ಪ್ಲೀಸ್ ನನಗೆ ಸಹಾಯ ಮಾಡಿ ಎಂದು ಕಣ್ಣೀರಿಟ್ಟ ಜೂನಿಯರ್ ವಿಷ್ಣುವರ್ಧನ್….!!!

23 Feb 2019 5:53 PM | Entertainment
178 Report

ಸ್ಯಾಂಡಲ್’ವುಡ್ ನಲ್ಲಿ ಭಾರೀ ಹೆಸರು ಮಾಡಿರುವ ಸಾಹ ಸಿಂಹ ವಿಷ್ಣು ವರ್ಧನ್ ಅವರನ್ನೇ ಹೋಲುವ ಮತ್ತೊಬ್ಬ ಜೂನಿಯರ್ ವಿಷ್ಣುವರ್ಧನ್ ಅವರನ್ನು ನಾವು ನೋಡಿದ್ದೇವೆ. ಅವರದ್ದೇ ಸ್ಟೈಲ್, ಅವರದ್ದೇ ಅಭಿನಯ ಎಲ್ಲವನ್ನು ಥೇಟ್ ವಿಷ್ಣುದಾದನ ಥರವೇ ಅಭಿನಯ ಮಾಡುವ ಜ್ಯೂನಿಯರ್ ವಿಷ್ಣುವರ್ಧನ್ ಅಲಿಯಾಸ್ .ಡಿ ಅಲಿ ಅವರು ಸದ್ಯ ಹಣದ ನೆರವಿಗಾಗಿ ಕೋರಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಡಿ ಅಲಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಕನ್ನಡದ  ಖ್ಯಾತ ಸ್ಟಾರ್’ಗಳಾದ  ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ರಜನಿಕಾಂತ್ ಸೇರಿದಂತೆ ಹಲವು ನಾಯಕ ನಟರೊಂದಿಗೆ ನಟಿಸಿದ್ದೇನೆ.

ನಾನು 10ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿದ್ದೇನೆ. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು ಇತರೇ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದೇನೆ ಎಂದು  ತಳಿಸಿದ್ದಾರೆ. ಆದರೆ ಇದೀಗ ನನ್ನ ಬಳಿ ಚಿಕಿತ್ಸೆಗೆ ಹಣವಿಲ್ಲ, ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಚಿಕಿತ್ಸೆಗೆ ಬೇಕಾಗುವಷ್ಟು ಹಣವಿಲ್ಲದೆ ಪರದಾಡುವಂತಾಗಿದೆ. ಆದರಿಂದ ಹುಬ್ಬಳ್ಳಿಯಲ್ಲಿ ಫೆಬ್ರವರಿ 26 ರಂದು ನಾನು ಕೆಲ ಜ್ಯೂನಿಯರ್ ನಟರೊಂದಿಗೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದೆನೆ. ಆ ಕಾರ್ಯಕ್ರಮದಿಂದ ಬಂದ ಹಣದಿಂದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದು ತಮ್ಮ ಪರಿಸ್ಥತಿಯನ್ನು ಹೇಳಿಕೊಂಡಿದ್ದಾರೆ. ಅಂದಹಾಗೇ ಕನ್ನಡದ ರಿಯಾಲಿಟಿ ಶೋಗಳಲ್ಲಿ ಇವರು ಕೂಡ ಬಂದಿದ್ದನ್ನು ನೋಡಬಹುದು. ಸುದ್ದಿಗೋಷ್ಠಿ ಬಳಿಕ ವೇದಿಕೆ ಮೇಲಿದ್ದವರು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಮ್ಮ ಕೈಲಾದ ಸಹಾಯ ಮಾಡಿದ್ದೇವೆ,ಯಾಕೆಂದರೆ ನಾವು ಕಲಾವಿದರನ್ನು ಗೌರವಿಸುತ್ತೇವೆ. ಅವರ ಕಲೆಗೆ ಬೆಲೆ ನೀಡುತ್ತೇವೆ. ಅಂದುಕೊಂಡ ಮಟ್ಟಿಗೆ ಅಲಿ ಅವರಿಗೆ ಸಹಾಯ ಮಾಡಲು ಆಗಲಿಲ್ಲ ಆದರೂ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದಿದ್ದಾರೆ.ನಟಿ ವಿಜಯಲಕ್ಷ್ಮಿ ಕೂಡ ಅನಾರೋಗ್ಯದಿಂದ  ಆಸ್ಪತ್ರೆಗೆ ದಾಖಲಾಗಿದ್ದರು. ನನಗೆ ನೆರವು ನೀಡಿ ಎಂದು ಅಳಲು ತೋಡಿಕೊಂಡಿದ್ದರು. ಸದ್ಯ ಕಲಾವಿದರ ಸಂಘದಿಂದ ಅವರಿಗೆ ನೆರವು ಸಿಕ್ಕಿದೆ.

Edited By

Kavya shree

Reported By

Kavya shree

Comments