'ಸರಿಗಮಪ' ರನ್ನರ್ ಅಪ್  ಆದ ಹನುಮಂತನಿಗೆ ಸಿಕ್ತು ಬಂಪರ್ ಆಫರ್..!!

25 Feb 2019 9:48 AM | Entertainment
404 Report

ಅದೃಷ್ಟ ಅನ್ನೋದು ಅದ್ಯಾವಾಗ ಕೈ ಹಿಡಿಯುತ್ತೋ, ಅದ್ಯಾವಾಗ ಕೈ ಕೊಡುತ್ತೋ ಒಂದು ಗೊತ್ತಿಲ್ಲ… ಅದೃಷ್ಟ ಮಾತ್ರ ಅಲ್ಲ ಜೊತೆಗೆ ಎಫರ್ಟ್ ಕೂಡ ಇರಬೇಕು… ಅದೃಷ್ಟದ ಜೊತೆಗೆ ಎಫರ್ಟ್ ಹಾಕಿ ಗೆದ್ದಿರುವ ಉದಾಹರಣೆ ನಮ್ಮಲ್ಲಿ ತುಂಬಾ ಇವೆ..ಅದೇ ಸಾಲಿಗೆ ಸೇರುವವರು ನಮ್ಮ ಹನುಮಂತಪ್ಪ… ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ' ಸೀಸನ್ 15 ರ ಗ್ರಾಂಡ್ ಫಿನಾಲೆಯಲ್ಲಿ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದು, ಹಾವೇರಿ ಜಿಲ್ಲೆ ಚೀಲೂರು ಬಡ್ನಿ ತಾಂಡಾದ ಕುರಿಗಾಯಿ ಹನುಮಂತ ರನ್ನರ್ ಅಪ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ 'ಸರಿಗಮಪ' ಶೋನಲ್ಲಿ ರನ್ನರ್ ಅಪ್ ಆದವರಿಗೆ ಭಾರಿ ಮೊತ್ತದ ಬಹುಮಾನ ನೀಡಲಾಗಿದೆ. ಹನುಮಂತ ಅವರಿಗೆ 15 ಲಕ್ಷ ರೂ. ಮೊತ್ತದ ಸೈಟ್ ಬಹುಮಾನವಾಗಿ ಸಿಕ್ಕಿದೆ. ಇನ್ನು ಮುಗ್ಧತೆಯಿಂದಲೇ ತಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಹನುಮಂತ ಅವರಿಗೆ ಇದೀಗ ಬಂಪರ್ ಆಫರ್ ಸಿಕ್ಕಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಮಾಹಿತಿಯನ್ನು 'ಸರಿಗಮಪ' ವೇದಿಕೆಯಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ… . ಫಿನಾಲೆ ರೌಂಡ್ ನಲ್ಲಿ ಹನುಮಂತ 'ಅಶ್ವಮೇಧ' ಚಿತ್ರದ 'ಹೃದಯ ಸಮುದ್ರ' ಹಾಡನ್ನು ಹಾಡಿದ್ದು, ಜಡ್ಜಸ್ ಗಳು ಹನುಮಂತ ಹಾಡಿಗೆ ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅರ್ಜುನ್ ಜನ್ಯ, ಹನುಮಂತ ಅವರಿಗೆ ದೊಡ್ಡ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ. ಅವರಿಗಾಗಿ ದೊಡ್ಡ ನಿರ್ದೇಶಕರು ಕಾಯುತ್ತಿದ್ದಾರೆ. ದೊಡ್ಡ ನಿರ್ದೇಶಕರ ಸಿನಿಮಾದಲ್ಲಿ ಹನುಮಂತ ಹಾಡಲಿದ್ದಾರೆ. ಇನ್ನು 2-3 ದಿನದಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ..ಒಟ್ಟಾರೆ ಅದೃಷ್ಟ ಅನ್ನೋದು ಯಾವ್ಯಾಗ ಬೇಕಾದ್ರೂ ಬರಬಹುದು ಅನ್ನೋದಕ್ಕೆ ಹನುಮಂತ ಅವರೇ ಕಾರಣ…

Edited By

Manjula M

Reported By

Manjula M

Comments