'ಪ್ಲೀಸ್ ನನ್ನೊಂದಿಗೆ ನೀವು ಕೈ ಜೋಡಿಸಿ' ಎಂದು ಮನವಿ ಮಾಡಿಕೊಂಡ ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ...!

26 Feb 2019 11:25 AM | Entertainment
579 Report

ಅಂದಹಾಗೇ ಸ್ಯಾಂಡಲ್ವುಡ್ ಸ್ಟಾರ್ ಹೀರೋಯಿನ್’ಗಳ ಪೈಕಿ ಸದ್ಯ ರಶ್ಮಿಕಾಗೆ ಮೊದಲ ಸ್ಥಾನ. ಒಂದಷ್ಟು ದಿನ ವೈಯಕ್ತಿಕ ಬದುಕಿನ ಗಾಸಿಪ್’ಗಳಿಗೆ ಆಹಾರವಾಗಿದ್ದ ರಶ್ಮಿಕಾ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಈ ಚಮಕ್ ರಾಣಿ ಸದ್ಯ ಫ್ಯಾನ್ಸ್ ಮನ ಗೆದ್ದಿದ್ದಾರೆ. ಸಾಮಾಜಿಕ ಕಳಕಳಿ ಇರುವ ನಾಯಕಿ ಎಂದೇ ರಶ್ಮಿಕಾರನ್ನು ಕರೆಯಲಾಗುತ್ತಿದೆ.   ಅಂದಹಾಗೇ ಮೂರು ದಿನಗಳ ಹಿಂದಷ್ಟೇ ಬಂಡೀಪುರ ಅಭಯಾರಣ್ಯಗೆ ಬೆಂಕಿ ಹೊತ್ತಿತ್ತು. ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು.

ಈ ವಿಚಾರ ತಿಳಿಯುತ್ತಿದ್ದಂತೇ ಚಿತ್ರರಂಗದವರು ಅಭಯಾರಣ್ಯದತ್ತ ಧಾವಿಸಿ ಬಂದರು. ದರ್ಶನ್, ಪುನೀತ್ ವಿಜಯ್ ಸೇರಿದಂತೇ ಅನೇಕ ಸ್ಟಾರ್ ನಟರು ಸಹಾಯ ಮಾಡಿ ಎಂದು ತಮ್ಮ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಮೂರು ದಿನಗಳಿಂದ ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಬಂಡೀಪುರ ಅರಣ್ಯವನ್ನು ಬೆಂಕಿಯಿಂದ ಉಳಿಸಿ ಅಂತ ​ ಸ್ಯಾಂಡಲ್​ವುಡ್​ನ  ಇತರ ಸ್ಟಾರ್ ನಟರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗ ಕಿರಿಕ್​ ಪಾರ್ಟಿಯ ಬೆಡಗಿ ರಶ್ಮಿಕಾ ಮಂದಣ್ಣಾ ಕೂಡ ಟ್ವೀಟ್​ ಮಾಡುವುದರ ಮೂಲಕ  ಪರಿಸರ ಉಳಿಸುವಲ್ಲಿ ಭಾಗಿಯಾಗಿ ಅಂತ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ನಮ್ಮಂತೇ ಉಸಿರಾಡುತ್ತಿರುವ ಅನೇಕ ಸಸ್ಯ ವರ್ಗ ಮತ್ತು ಪ್ರಾಣಿ ವರ್ಗಗಳ ಉಳಿವಿಗೆ ನಾವೆಲ್ಲಾ ಪ್ರಾರ್ಥಿಸೋಣ. ಅವುಗಳ ರಕ್ಷಣೆಗೆ ಕೈ ಜೋಡಿಸೋಣ. ಕಳೆದ ಮೂರು ದಿನಗಳಿಂದ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಪ್ರಾಣಿಗಳು ಈಗ ಪ್ರಾಣ ಕಳೆದುಕೊಂಡಿವೆ. ದಿನದಿಂದ ದಿನಕ್ಕೆ ಕಾಡ್ಗಿಚ್ಚು ಜೋರಾಗುತ್ತಿದೆ. ಅದನ್ನು ನಂದಿಸಲು ಸ್ವಯಂ ಸೇವಕರಾಗಿ ದುಡಿಯೋಣ. ಅರಣ್ಯ ಸಂಪತ್ತು  ನಷ್ಟವಾಗಿದೆ. ಸ್ವಯಂಸೇವಕರಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಾವೆಲ್ಲಾ ಒಟ್ಟಾಗಿ ಭಾಗಿಯಾಗಿ ಸುಂದರ ಪರಿಸರವನ್ನು ಸಾಮಾನ್ಯ ಪರಿಸ್ಥಿತಿಗೆ ತರೋಣಾ,'ಪ್ಲೀಸ್ ನನ್ನೊಂದಿಗೆ ನೀವು ಕೈ ಜೋಡಿಸಿ' ಅಂತಾ ಟ್ವಿಟ್ಟರ್​ನಲ್ಲಿ ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಟ್ವೀಟ್ ಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ರಶ್ಮಿಕಾ ಇದಷ್ಟೇ ಅಲ್ಲಾ, ಈ ಹಿಂದೆಯೂ ಅನೇಕ ಬಾರಿ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ. ಕೆಲವು ಅಭಿಯಾನಗಳಲ್ಲಿ ಪಾಲ್ಗೊಂಡಿದ್ದಾರೆ. ರಶ್ಮಿಕಾ ಟ್ವಿಟ್ಟರ್ ಮೆಸೇಜ್ ಗೆ ಹಲವರು ದಟ್ಸ್ ಲೈಕ್ ರಶ್ಮಿಕಾ ಎನ್ನುತ್ತಿದ್ದಾರೆ.

 

 

Edited By

Kavya shree

Reported By

Kavya shree

Comments