ಬೆತ್ತಲೆ ಫೋಟೋ ಹಾಕಿ ನನ್ನ ಮಾನ ಕಳೆದಿದ್ದಾರೆ : ನಟ ಅಳಲು…!!!

25 Feb 2019 2:55 PM | Entertainment
1189 Report

ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಾಗಿ ಸುದ್ದಿ ಮಾಡಿದ ಘಟನೆ ಎಂದರೆ ಇತ್ತೀಚಿನ ದಿನಗಳಲ್ಲಿ ಅದು ನಟಿಯರ ಬೆತ್ತಲೆ ಫೋಟೋಗಳು. ಸದ್ಯ  ಅದೇ  ನಟಿಯರ ಸಾಲಿಗೆ ನಟನೊಬ್ಬನ ಬೆತ್ತಲೆ ಫೋಟೋ ಲೀಕ್ ಹಾಗಿದೆ. ಈ ಸಂಬಂಧ ಇನ್ಸ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡು ನಟ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿರುವ ಬೆತ್ತಲೆ ಫೋಟೋ ನನ್ನದೆ ಎಂದು ಬಾಲಿವುಡ್ ನಟ ಅಲಿ ಫಜಲ್ ಒಪ್ಪಿಕೊಂಡಿದ್ದಾರೆ.  ಈ ಬಗ್ಗೆ ಮಾತನಾಡಿದ ಅವರು ಕೀಳು ಮಟ್ಟದಲ್ಲಿ ಯೋಚನೆ ಮಾಡುವವರು ಈ ಫೋಟೋ ಲೀಕ್ ಮಾಡಿದ್ದಾರೆ ಎಂದಿದ್ದಾರೆ.

ತಮ್ಮ ಫೋಟೋ ಲೀಕ್ ಮಾಡಿದವರದ್ದು ಕೀಳುಮಟ್ಟದ ಯೋಚನೆ, ಅವರು ಅಸಹ್ಯಕರವಾಗಿ ಯೋಚಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಕಳೆದ ಒಂದು ವಾರದಿಂದ ನಟನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುನಾಮಿಯಂತೆ ಸದ್ದು ಮಾಡಿತ್ತು. ಅಲಿ ಫೈಜಲ್ ಎಲ್ಲಿಯೂ ತಮ್ಮ ಫೋಟೋಗಳ ಬಗ್ಗೆ ಸಾರ್ವಜನಿಕವಾಗಿ  ಹೇಳಿಕೆಯನ್ನು ಸಹ ನೀಡಿರಲಿಲ್ಲ. ಅಭಿಮಾನಿಗಳು ಇದೊಂದು ಎಡಿಟ್ ಮಾಡಲ್ಪಟ್ಟ ಫೋಟೋ ಎಂದು ವಾದಿಸಿದ್ರೆ, ಮತ್ತೆ ಕೆಲವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ತಮ್ಮ ನಟನಲ್ಲಿ ಮನವಿ ಮಾಡಿಕೊಂಡಿದ್ದರು. ಲೀಕ್ ಆಗಿರುವ ಫೋಟೋ  ನನ್ನದೆ. ಈ ಕುರಿತು  ಹೆಚ್ಚು ಮಾತನಾಡಲು ಇಷ್ಟವಿಲ್ಲ. ಆದರೆ ಯಾರು ಇದನ್ನು ಲೀಕ್ ಮಾಡಿದ್ದಾರೆ, ಹೇಗೆ ಮಾಡಿದ್ದಾರೆ ಎಂದು ನನಗೆ ತಿಳಿಯದು ಎಂದಿದ್ದಾರೆ. ನನ್ನ ಅಭಿಮಾನಿಗಳು ಇದನ್ನು ನೋಡಿ ಬೇಸರಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಇಸದ್ದಾರೆ.

ಅಂದಹಾಗೇ ನನಗೆ ನನ್ನ ಫೋಟೋ ಲೀಕ್ ಆಗಿದ್ದು ನೋಡಿ ಬೇಸರವಾಗಿದೆ. ನನ್ನ ಫೋಟೋ ಲೀಕ್ ಮಾಡಿದವ್ರು  ನಿಜ ಚೀಪ್ ಮೆಂಟಾಲಿಟಿಯವರು.2008ರಲ್ಲಿ ‘ದ ಅದರ್ ಎಂಡ್ ಆಫ್‍ದ ಲೈನ್’ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜ್‍ಕುಮಾರ್ ಹಿರಾನಿ ನಿರ್ದೇಶನದ ‘ಥ್ರಿ ಈಡಿಯಟ್ಸ್’ ಸಿನಿಮಾದಲ್ಲಿ ನಟನೆಗಾಗಿ ಉದಯನ್ಮೋಖ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಫಕ್ರೆ ರಿಟರ್ನ್ ಸಿನಿಮಾ ಅಲಿಗೆ ಹೆಸರು ತಂದುಕೊಟ್ಟ ಸಿನಿಮಾ. ಅಲಿ ನಟನೆಯ `ಮಿಲನ್ ಟಾಕೀಸ್’ ಮಾರ್ಚ್ ನಲ್ಲಿ ಬಿಡುಗಡೆಯಾಗಲಿದೆ.

Edited By

Kavya shree

Reported By

Kavya shree

Comments