ಕಾಲಿಗೆ ಚಪ್ಪಲಿ ಇಲ್ದೇ ಬೀದಿ ಬೀದಿ ಅಲೆಯುತ್ತಿದ್ದಾರೆ ಹುಚ್ಚಾ ವೆಂಕಟ್..!!!

25 Feb 2019 3:39 PM | Entertainment
205 Report

ಬಿಗ್ಬಾಸ್ ಸ್ಪರ್ಧಿ ಆಗೋ ಮುಂಚೆ ಹುಚ್ಚಾ ವೆಂಕಟ್ ಯಾರು ಅಂತಾನೆ ಯಾರಿಗೂ ಗೊತ್ತೇ ಇರಲಿಲ್ಲ. ಸದ್ಯ ಕಾಂಟ್ರೋವರ್ಸಿ ನಟ ಅಂತಾನೇ ಗುರುತಿಸಿಕೊಂಡಿರುವ ಹುಚ್ಚಾ ವೆಂಕಟ್ ಇಡೀ ಕರ್ನಾಟಕಕ್ಕೆ ಗೊತ್ತು. ಅವರ ಡೈಲಾಗ್ ಒಂದಷ್ಟು ದಿನ ಫೇಮಸ್ ಕೂಡ ಆದವು. ನನ್ನ ಎಕ್ಡಾ ಅಂತಾ ಹೇಳ್ತಾ ಇದ್ದ ಹುಚ್ಚಾ ವೆಂಕಟ್ ಕಾಲಿಗೆ ಎಕ್ಡಾ ಇಲ್ಲದೇ ರೋಡ್ ರೋಡ್ ಅಲೆಯುತ್ತಿದ್ದಾರೆ. ಹುಚ್ಚಾ ವೆಂಕಟ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದರು. ರಾಜಕೀಯ, ಅಥವಾ ಸಿನಿಮಾ ಹೀಗೆ ಯಾವುದಾದರು ವಿಚಾರವನ್ನಿಟ್ಟಿಟ್ಟುಕೊಂಡು ವಿಡಿಯೋ ಮೂಲಕ ಮಾತನಾಡುತ್ತಿದ್ದ ಹುಚ್ಚಾ ವೆಂಕಟ್, ಸದ್ಯ ಅವರ ಫೋಟೋ ನೋಡಿ ಕೆಲವರು ಹೀಗಾಗಬಾರದಿತ್ತು ಎಂದು ಹೇಳುತ್ತಿದ್ದಾರೆ.

 ರಾಜಕೀಯಕ್ಕೆ ಸೇರಿ ಕೈ ಸುಟ್ಟುಕೊಂಡು ವಾಪಸ್ಸು ಆಗಿದ್ದೂ ಇದೆ. ಆದರೆ ಹೀಗ್ಯಾಕೆ  ಬೀದಿ ಸುತ್ತುತ್ತಿದ್ದಾರೆ…?!!ಯಾವಾಗಲೂ ಒಂದಲ್ಲ ಒಂದು ಹೇಳಿಕೆಯ ಮೂಲಕವೇ, ವಿವಾದಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿಯೇ ಇಲ್ಲದೇ ಓಡಾಡುತ್ತಿರೋ ದೃಶ್ಯ ಕಂಡುಬಂದಿದೆ.ಅಂದಹಾಗೇ ಮಾತು ಮಾತಿಗೂ ನನ್ನ ಯಕ್ಡಾ ನನ್ ಮಗಂದ್ ಅಂತಾ ಹೇಳ್ತಿದ್ದವರು, ಇದ್ದಕ್ಕಿದ್ದ ಹಾಗೇ ಬೀದಿ ಬೀದಿ ಅಲೆಯುತ್ತಿದ್ದಾರಂತೆ.ಕಾಲಿಗೆ ಚಪ್ಪಲಿ ಇಲ್ದೇ ಬರಿಗಾಲಲ್ಲಿ ಓಡಾಡ್ತಿರುವ ಫೋಟೋಗಳನ್ನು ಯಾರೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.ಕೆಲ ದಿನಗಳ ಹಿಂದೆ `ದುರಹಂಕಾರಿ ಹುಚ್ಚ ವೆಂಕಟ್’ ಚಿತ್ರದ ಪ್ರೋಮೋ ರಿಲೀಸ್ ಮಾಡಿ ಸಿನಿಮಾ ಮಾಡುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದರು.

Edited By

Kavya shree

Reported By

Kavya shree

Comments