ಮುಗಿಯದ 'ನಾತಿಚರಾಮಿ' ನಾಯಕಿಯ ಮೀಟೂ ಆರೋಪ : ಸಂಕಷ್ಟದಲ್ಲಿ ಪೊಲೀಸರು..?!!!

26 Feb 2019 5:54 PM | Entertainment
611 Report

ಅಂದಹಾಗೇ ಬಾಲಿವುಡ್ ನಲ್ಲಿ ಮೀಟೂ ಹೀಟೂ ಹೆಚ್ಚಾಗುತ್ತಿದ್ದಂತೇ ಇತ್ತ ಇಡೀ ಸ್ಯಾಂಡಲ್’ವುಡ್ಡೇ ಒಂದಷ್ಟು ದಿನ ನಡುಗಿ ಹೋಯ್ತು. ಹೆಸರಾಂತ ಖ್ಯಾತ ಸ್ಟಾರ್ ನಟರೊಬ್ಬರ ಮೇಲೆ ಕನ್ನಡದ ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ ಘಟನೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ನಟಿ ಶೃತಿ  ಹರಿಹರನ್ ಮತ್ತು ಅರ್ಜುನ್ ಸರ್ಜಾ ಕೇಸ್ ಸದ್ಯ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.  ಶೃತಿ, ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ಬೆನ್ನಲ್ಲೇ ಶೃತಿ ವಿರುದ್ಧ ಸರ್ಜಾ ಕೂಡ ಮಾನನಷ್ಟ ಮೊಕದ್ದಮ್ಮೆ ಸೇರಿ ಎರಡು-ಮೂರು ದೂರು ಕೊಟ್ಟಿದ್ದಾರೆ. ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದೆ.

ವಿಚಾರಣೆ ಹಂತದಲ್ಲಿರುವ ಈ ಕೇಸ್ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ತಲೆಕಡಿಸಿಕೊಂಡಿದ್ದಾರೆ. ಕಾರಣ  ಏನ್ ಗೊತ್ತಾ..? ಅಂದಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದಂತೇ ಯುಬಿ ಸಿಟಿ ಸೆಕ್ಯೂರಿಟಿಗಳು ಸದ್ಯ ಕಾಣುತ್ತಿಲ್ಲ. ಅವರು ಆ ಕೆಲಸ ಬಿಟ್ಟಿದ್ದಾರೆ. ಸದ್ಯ  ಎಲ್ಲಿದ್ದಾರೆಂಬುದು ಕೂಡ ಗೊತ್ತಿಲ್ಲ.ನಾಪತ್ತೆಯಾಗಿರುವ ಸೆಕ್ಯುರಿಟಿಗಳ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣ ಇನ್ನಿಲ್ಲದ ಚಿಂತೆಗೀಡುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಮಂದಿಯ ವಿಚಾರಣೆ ನಡೆಸಿರುವ ಪೊಲೀಸರು, ಸೆಕ್ಯೂರಿಟಿಗಳ ಬೆನ್ನತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಎನಿಸಿಕೊಂಡಿರುವ ಸೆಕ್ಯೂರಿಟಿಗಳ ಹುಡುಕಾಟಕ್ಕೆ ಪೊಲೀಸರು ಇನ್ನಿಲ್ಲದ  ಕಸರತ್ತು ನಡೆಸಿದ್ದಾರೆ. 2016ರಲ್ಲಿ ವಿಸ್ಮಯ ಚಿತ್ರದ ಶೂಟಿಂಗ್ ಹಿನ್ನೆಲೆ ನಟಿ ಶ್ರುತಿ ಹರಿಹರನ್​ ಯುಬಿ ಸಿಟಿಗೆ ತೆರಳಿದ್ದರು. ಈ ವೇಳೆ ಅರ್ಜುನ್ ಸರ್ಜಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಅಂತಾ ನಟಿ ಶ್ರುತಿ ಹರಿಹರನ್​ ಅರೋಪ ಮಾಡಿದ್ದರು. ಈ ಹಿನ್ನಲೆಯನ್ನಿಟ್ಟುಕೊಂಡು  ಕಬ್ಬನ್ ಪಾರ್ಕ್ ಪೊಲೀಸರು  ಸೆಕ್ಯೂರಿಟಿಗಳ ಸಾಕ್ಷಿ ಕಲೆಹಾಕಬೇಕಿದೆ. ಆದರೆ ಸದ್ಯ ಅವರು ಸಿಗುತ್ತಿಲ್ಲ, ಅವರನ್ನು ಸರ್ಚ್ ಮಾಡಲಾಗುತ್ತಿದೆ. ಇದೊಂದು ಮುಗಿಯದ ರಾಮಾಯಣ ಅಂತಿದ್ದಾರೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು.

Edited By

Kavya shree

Reported By

Kavya shree

Comments