ಗ್ರಾಹಕರಿಗೆ ಸಿಹಿ ಸುದ್ದಿ : ಕೇವಲ 20. ರೂ ಅಷ್ಟೇ ಕಟ್ಟಿ ಪಡೆಯಿರಿ 1 ಲಕ್ಷ...?!!!

23 Feb 2019 2:18 PM | Entertainment
417 Report

ದೇಶದ  ಪ್ರಸಿದ್ಧ ಪ್ರಮುಖ ಡಿಜಿಟಲ್ ಸೇವಾ ಸಂಸ್ಥೆ ಮೊಬಿಕ್ವಿಕ್ ತನ್ನ ಬಳಕೆದಾರರಿಗೆ ಒಂದು ಗುಡ್ ನ್ಯೂಸ್ ನೀಡಿದೆ.  ಆ್ಯಪ್ ನಲ್ಲಿ ಲೈಫ್ ಇನ್ಶೂರೆನ್ಸ್ ನ್ನು ಬಿಡುಗಡೆ ಮಾಡಿದೆ.  ಐಬಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಮೊಬಿಕ್ವಿಕ್ ಅದರ ವಿವಿಧ ರೀತಿಯ ಮೈಕ್ರೋ ಇನ್ಶುರೆನ್ಸ್ ಉತ್ಪನ್ನವನ್ನು ಪರಿಚಯಿಸಿದೆ. ಅತೀ ಕಡಿಮೆ ಮೊತ್ತದಲ್ಲಿ   ಒಂದು ಲಕ್ಷಜೀವ ವಿಮೆ ನೀಡುತ್ತಿದೆ.

ಮೊಬಿಕ್ವಿಕ್ ಕಂಪನಿ ಅತಿಕಡಿಮೆ ಮೊತ್ತ ರೂ. 20 ಮಾಸಿಕ ಪ್ರೀಮಿಯಂ ಮೇಲೆ ಗ್ರಾಹಕರಿಗೆ ರೂ. 1 ಲಕ್ಷ ಜೀವ ವಿಮೆ ನೀಡುತ್ತಿದೆ. ಮೊಬಿಕ್ವಕ್ ವಿಮಾ ಮೂಲಕ ಗ್ರಾಹಕರಿಗೆ ಮೂರು ಆಯ್ಕೆಗಳನ್ನು ನೀಡಿದೆ. ಇದರಲ್ಲಿ ಮೂರು ತೆರನಾದ ವಿಮಾ ಪಾಲಿಸಿಗಳನ್ನು ಪರಿಚಯಿಸಿದೆ. ತಿಂಗಳಿಗೆ ರೂ. 20, ರೂ. 30, ರೂ. 40 ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತಿಂಗಳ ಪ್ರೀಮಿಯಂ ಮತ್ತು ವಾರ್ಷಿಕ ವಿಮೆ ಎಂಬ ಎರಡು ತೆರೆನಾದ ವಿಮಾಪಾಲಿಸಿಗಳಿವೆ. ಮಾಸಿಕ ರೂ. 20 ಪ್ರೀಮಿಯಂ 1 ಲಕ್ಷ ರೂಪಾಯಿಯದ್ದಾಗಿದೆ. - ರೂ. 30 ಮಾಸಿಕ ಪ್ರೀಮಿಯಂ ರೂ. 1.5 ಲಕ್ಷ ರೂಪಾಯಿ ವಿಮೆ ಯೋಜನೆಯಾಗಿದೆ.  ರೂ. 40 ಮಾಸಿಕ ಪ್ರೀಮಿಯಂ ರೂ. 2 ಲಕ್ಷ ವಿಮೆ ಯೋಜನೆ ಹೊಂದಿದೆ.ನೀವ್ ಮಾಡಬೇಕಿದ್ದು ಇಷ್ಟೆ. ಮೊಬಿಕ್ವಿಕ್ ಆ್ಯಪ್ ಡೌನ್ಲೋಡ್ ಮಾಡಿಜೀವ ವಿಮೆ ಪಡೆಯಲು ಕೇವಲ ಒಂದು ನಿಮಿಷ ಸಾಕು. ಇದು ಎರಡನೇ ಡಿಜಿಟಲ್ ಇನ್ಸೂರೆನ್ಸ್‌ ಆಗಿದ್ದು, ನವೆಂಬರ್ 2018 ರಲ್ಲಿ ಅಪಘಾತ ವಿಮೆಯನ್ನು ಬಿಡುಗಡೆ ಮಾಡಲಾಗಿತ್ತು.

Edited By

Kavya shree

Reported By

Kavya shree

Comments