ಬಿಗ್ಬಾಸ್ ಸ್ಪರ್ಧಿ ಆ್ಯಡಂ ಪಾಷಾ ಬಗ್ಗೆ ಕ್ರೇಜಿಸ್ಟಾರ್ ಬೇಸರ : ರವಿಚಂದ್ರನ್ ಹೇಳಿದ್ದೇನು ಗೊತ್ತಾ..?

26 Feb 2019 3:13 PM | Entertainment
1862 Report

ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮುಗಿದ ನಂತರ ಸ್ಪರ್ಧಿ ಆ್ಯಡಂ ಪಾಷಾ ಅವರು ತಕಧಿಮಿತಾ ಶೋ ನಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಇತ್ತೀಚೆಗೆ ವೇದಿಕೆಯಲ್ಲಿ ನನಗೆ ನಿರೂಪಕ ಅಕುಲ್ ಬಾಲಾಜಿಯಿಂದ ಅವಮಾನವಾಗಿದೆ, ಕಾರ್ಯಕ್ರಮದ ನಿರ್ದೇಶಕಿ ಕೂಡ ನನ್ನ ಮಾತಿಗೆ ಬೆಲೆ ಕೊಡದೇ ನನ್ನನ್ನು, ನನ್ನ ಸಮುದಾಯವನ್ನು ಅವಮಾನಿಸಿದ್ದಾರೆಂದು ಆ ಶೋಯಿಂದಲೇ ಹೊರಗುಳಿದಿದ್ದಾರೆ ಆ್ಯಡಂ. ಈ ಬಗ್ಗೆ ಅಕುಲ್ ಬಾಲಾಜಿ ವಿರುದ್ಧ ಕೂಡ ಆ್ಯಡಂಪಾಷಾ ದೂರು ಕೊಡಲು ಮುಂದಾಗಿದ್ದರು.

ನನ್ನ ಜೆಂಡರ್ ಬಗ್ಗೆ ಅಕುಲ್ ಅಪಮಾನ ಮಾಡಿದ್ದಾರೆ , ಇದರಿಂದ ನನಗೆ ಅವಮಾನವಾಗಿದೆ. ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದಿರುವ ಅಕುಲ್ ಬಾಲಾಜಿ ಕ್ಷಮೆ ಕೇಳಬೇಕೆಂದಿದ್ದರು. ನನಗೆ ಗೌರವ ಸಿಗದ ವೇದಿಕೆಗೆ ನಾನು ಪುನಹ ಹೋಗಲಾರೆ  ಎಂದು ಕೂಡ ಹೇಳಿಕೆ ಕೊಟ್ಟಿದ್ದರು.ಈ ಬಗ್ಗೆ ಮಾತನಾಡಿದ ಶೋ ತೀರ್ಪುಗಾರರಲ್ಲಿ ಒಬ್ಬರಾಗಿರುವ ಕ್ರೇಜಿಸ್ಟಾರ್ ಆ್ಯಡಂ ಪಾಷಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅವರು ತಮ್ಮ ಮಾತುಗಳಲ್ಲೇ ಹೇಳುತ್ತಾ, ಶೋ ಕ್ವಿಟ್ ಮಾಡುವುದು, ಅಥವಾ ಶೋಯಿಂದ ಮಧ್ಯಕ್ಕೆ ಹೊರ ಹೋಗೋದು ಅದು ಸಾಮಾನ್ಯ ವಿಷಯವಿಲ್ಲ. ಅವಮಾನವಿಲ್ಲದೇ ಯಾರಿಗೂ ಸನ್ಮಾನವಿಲ್ಲ. ಎಲ್ಲರು  ಈ ನಿಜವನ್ನು ಆರ್ಥ ಮಾಡಿಕೊಳ್ಳಬೇಕು. ಅದನ್ನು ಎದುರಿಸಿ ಜಯ ಸಾಧಿಸಬೇಕು.  ಕಲೆ ಇದ್ದರೆ ಬೆಲೆ . ಕಲೆ ನಿಮ್ಮಲ್ಲಿ ಇದ್ದರೆ ವಾಪಸ್ ಬಂದು ಪ್ರೂವ್ ಮಾಡಿ, ಇಲ್ಲದೇ ಹೋದರೆ ಇನ್ನೊಂದು ಕಡೆ ಹೋಗಿ ಪ್ರೂವ್ ಮಾಡಲಿ.

ಕ್ವಿಟ್ ಮಾಡುವುದು ಎಂದರೆ ಜೀವನದಲ್ಲಿ ಅವರು ಮಾಡುವ  ದೊಡ್ಡ ತಪ್ಪು. ಲೈಫ್ಗೆ ಅದೊಂದು ಕಪ್ಪು  ಚುಕ್ಕೆ ಎಂದರು. ಇನ್ನು ಮತ್ತೊಬ್ಬ ತೀರ್ಪುಗಾರರಾದ  ಸುಮನ್ ರಂಗನಾಥ್ ಮಾತನಾಡಿ, ಪಾಷಾ ಆಗಲೇ ಡೇಂಜರ್ ಶೋ ನಲ್ಲಿದ್ದರು. ಆದರೆ ಅವರು ಜನಾದೇಶ ಬರುವ ಮುನ್ನವೇ ಶೋ ಕ್ವಿಟ್ ಮಾಡಿರುವುದರಿಂದ ತೊಂದರೆ ಆಗೋದು ಪಾಷಾಗೇನೇ ಎಂದು ಹೇಳಿದ್ದಾರೆ. ವೇದಿಕೆ ಯಾರನ್ನು ಅವಮಾನಿಸುವುದಿಲ್ಲ, ಕಾರ್ಯಕ್ರಮಕ್ಕೆ ಬರಲು ಅವಕಾಶ ಕೊಟ್ಟಿದ್ದೇ ವೇದಿಕೆ ಅಂದಮೇಲೆ ಅವಮಾನ ಎಲ್ಲಿಂದ ಬಂತು ಎಂದರು. ಇನ್ನು ಆ್ಯಡಂ ಜೊತೆಗಿನ ಮತ್ತೊಬ್ಬ ಪಾಟ್ನರ್ ಪುನೀತ್ ಸಿಂಗಲ್ ಆಗಿಯೇ ಪರ್ಫಾರ್ಮೆನ್ಸ್ ನೀಡಲು ಕೋರಿದ್ದಾರೆ.

Edited By

Kavya shree

Reported By

Kavya shree

Comments