ಕಣ್ಣೀರಿಟ್ಟು ನೋವು ಹೇಳಿಕೊಂಡ ಆ ಖ್ಯಾತ ನಟಿಗೆ ಅಭಿನಯ ಚಕ್ರವರ್ತಿ ಕಿಚ್ಚ ಮಾಡಿದ್ದೇನು ಗೊತ್ತಾ…?

26 Feb 2019 10:13 AM | Entertainment
1358 Report

ಬಣ್ಣದ ಲೋಕವೇ ಅಂಥದ್ದು. ಒಮ್ಮೊಮ್ಮೆ ನಂ.1 ಸ್ಥಾನದಲ್ಲಿದ್ದವರು ಝೀರೋ ಆಗಿ ಬಿಡುತ್ತಾರೆ. ಮತ್ತೆ ಕೆಲವರು ಕೆಲವೇ ಕೆಲವು ವರ್ಷಗಳಲ್ಲಿ ನಂ.1 ಸ್ಥಾನಕ್ಕೇರಿ ಬಿಡುತ್ತಾರೆ. ಏನೇ ಇರಲಿ, ಒಟ್ಟಾರೆ ಕಷ್ಟ –ಸುಖ ಸಿನಿಮಾ ಫೀಲ್ಡ್ ನಲ್ಲಿ ಕಾಮನ್ ಆಗಿ ಬಿಟ್ಟಿದೆ. ಆದರೆ ಬಣ್ಣದ ಲೋಕದಲ್ಲಿ ಒಂದಷ್ಟು ವರ್ಷಗಳ ಕಾಲ ಮಿಂಚಿದ್ದ ಖ್ಯಾತ ನಟಿಯೊಬ್ಬರು ತಮ್ಮ ಕಷ್ಟಗಳನ್ನೆಲ್ಲಾ ಹೇಳಿಕೊಂಡು ಕಣ್ಣೀರಿಡುತ್ತಾ ಪರಿತಪಿಸುತ್ತಿದ್ದ ಘಟನೆ ಟಿವಿ ಲೋಕದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ತನಗೆ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದ ದೃಶ್ಯ ಇಡೀ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು.

ಇದೀಗ ಅದೇ ನಟಿಯ ನೆರವಿಗೆ ಬಂದಿದ್ದಾರೆ ನಮ್ಮ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ ನೀಡಿದ ಸಹಾಯ ಕೇಳಿ ಕಿಚ್ಚ ಫ್ಯಾನ್ಸ್ ಬಹಳ ಖುಷಿಯಾಗಿದ್ದಾರೆ. ಸುದೀಪ್ ಅವರ ಮಾನವೀಯತೆ ಬಗ್ಗೆ ಕೊಂಡಾಡಿದ್ದಾರೆ. ಅಂದಹಾಗೇ ಕಷ್ಟದಲ್ಲಿರುವ ಆ ನಟಿ ಯಾರು ಗೊತ್ತಾ..? ಒಂದು ಕಾಲದಲ್ಲಿ ನಟ ರಾಮ್ ಕುಮಾರ್, ರಮೇಶ್ ಅರವಿಂದ್, ವಿಷ್ಣು ವರ್ಧನ್ , ಶಿವರಾಜ್ ಕುಮಾರ್ ರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಖ್ಯಾತ ನಟಿ ವಿಜಯಲಕ್ಷ್ಮಿಯವರು ಸದ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ವೆಚ್ಚ ಭರಿಸಲಾಗದೇ, ನನಗೆ ಯಾರಾದರೂ ಸಹಾಯ ಮಾಡಿ ಎಂದು ಮಾಧ್ಯಮಗಳ ಮುಂದೆ ಕೇಳಿಕೊಂಡಿದ್ದರು. ವಿಜಯಲಕ್ಷ್ಮಿ ಸಹೋದರಿ ಕೂಡ ಚಿತ್ರರಂಗದಿಂದ ನನ್ನ ತಂಗಿಗೆ ನೆರವು ನೀಡಿ, ನಾವು ಕಷ್ಟದಲ್ಲಿದ್ದೇವೆ ಎಂದು ಕೇಳಿ ಕೊಂಡಿದ್ದರು.  ವಿಷಯ ತಿಳಿದು ಈಗಾಗಲೇ ಕಲಾವಿದರ ಸಂಘದ ಕಡೆಯಿಂದ ನಟಿ ವಿಜಯಲಕ್ಷ್ಮಿಗೆ ನೆರವು ಸಿಕ್ಕಿದೆ. ಆಸ್ಪತ್ರೆಗೆ ಹೋಗಿ ನಟಿಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ. ಈಗ ಸ್ಯಾಂಡಲ್’ವುಡ್'ನ ಕಿಚ್ಚ ಸುದೀಪ್ ಅವರು 1 ಲಕ್ಷ ರೂಪಾಯಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಬಾ.ಮ.ಹರೀಶ್ ಅವರು ಮಾಹಿತಿ ನೀಡಿದ್ದು, ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಿದ ಸುದೀಪ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ. ಅಂದಹಾಗೇ ಅವಕಾಶಗಳಿಲ್ಲದೇ ಚಿತ್ರರಂಗದಿಂದ ಕಣ್ಮರೆಯಾಗಿದ್ದ ನಟಿ  ಬಗ್ಗೆ ಸಾಕಷ್ಟು ಗಾಸಿಪ್’ಗಳು ಹರಿದಾಡಿದವು. ದೇಶ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಕೆಲವು ದಿನಗಳ ನಂತರ ಖುದ್ದು ವಿಜಯಲಕ್ಷ್ಮಿ ಅವರೇ ಮಾಧ್ಯಮದವರ ಮುಂದೆ ಬಂದು ನಾನು ಯಾಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದನ್ನು ಹೇಳಿದ್ದರು. ವಿಜಯಲಕ್ಷ್ಮಿ ಅವರು ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.  ಅಷ್ಟೇ ಅಲ್ಲದೇ ತಮಗೆ ಸಿನಿಮಾಗಳಲ್ಲಿ ಅವಕಾಶ ಕೊಡಿ ಎಂದು ಕೂಡ ಕೇಳಿದ್ದ ವಿಜಯಲಕ್ಷ್ಮಿಗೆ ಕೆಲ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಮೇಲೆ ಮತ್ತೆ ಬಣ್ಣ ಹಚ್ಚಲಿದ್ದಾರೆ ನಾಗಮಂಡಲದ ಈ ಚೆಲುವೆ. ಬಿಗ್ ಬಾಸ್ ಸೀಸನ್-6 ಗೆ ಇವರು ಹೋಗುತ್ತಾರೆ ಎಂಬ ಸುದ್ದಿಯೂ ದೊಡ್ಡ ಮಟ್ಟದಲ್ಲಿಯೇ ಪ್ರಚಾರ ಪಡೆಯಿತು. ಆದರೆ ಅದರ ಬಗ್ಗೆ ಕ್ಲಿಯರ್ ಆಗಿ ವಿಡಿಯೋ ಮೂಲಕ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದರು.

 

Edited By

Kavya shree

Reported By

Kavya shree

Comments