ಅರಣ್ಯ ಉಳಿವಿಗಾಗಿ ಚಾಲೆಂಜಿಂಗ್ ಸ್ಟಾರ್ ಜೊತೆ ಕೈ ಜೋಡಿಸಿದ ಪವರ್ ಸ್ಟಾರ್

25 Feb 2019 11:26 AM | Entertainment
383 Report

ಮೊನ್ನೆಯಷ್ಟೆ ಬಂಡೀಪುರ ಅರಣ್ಯ ವಲಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ನೂರಾರು ಪ್ರಾಣಿ ಪಕ್ಷಿ ಸಂಕುಲಗಳು ಬೆಂಕಿಗೆ ಆಹುತಿಯಾಗಿವೆ.. ಇದೇ ಹಿನ್ನಲೆಯಲ್ಲಿ ಚಿತ್ರನಟರು ಕಾಡಿನ ಉಳಿವಿಗಾಗಿ ಕರೆ ಕೊಟ್ಟಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆಯೇ ಕಾಡ್ಗಿಚ್ಚಿನಿಂದ ವನ್ಯ ಜೀವಿಗಳನ್ನು ಸಂರಕ್ಷಿಸಲು ಸಹಾಯ ಮಾಡಲು ಮನಸ್ಸಿದ್ದರೆ ಕೈ ಜೋಡಿಸಿ ಎಂದು ಟ್ವಿಟರ್ ಮೂಲಕ ಮನವಿಯನ್ನು ಮಾಡಿದ್ದರು.

ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಅದೇ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪುನೀತ್ 'ಬಂಡೀಪುರದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳು ಸಂಕಷ್ಟಕ್ಕೀಡಾಗಿವೆ. ಅರಣ್ಯ ಇಲಾಖೆ ಮತ್ತು ಸ್ವಯಂಸೇವಕರ ಜೊತೆ ನಾವೂ ಕೈ ಜೋಡಿಸೋಣ. 'ಕಾಡಿದ್ದರೆ ನಾಡು, ನಾವು' ವನ್ಯ ಜೀವಿಗಳ ರಕ್ಷಣೆ ನಮ್ಮ ಹೊಣೆ. ಮನುಷ್ಯನ ಹಾಗೇ ಗಿಡ ಮರ ಮತ್ತು ವನ್ಯ ಜೀವಿಗಳೂ ಒಂದು ಜೀವವೇ' ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಬಂಡೀಪುರ ಅರಣ್ಯ ವಲಯದಲ್ಲಿ ಸ್ಥಿತಿ ಗಂಭೀರವಾಗಿದೆ.. ನೂರಾರು ವನ್ಯ ಜೀವಿಗಳು ಪ್ರಾಣವನ್ನು ಕಳೆದುಕೊಂಡಿವೆ. ಕೇರಳ ಗಡಿಭಾಗಕ್ಕೂ ಬೆಂಕಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಟ ನಟಿಯರು ಈ ಕೆಲಸಕ್ಕೆ ಕೈ ಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ..

Edited By

Manjula M

Reported By

Manjula M

Comments