ಪ್ರಿಯಾ ವಾರಿಯರ್ ಕಣ್ಸನ್ನೆಯಿಂದ ನನ್ನ ಭವಿಷ್ಯವೇ ಹಾಳಾಯ್ತು : ಕಣ್ಣೀರಿಟ್ಟ ನಟಿ…?!!!

25 Feb 2019 12:29 PM | Entertainment
3668 Report

ಅಂದಹಾಗೇ ಪ್ರಿಯಾ ವಾರಿಯರ್ ಹುಬ್ಬು ಚೆಲುವೆ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದೇ ನೋಟಕ್ಕೆ ಪ್ರಿಯಾ ನ್ಯಾಷನಲ್ ಕ್ರಶ್ ಆದ್ರು. ನೋಡು ನೋಡುತ್ತಿದ್ದಂತೇ ಇಡೀ ಐದು ಇಂಡಸ್ಟ್ರಿಯ ಸ್ಟಾರ್ಸ್ ಇತ್ತ ಕಡೆ ಮುಖ ಮಾಡಿದ್ರು. ಮಲಯಾಳಿ ಚೆಲುವೆಯ ಕಣ್ಣಿನ ಕರಾಮತ್ತು ಇಡೀ ರಾಷ್ಟ್ರಕ್ಕೆ ತಿಳೀತು. ಆದರೆ ಇದರ ಮಧ್ಯೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ಒಡು ಅಡಾರ್ ಲವ್ ಮಯಯಾಳಿ ಸಿನಿಮಾದ ಆ ವಿಡಿಯೋ ವೈರಲ್ ಆಗುತ್ತಿದ್ದಂತೇ, ಟೀಸರ್ ಕೂಡ ಸೆನ್ಸೇಷನಲ್ ಹಿಟ್ ಆಯ್ತು. ಆದರೆ ಫೆ.14 ರಂದು ರಿಲೀಸ್ ಆದ ಈಸಿನಿಮಾ ಅಷ್ಟೇನು ಸಕ್ಸಸ್ ಕಾಣಲೇ ಇಲ್ಲ. ಆದರೆ ಇದೀಗ ಪ್ರಿಯಾ ಮೇಲೆ , ಅದೇ ಸಿನಿಮಾದ ನಾಯಕಿ ಆರೋಪ ಮಾಡ್ತಿದ್ದಾರೆ. ಕಾರಣ ಏನ್ ಗೊತ್ತಾ...?

ಅಂದುಕೊಂಡಂತೇ ಸಿನಿಮಾ ಯಶಸ್ಸಾಗುತ್ತೆ ಅಂತಾ ಅನ್ಕೊಂಡಿದ್ದವರಿಗೆ ಇದು ಮಹಾ ಪೆಟ್ಟು. ಕನ್ನಡ ಮತ್ತು ತಮಿಳು, ತೆಲಗು ನಲ್ಲೂ ರಿಲೀಸ್ ಆಯ್ತು. ಆದರೆ ಸಿನಿಮಾ ಆರಕ್ಕೇರಲಿಲ್ಲ.ಸದ್ಯ ಪ್ರಿಯಾ ಮೇಲೆ ಮತ್ತೊಬ್ಬ ನಾಯಕಿನಟಿ ಆರೋಪ ಮಾಡ್ತಿದ್ದಾರೆ. ಆಕೆಯ ವಿಡಿಯೋ ದಿಂದ ನನ್ನ ಭವಿಷ್ಯ ನೆಲ ಕಚ್ಚಿತು ಎಂಬ ಆರೋಪ ಮಾಡ್ತಿದ್ದಾರೆ ಅದೇ ಸಿನಿಮಾ ನಾಯಕಿ.ಹೇಳಬೇಕಂದ್ರೆ ಆ ಸಿನಿಮಾದ ಮೊದಲ ಹೀರೋಯಿನ್ ಅಥವಾ ನಾಯಕಿ ಅಂದ್ರೆ ನೂರಿನ್ ಷರೀಫ್. ಸಿನಿಮಾ ಸಕ್ಸಸ್ ಆಗಿದ್ರೆ, ಇಂತಹ ಕೋಪ, ಆಕ್ರೋಶ ಎಲ್ಲಾ ಮುಚ್ಚಿ ಹೋಗ್ತಿತ್ತು. ಸಿನಿಮಾ ಸೋತಾಗಲೇ ಇಂತಹ ಆರೋಪ, ಪ್ರತ್ಯಾರೋಪ ಎಲ್ಲಾ ಶುರುವಾಗೋದು. ಒರು ಆಡಾರ್ ಲವ್ ಸಿನಿಮಾದಲ್ಲೂ ಅದೇ ಆಗ್ತಿದೆ. ಬೇಕಂತಲೇ ನನ್ನನ್ನ ಚಿತ್ರದಲ್ಲಿ ಕಡೆಗಣಿಸಲಾಗಿದೆ ಅಂತ ಚಿತ್ರದ ನಟಿ ನೂರಿನ್ ಷರೀಫ್ ಆರೋಪಿಸಿದ್ದಾರೆ. ಅಸಲಿಗೆ ಚಿತ್ರದ ನಾಯಕಿ ನಾನೇ. ಅದೊಂದು ಸಣ್ಣ ವೀಡಿಯೋ ವೈರಲ್ಲಾಗಿ ಪ್ರಿಯಾ, ಕಡೆ ಎಲ್ಲರ ದೃಷ್ಟಿ ತಿರುಗಿಬಿಡ್ತು. ನೋಡ ನೋಡ್ತಿದಂತೆ ನನ್ನನ್ನ ಮೂಲೆಗುಂಪು ಮಾಡಲಾಯ್ತು ಅಂತ ನೂರಿನ್ ಈಗ ಬೇಸರ ವ್ಯಕ್ತಪಡಿಸ್ತಿದ್ಧಾರೆ. ಸಂದರ್ಶನವೊಂದರಲ್ಲಿ ಮಾತನಾಡಿರೋ ನೂರಿನ್ ಸಿನಿಮಾದಲ್ಲಾದ ಕೆಲ ಬದಲಾವಣೆಗಳನ್ನು ಬಿಚ್ಚಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುವ ಮುಂಚೆ ಇದ್ದ ಕಥೆ, ಆ ನಂತರದ ಕಥೆ ಬೇರೆ ಬೇರೆಯಾಗಿತ್ತು.

ಸಿನಿಮಾ ಶುರುವಾದಾಗ ನನ್ನದೇ ಲೀಡ್​ ರೋಲ್​ ಆಗಿತ್ತು. ಚಿತ್ರಕ್ಕೆ ಆಯ್ಕೆ ಮಾಡಿದಾಗ ನನ್ನನ್ನೇ ನಾಯಕಿ ಅಂತ ಬಿಂಬಿಸಲಾಗಿತ್ತು. ಆದ್ರೆ, ಕಣ್ಸನ್ನೆ ವಿಡಿಯೋದಿಂದ ಪ್ರಿಯಾ, ಫೇಮಸ್ ಆದ್ಮೇಲೆ ಇಡೀ ಕಥೆಯನ್ನ ಬದಲಿಸಿ, ರೀ ಶೂಟ್ ಮಾಡಲಾಯ್ತು. ಪ್ರಿಯಾ ಮತ್ತು ರೋಶನ್ ಪಾತ್ರಗಳಿಗೆ ಹೆಚ್ಚಿನ ಸ್ಕೋಪ್ ಸಿಕ್ತು. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ತಡವಾಯ್ತು.  ಈ ಎಲ್ಲಾ ಸಿನಿಮಾ ಬದಲಾವಣೆಯಿಂದಾಗಿ ನನ್ನಾಸೆಗೆ ತಣ್ಣೀರೆರಚಿದಂತಾಗಿದೆ. ನನ್ನ ಸಿನಿಮಾ ಬದುಕು ಹಾಳಾಗಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಪ್ರಿಯಾ ಕ್ರೇಜ್​ನಿಂದ ನನ್ನ ಸಿನಿಕರಿಯರ್ ಹಾಳಾಯ್ತು ಅಂತ ನೂರಿನ್ ಷರೀಫ್ ನೋವು ತೋಡಿಕೊಂಡಿದ್ದಾರೆ.ಅಂದಹಾಗೇ ಸಿನಿಮಾ ರಿಲೀಸ್ ಆದ ಮೇಲೆ ಅಷ್ಟೇನು ಸಕ್ಸಸ್ ಸಿಗದೇ ಇದ್ರು,ಪ್ರಿಯಾಗೆ ಸಿನಿಮಾಗೆ ಒಂದೊಲ್ಳೆ ನೇಮು-ಫೇಮು ಸಿಕ್ಕಿದ್ದಾಗಿದೆ.

Edited By

Kavya shree

Reported By

Kavya shree

Comments