ಆ ಪ್ರೊಡ್ಯೂಸರ್ ಮನೆ ಮೇಲೆ ಐಟಿ ದಾಳಿ ನಡೆಸಿ ಎಂದಿದ್ಯಾಕೆ ಬಿಗ್'ಬಾಸ್ ಪ್ರಥಮ್…!!!

23 Feb 2019 4:59 PM | Entertainment
495 Report

ಕೆಲ ದಿನಗಳ ಹಿಂದೆ ಸ್ಯಾಂಡಲ್’ವುಡ್’ನ್ನೇ ನಡುಗಿಸಿದ ಘಟನೆ ನಡೆಯಿತು. ಸಿನಿಮಾ ಆ್ಯಕ್ಟರ್ 'ಗಳುಮತ್ತು ಕೆಲ ನಿರ್ಮಾಪಕ ಮೇಲೆ ಐಟಿ ದಾಳಿ ನಡೆಯಿತು. ಇದೀಗ ಬಿಗ್​ಬಾಸ್ ಖ್ಯಾತಿಯ ಪ್ರಥಮ್ ಆ ಪ್ರೊಡ್ಯೂಸರ್ ಮನೆ ಮೇಲೆ ಐಡಿ ದಾಳಿ ಮಾಡ್ಬೇಕು ಅಂತ ಹೇಳಿರುವ  ಹೇಳಿಕೆ ವೈರಲ್ ಆಗಿದೆ. ಅಂದಹಾಗೇ ನಟ ಪ್ರಥಮ್ ಅವರೇ ನಟಿಸಿ ನಿರ್ದೇಶಿಸಿರುವ ಸಿನಿಮಾ ನಟ ಭಯಂಕರ ಚಿತ್ರದ ಫಸ್ಟ್ ಲುಕ್ ರಿಲೀಸ್ ಸಂದರ್ಭದಲ್ಲಿ ಈ ಮಾತು  ಹೇಳಿದ್ದಾರೆ. ಅಂದಹಾಗೇ ಪ್ರಥಮ್ ಹೀಗಂದಿದ್ಯಾಕೆ, ಯಾವ ನಿರ್ಮಾಪಕರ ಬಗ್ಗೆ ಹೇಳಿದ್ದಾರೆ ಎಂದು ಯೋಚಿಸ್ತಿದ್ದೀರಾ…ಹಾ ಹೌದು ಅದೇ ಒಳ್ಳೆ ಹುಡುಗ ಪ್ರಥಮ್, ಆ ಹೇಳಿಕೆ ಹೇಳಿದ್ದು ಕೇವಲ ಮಾತಿಗಾಗಿ, ಪ್ರಚಾರಕ್ಕಾಗಿ.

ಸ್ಟೈಲಿಶ್​ ಲುಕ್​ನಲ್ಲಿ ಹೆಲಿಕ್ಯಾಪ್ಟರ್​​​ ಮುಂದೆ ನಟ ಭಯಂಕರ ಪ್ರಥಮ್ ಪೋಸ್ ಕೊಟ್ಟಿದ್ದಾರೆ. ಅದೇ ಪೋಸ್ಟರ್​ನಲ್ಲಿ ‘ಈ ಸಿನಿಮಾ ರಿಲೀಸ್ ಆದ್ಮೇಲೆ, ನಮ್ಮ ಪ್ರೊಡ್ಯೂಸರ್​ ಮನೆ ಕೂಡ ಹುಡುಕ್ಕೊಂಡ್ ಬಂದು ಐಟಿ ರೈಡ್ ಮಾಡ್ಬೇಕು. ಆ ರೇಂಜ್​ಗೆ ಸೂಪರ್ ಹಿಟ್ ಮಾಡಬೇಕೆಂದು ಕನ್ನಡಿಗರಲ್ಲಿ ಕೇಳಿಕೊಂಡಿದ್ದಾರೆ. ಹೀಗಂತಾ ತಮ್ಮದೇ ಸ್ಟೈಲ್​​ನಲ್ಲಿ ಡೈಲಾಗ್ ಬರೆದುಕೊಂಡಿದ್ದಾರೆ. ಹೇಳಿ –ಕೇಳಿ ಪ್ರಥಮ್ ಹೇಳಿಕೆಗಳು ಒಮ್ಮೊಮ್ಮೆ ಕಾಂಟ್ರೋವರ್ಸಿಗೆ ಸಿಕ್ಕಿಹಾಕಿಕೊಳ್ಳುತ್ತವೆ. ಈಗಷ್ಟೇ ನಟ ಭಯಂಕರ ಪೋಸ್ಟರ್ ರಿಲೀಸ್ ಗೆ ದರ್ಶನ್ ರ್'ಗಿಂತ ದೊಡ್ಡ ಸ್ಟಾರ್ ನ್ನು ಕರೆಸಿ ರಿಲೀಸ್ ಮಾಡುವುದಾಗಿ ಹೇಳಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸದ್ಯ ಪ್ರಥಮ್ ಮತ್ತೊಂದು ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ನಲ್ಲಿದ್ದ ಸ್ಪರ್ಧಿ ಭುವನ್ ಜೊತೆ ಜಗಳ ಮಾಡಿಕೊಂಡಿದ್ದರು. ಈಗ ಮತ್ತೆ ಅದೇ ಸುದ್ದಿಯಲ್ಲಿದ್ದಾರೆ. ಪ್ರಥಮ್ ಜೊತೆ ಜಗಳ ಮಾಡಿಕೊಂಡಿದ್ದಕ್ಕಾಗಿ  'ಗೆಬಂಧನದ ಭೀತಿ ಎದುರಾಗಿದೆ.

ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ನಟ ಭಯಂಕರ ಸಿನಿಮಾ ನಿರ್ಮಾಣವಾಗ್ತಿದೆ. ಸುಷ್ಮಿತಾ ಜೋಷಿ ಈ ಸಿನಿಮಾದಲ್ಲಿ ಪ್ರಥಮ್​ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುವ ಪ್ರಥಮ್ ರಾಜಕೀಯ ಸಂಬಂಧ ವಿಚಾರಗಳಲ್ಲಿಯೂ ಭಾಗೀಯಾಗುತ್ತಲೇ ಇರುತ್ತಾರೆ. ಪ್ರಥಮ್ ಮತ್ತೊಂದು ಸಿನಿಮಾ ಬಿಲ್ಡಪ್ಎಂಬ ಹೆಸರಿನ ಚಿತ್ರದಲ್ಲಿಯೂ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ಇದೆ. 

Edited By

Kavya shree

Reported By

Kavya shree

Comments