ಭಾರತೀಯರ ದಾಳಿಗೆ ಹೆದರಿ ಕಂಗಲಾದ ಪಾಕ್ : ಮಾಡಿದ್ದೇನು ಗೊತ್ತಾ..?

26 Feb 2019 5:23 PM | Entertainment
399 Report

ಪುಲ್ವಾಮಾ ದಾಳಿಯಿಂದಾಗಿ ಪಾಕ್ ವಿರುದ್ಧ ಭಾರತೀಯರಿಗೆ ರೋಷ ಹೆಚ್ಚಿತು. ಪಾಕ್ ಉಗ್ರರನ್ನು ಸದೆ ಬಡಿಯಲು ಸಮಯ ಕಾಯುತ್ತಿದ್ದ ಭಾರತೀಯರು ಇಂದು ಉಗ್ರ ಸೇನೆ ಪಡೆ ಮೇಲೆ ಗುಂಡಿನ ದಾಳಿ ನಡೆಸಿ 300 ಕ್ಕೂ ಹೆಚ್ಚು ಉಗ್ರರನ್ನು ನೆಲಕ್ಕುರುಳಿಸಿದ್ದಾರೆ. ಪುಲ್ವಾಮ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನೆ ಕಂಡು ಪಾಕ್ ಈಗಾಗಲೇ ಬೆಚ್ಚಿ ಬಿದ್ದಿದೆ.  ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಸಂಧಾನ ಮಾತುಕತೆ ಕೋರಿದ್ದರೂ ಭಾರತದ ಪ್ರಧಾನಿ ಬಗ್ಗಿರಲಿಲ್ಲ. ಕೊನೆಗೆ  ಸೇಡಿಗೆ ಸೇಡು ಎಂಬಂತೇ ಪಾಕ್ ಉಗ್ರರ ಮೇಲೆ ದಾಳಿ ನಡೆಸಿಯೇ ಬಿಟ್ಟಿತು.

ಸದ್ಯ ಪಾಕಿಸ್ತಾನದಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿದೆ. ವಾಯುಪಡೆ ಮತ್ತು ಸೇನೆ ಪಡೆ ಉನ್ನತಾಧಿಕಾರಿಗಳ ತುರ್ತು ಸಭೆ ಕರೆದಿದ್ದಾರಂತೆ. ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಷಿ ಇಂದು ಬೆಳಗ್ಗೆ ಸೇನಾಪಡೆ ಮತ್ತು ವಾಯಪಡೆಯ ಉನ್ನತಾಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿ ಪರಿಸ್ಥಿತಿ ಪರಾಮರ್ಶಿಸಿದರು. ಸಭೆಯ ನಂತರ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ರನ್ನು ಕಂಡು ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲಿ ಮಧ್ಯಾಹ್ನದ ನಂತರವೂ ಕೆಲವು ಮಹತ್ವದ ಸಭೆಗಳು ನಡೆದಿವೆ ಎಂಬ ಮಾಹಿತಿ ಕೆಲ ಮೂಲಗಳಿಂದ ಸಿಕ್ಕಿವೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಗಡಿ ನಿಯಮ ಉಲ್ಲಂಘಿಸಿ ಉದ್ಧಟನದ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಹಕ್ಕು ಪಾಕಿಸ್ತಾನಕ್ಕಿದೆ ಎಂದು ಹೇಳಿದರು. ಭಾರತ ನಡೆಸಿರುವ ದಾಳಿಯಿಂದಾಗಿ ನಿಜ್ಕಕೂ ನಮಗೆ ಅಪಮಾನವಾಗಿದೆ. ಮುಂದೆ ಏನು ಎಂಬುದನ್ನು ನಾವು ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು. 

Edited By

Kavya shree

Reported By

Kavya shree

Comments