ಕೊನೆಗೂ ಸುಖಾಂತ್ಯ ಆಯ್ತು ಕವಿತಾ-ಆ್ಯಂಡಿ ಜಗಳ…!

25 Feb 2019 11:08 AM | Entertainment
1830 Report

ಬಿಗ್ ಬಾಸ್  ಮುಗಿದ ಮೇಲೂ ಸ್ಪರ್ಧಿಗಳ ಕಚ್ಚಾಟ ಮುಕ್ತಾಯವಾಗಿರಲಿಲ್ಲ. ಹೋದಲೆಲ್ಲಾ ಕವಿತಾ ಮತ್ತು ಆ್ಯಂಡಿ ಜಗಳ ತಾರಕ್ಕಕ್ಕೇರುತ್ತಿತ್ತು. ರಿಯಾಲಿಟಿ ಶೋ ವೊಂದರಲ್ಲಿ ಇಬ್ಬರು ಭಾಗವಹಿಸಿದ್ದ ವೇಳೆ ಪರಸ್ಪರ ಜಗಳ ಮಾಡಿಕೊಂಡಿದ್ದರು. ಸದ್ಯ ಅವರ ಹಾವು-ಮುಂಗುಸಿ ಆಟ ಮುಕ್ತಾವಾಗಿದೆ. ಕೊನೆಗೂ ಸುಖಾಂತ್ಯದ ಮೂಲಕ  ಇಬ್ಬರು ಒಂದಾಗಿದ್ದಾರೆ. ಜಗಳ ಸಂಬಂಧ ಕವಿತಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ರಾಜ್ಯ ಮಹಿಳಾ ಆಯೋಗದಲ್ಲಿ ವಿಚಾರಣೆ ಮಾಡಿದ ನಂತರ ಬಿಗ್‍ಬಾಸ್ ಸೀಸನ್ 6ರ ಸ್ಪರ್ಧಿ ಕವಿತಾ ಗೌಡ ಮತ್ತು ಆ್ಯಂಡಿ ನಡುವಿನ ಜಗಳವೂ ಕೊನೆಗೊಂಡಿದೆ.ಕವಿತಾ, ಆ್ಯಂಡಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಆ್ಯಂಡಿ ಪರವಾಗಿ ಒಂದಷ್ಟು ಬಿಗ್ ಬಾಸ್ ಸ್ಪರ್ಧಿಗಳು ಬ್ಯಾಟ್ ಬೀಸಿದರೇ, ಮತ್ತೊಂದಿಷ್ಟು ಮಂದಿ ಕವಿತಾ  ಪರವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ನೋಟಿಸ್ ನೀಡಿದ್ದರು. ಇಬ್ಬರು ಶನಿವಾರ ವಿಚಾರಣೆಗೆ ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕವಿತಾ, ಆಂಡ್ರ್ಯೂ ನನಗೆ ಕ್ಷಮೆ ಕೇಳಿದ್ದಾರೆ. ಕಿರುಕುಳ ಕೊಟ್ಟಿರುವ ಬಗ್ಗೆ ಅವರು ಒಪ್ಪಿಕೊಂಡಿದ್ದು, ಮತ್ತೆ ಈ ರೀತಿ ಮಾಡಲ್ಲ ಎಂದಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಆ್ಯಂಡಿ ನನ್ನನ್ನು ತಂಗಿ ಎಂದು ಕರೆದಿದ್ದಾನೆ. ನನಗೆ ಅವನು ಕ್ಷಮೆ ಕೇಳಬೇಕಿತ್ತು ಅಷ್ಟೆ ಎಂದಿದ್ದಾರೆ.ವಿಚಾರಣೆಯಲ್ಲಿ ಆಂಡ್ರ್ಯೂ, ನನ್ನಿಂದ ಒಬ್ಬರಿಗೆ ತುಂಬಾ ಬೇಜಾರಾಗಿದೆ ಅಂದರೆ ಖಂಡಿತ ನಾನು ಕ್ಷಮೆ ಕೇಳುವೆ. ಈಗಲೂ ಕವಿತಾ ಮೇಲೆ ನನಗೆ ಗೌರವ ಇದೆ ಅಂತ ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಒಪ್ಪಿಕೊಂಡಿದ್ದಾರೆ. ಗೇಮ್ ನಲ್ಲಿ ಆಗಿರುವ ಕಿರಿಕಿರಿಗೆ ನಾನು ಕವಿತಾಗೆ ಕ್ಷಮೆ ಕೇಳಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.

Edited By

Kavya shree

Reported By

Kavya shree

Comments