ಆ ಹೀರೋಯಿನ್'ನನ್ನು ಫಸ್ಟ್ ಟೈಮ್ ನೋಡಿ ನಾನೇ ಶಾಕ್ ಆದೆ : ಹೀಗಂತಾ ಕರ್ನಾಟಕದ ಕ್ರಶ್ ಹೇಳಿದ್ಯಾರಿಗೆ..?!!!

27 Feb 2019 9:57 AM | Entertainment
1514 Report

ಅಂದಹಾಗೇ ಸದ್ಯ  ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಸಿನಿಮಾ ಕ್ಷೇತ್ರದಲ್ಲಿ ಬಹು ಬೇಡಿಕೆ ನಟಿ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡವಷ್ಟೇ ಅಲ್ಲ,  ಟಾಲಿವುಡ್ ನಲ್ಲೂ ನಂ.1 ಸ್ಥಾನಗಿಟ್ಟಿಸಿಕೊಂಡಿದ್ದಾರೆ.  ಆದರೆ ಒಬ್ಬ ಹೀರೋಯಿನ್ ಮತ್ತೊಬ್ಬ ನಾಯಕಿಯ ಬಗ್ಗೆ ಮಾತನಾಡೋದು ಕಾಮನ್ ಏನಲ್ಲಾ ಬಿಡಿ. ಈಗ ಸಾನ್ವಿ ಯಾರ ಬಗ್ಗೆ ಮಾತನಾಡಿದ್ದಾರೆ, ಆಕೆಯನ್ನು ಫಸ್ಟ್ ಟೈಮ್ ನೋಡಿ ಶಾಕ್ ಆದೆ ಎಂದು ಕೊಡಗಿನ ಬೆಡಗಿ ಹೇಳಿದ್ಯಾರಿಗೆ. ಆ ಹೀರೋಯಿನ್ ರೇಂಜ್ ಆ ಲೆವೆಲ್'ನಲ್ಲಿದ್ಯಾ ಹೀಗಂತಾ ಪ್ರಶ್ನೆ ಮೂಡೋದು ಕಾಮನ್. ಹೌದು ಈಗಾಗಲೇ ಆಕೆ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಭಾರೀ ಮಾತಾಗುತ್ತಿದೆ. ಕನ್ನಡದಲ್ಲಿ ಮಾಡಿದ್ದೇ ಎರಡೇ ಸಿನಿಮಾಗಳಾದ್ರು ಈ ಪರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ವಿಶೇಷವೇ ಸರಿ.

ಅದು ಆ ಎರಡು ಸಿನಿಮಾಗಳು ರಿಲೀಸ್ ಆಗಬೇಕಿದೆ. ರಶ್ಮಿಕಾ ಮಂದಣ್ಣ ಮತ್ತು ಆಕೆ ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಜಮಾನ  ಸಿನಿಮಾದಲ್ಲಿ ನಟಿಸ್ತಾ ಇದ್ದಾರಂತೆ. ಕೆಲ ದಿನಗಳ ಹಿಂದಷ್ಟೇ ನಾಯಕಿ ತಾನ್ಯ ಹೋಪ್ ಬಗ್ಗೆ ಭಾರೀ ಸುದ್ದಿಯಾಗಿತ್ತು. ಸೆಟ್ನ'ಲ್ಲಿ ರಶ್ಮಿಕಾ, ತಾನ್ಯ ಹೋಪ್ ರನ್ನು ಫಸ್ಟ್ ಟೈಮ್ ನೋಡಿ ಬೆಕ್ಕಸ ಬೆರಗಾದ್ರಂತೆ. ಆಕೆ ನೋಡೋಕೆ ಎಷ್ಟು ಸುಂದರವೋ, ಅವರ ಬಿಹ್ವೇಯರ್ ಕೂಡ ಅಷ್ಟೆ ಪರ್ಫೆಕ್ಟ್ ಎಂದಿದ್ದಾರೆ ಸಾನ್ವಿ. ಆಕೆಯನ್ನು ನೋಡಿ ನಾನು ನಿಜಕ್ಕೂ ಶಾಕ್ ಆದೆ. ತಾನ್ಯ ಹೋಪ್ ಮತ್ತು ನಾನು ಒಂದೇ ಸಿನಿಮಾದಲ್ಲಿ  ನಟಿಸ್ತಾಯಿದ್ರು ನಾನ್ಯವತ್ತು ಅವರನ್ನು  ಮೀಟ್ ಮಾಡಿರಲೇ ಇಲ್ಲ. ಶೂಟಿಂಗ್ ಸೆಟ್’ನಲ್ಲಿ   ಒಮ್ಮೆ ಕೂತಾಗ ಹೀಗೆ ಬಂದು ತಾನ್ಯಾ ನೇ ನನ್ನನ್ನು ಮಾತಾಡಿಸಿದ್ಲು. ಅವ್ಳು ಕೇಳಿದ ಮೊದಲ ಪ್ರಶ್ನೆ, ನೀ ಶಾಪಿಂಗ್ ಎಲ್ಲಿ ಮಾಡ್ತಿಯಾ? ಯಾವ ಪರ್ಫ್ಯೂಮ್ ಯೂಸ್ ಮಾಡ್ತಿಯಾ ಅಂತಾ… ಇದನ್ನ ಕೇಳಿ ನಂಗೆ ಶಾಕ್! ಅಬ್ಬಾ..! ಒಂದು ಹುಡುಗಿ ಅದೂ ಚಿತ್ರದ ಇನ್ನೊಬ್ರು ಹೀರೋಯಿನ್ ಜೊತೆ ಹೀಗೆ ಸಡನ್ ಆಗಿ ಬಂದು ಮಾತನಾಡಿಸಿದ್ದು ನಿಜಕ್ಕೂ ಖುಷಿಯಾಯ್ತು. 

ಸಾಮಾನ್ಯವಾಗಿ ಮಾತಾಡೋಕೆ ಸಿನಿಮಾ ಸೆಟ್'ನಲ್ಲಿ ಟೈಂ ಸಿಗೋಲ್ಲ. ನನ್ನದೇ ಏಜ್‌ ಹುಡುಗಿ ಆಕೆ. ಆಮೇಲೆ ಯಾವಾಗ್ಲೂ ನಾವು ಮಾತಾಡೋಕೆ ಏನಾದ್ರೂ ಟಾಪಿಕ್ ಇದ್ದೇ ಇರ್ತಿತ್ತು. ಈಗ ಮೊಬೈಲ್‌ನಲ್ಲೇ ಮೆಸೇಜ್ ಮಾಡ್ತೀವಿ. ಅವಳು ಬಂಡಲ್ ಆಫ್ ಜಾಯ್ ಅಂತಾ ಮೆಚ್ಚುಗೆಯ ಮಾತಾಡುತ್ತಾರೆ ರಶ್ಮಿಕಾ.ಹೀರೋಯಿನ್ ತಾನ್ಯ ಹೋಪ್ ಬಗ್ಗೆ  ಈ ಹಿಂದೆ ದರ್ಶನ್ ಶಾಕಿಂಗ್ ಹೇಳಿಕೆ ಕೊಟ್ಟಿದ್ರು…ಆಕಗೆ ನನ್ನಂಥ 500 ಜನರನ್ನು ಕೊಂಡುಕೊಳ್ಳೋ ಶಕ್ತಿ ಇದೆ. ಅವರ ಬ್ಯಾಗ್ರೌಂಡ್ ಬಗ್ಗೆ ನಾನು ಕೇಳಿದ್ದೀನಿ. ತನಗೆ ಬಾಡಿಗಾರ್ಡ್, ಸೆಕ್ಯೂರಿಟಿಗಳಿದ್ರು ಅವರ್ಯಾವತ್ತು ಸೆಟ್ ಒಳಗೆ ಬಿಟ್ಟುಕೊಂಡಿಲ್ಲ. ಎಲ್ಲರ ಜೊತೆ ಬೆರೆಯುತ್ತಾರೆ. ಕ್ಲೀನ್ ಅಂಡ್ ಸಾಫ್ಟ್ ಹುಡುಗಿ, ಈಕೆಯನ್ನು ನೋಡಿ ನಮ್ಮ ನಟಿಯರು ಕಲಿಯಬೇಕಿದ್ದೂ ಜಾಸ್ತಿಯಿದೆ ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸುದ್ದಿಯೇ ಆಗಿತ್ತು. ಅಂದಹಾಗೇ ಈ ರಿಚ್ ಹುಡುಗಿ ಅಭಿಷೇಕ್ ಅಂಬರೀಶ್ ಅವರ ಸಿನಿಮಾ ಅಮರ್'ನಲ್ಲೂ ನಟಿಸ್ತಾ ಇದ್ದಾರೆ.

Edited By

Kavya shree

Reported By

Kavya shree

Comments