ವಾರ್ ಅನ್ನೋದೆಲ್ಲಾ ಅಭಿಮಾನಿಗಳು ಸುಮ್ಮೆನೆ ಹೇಳೋದು ಅಷ್ಟೆ.. ಆದರೆ ಸ್ಯಾಂಡಲ್ ವುಡ್ ಯಾವತ್ತಿಗೂ ಕನ್ನಡ ಸಿನಿಮಾಗಳನ್ನು ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಬಹುದು. ‘ಯಜಮಾನ’ನ ಆಗಮನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಮಾರ್ಚ್ 1 ರ ವರೆಗೂ ಯಜಮಾನನ ಅಬ್ಬರ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments