ಅಭಿಮಾನಿಯ ಪತ್ರ ನೋಡಿ ತಬ್ಬಿಬ್ಬಾದ ಕಿಚ್ಚ ಸುದೀಪ್…!! ಆ ಪತ್ರ ಹೇಗಿತ್ತು ಗೊತ್ತಾ..?

23 Feb 2019 5:35 PM | Entertainment
688 Report

ಸ್ಯಾಂಡಲ್’ವುಡ್ ನ ನಾಯಕರಿಗೆ ಅಭಿಮಾನಿಗಳಿಗೇನು ಕೊರತೆ ಇಲ್ಲ ಬಿಡಿ…ಕೋಟಿ ಕೋಟಿಗಟ್ಟಲೇ ಅಭಿಮಾನಿಗಳನ್ನು ಹೊಂದಿದ್ದಾರೆ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ಸ್… ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೆ ಸಾಕ್ಷಿ… ಅಭಿಮಾನಿಗಳು ತನ್ನ ನೆಚ್ಚಿನ ನಟ-ನಟಿಯರಿಗೆ ಪತ್ರ ಬರೆಯುವುದು ಸಾಮಾನ್ಯವಾಗಿದೆ. ಆದರೆ ಯುವತಿಯೊಬ್ಬಳು ನಟ ಕಿಚ್ಚ ಸುದೀಪ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. 

ಸೌಮ್ಯಾ ಎಂಬಾಕೆ ಸುದೀಪ್‍ಗಾಗಿ ತನ್ನ ರಕ್ತದಲ್ಲಿಯೇ ಪತ್ರ ಬರೆದಿದ್ದಾರೆ. ಸುದೀಪ್ ಅವರನ್ನು ನೋಡಬೇಕು ಎಂಬ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿದ್ದಾರೆ. ಆದರೆ ಸೌಮ್ಯ ಬರೆದ ಪತ್ರವನ್ನು ನೋಡಿ ಕೋಪ ಮಾಡಿಕೊಂಡು ಮತ್ತೆ ರೀತಿ ಮಾಡಬೇಡಿ ಎಂದು ಕಿಚ್ಚ ಸುದೀಪ್ ಬುದ್ದಿವಾದ ಹೇಳಿದ್ದಾರೆ.

ನನ್ನ ಹೆಸರು ಸೌಮ್ಯ. ನನಗೆ ತಂದೆ ತಾಯಿ ಇಲ್ಲ. ಅಂದರೆ ತೀರಿಕೊಂಡಿದ್ದಾರೆ. ನಾನು ನಿಮ್ಮ ಭೇಟಿಗಾಗಿ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಭೇಟಿಯಾಗಲೂ ಸಾಧ್ಯವಾಗಿಲ್ಲ. ಅದಕ್ಕೆ ಈಗ ನನ್ನ ರಕ್ತದಲ್ಲಿ ಈ ಪತ್ರ ಬರೀತಿದ್ದೀನಿ. ನನಗೆ ನಿಮ್ಮ ಸಂಘ ಮತ್ತು ನಿಮ್ಮ ಜೊತೆ ಇರುವ ಒಬ್ಬ ವ್ಯಕ್ತಿಯನ್ನು ನಿಮ್ಮನ್ನು ಭೇಟಿ ಮಾಡಿಸುವಂತೆ ತುಂಬಾ ಕೇಳಿಕೊಂಡೆ. ಆದರೆ ಅವರಿಂದ ನಿರಾಸೆ-ನೋವು ಜಾಸ್ತಿಯಾಗಿದೆ. ಹೀಗಾಗಿ ಈ ನನ್ನ ಪ್ರಯತ್ನಕ್ಕೆ ದಯವಿಟ್ಟು ನೀವೇ ಒಂದು ದಿನ ನನ್ನನ್ನು ಭೇಟಿ ಮಾಡಬೇಕು. ನೀವೇ ದಿನಾಂಕವನ್ನು ಹೇಳಿ. ರಾಕೇಶ್ ಮತ್ತು ಮಂಜಣ್ಣ ದಾವಣಗೆರೆ ಇವರಿಗೆ ನಾನು ಗೊತ್ತು ಎಂದು ಬರೆದಿದ್ದಾರೆ. ಅಭಿಮಾನಿ ಪತ್ರವನ್ನು ನೋಡಿ ಸುದೀಪ್ ಅವರು, “ಅವರ ಅಭಿಮಾನ ನೋಡಿ ನನಗೆ ಖುಷಿಯಾಯಿತು. ಆದರೆ ರಕ್ತದಲ್ಲಿ ಪತ್ರ ಬರೆದಿದ್ದು ನೋಡಿ ನೋವಾಯಿತು. ಸೌಮ್ಯಾ ಅವರ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಖಂಡಿತ ನಾನು ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೆ ದಯವಿಟ್ಟು ಹೀಗೆಲ್ಲ ಯಾರೂ ಮಾಡಬೇಡಿ. ನನ್ನ ಮಾತಿನ ಮೇಲೆ ಗೌರವ ಇದ್ದರೆ ಇನ್ನೊಮ್ಮೆ ಈ ರೀತಿ ಮಾಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಹುಚ್ಚು ಅಭಿಮಾನ ಎನ್ನುವುದು ಇದನ್ನೆ ಅನ್ನಿಸುತ್ತದೆ… ಹಾಗಾಗಿ ಅಭಿಮಾನ ಮನಸ್ಸಿನಲ್ಲಿ ಮಾತಿನಲ್ಲಿ ಇರಬೇಕು ಹೊರತು ಈ ರೀತಿ ಹುಚ್ಚು ಹುಚ್ಚಾಗಿ ಏನು ಮಾಡಬಾರದು ಎಂದಿದ್ದಾರೆ..

Edited By

Manjula M

Reported By

Manjula M

Comments