ಕವಿತಾಳ ಹೆಡ್ ಮಸಾಜ್ ಬಗ್ಗೆ ಬಿಚ್ಚಿಟ್ಟ ಬಿಗ್ ಬಾಸ್ ಆ್ಯಂಡಿ..?!!!

23 Feb 2019 1:24 PM | Entertainment
219 Report

ಬಿಗ್’ಬಾಸ್ ಸೀಸನ್ -6 ಮುಗಿದ ಮೇಲೆ ಕವಿತಾ ಮತ್ತು ಆ್ಯಂಡಿ ಕಿತ್ತಾಡಿಕೊಂಡಿದ್ದು ಹಳೆಯ ವಿಚಾರ. ಬಿಗ್ ಬಾಸ್ ಮನೆಯಲ್ಲಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನೆಂದು, ಹೊರ ಬಂದ ಮೇಲೆ ಆ್ಯಂಡಿ ವಿರುದ್ಧ ಕವಿತಾ ದೂರು ಕೊಟ್ಟಿದ್ದರು. ಆ ವಿಚಾರವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಈ ಸಂಬಂಧ ಆ್ಯಂಡಿ ಇಂದು ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ. ರಾಜ್ಯ ಮಹಿಳಾ ಆಯೋಗವು ಕವಿತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಆ್ಯಂಡಿ ಹಾಗೂ ಕವಿತಾರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಆ್ಯಂಡಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಕವಿತಾ ಹಾಜರಾಗಬೇಕಿದೆ.

ನಾವು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆ್ಯಂಡಿ ನನ್ನೊಂದಿಗೆ ಕೆಟ್ಟದಾಗಿ ಬಿಹ್ವೇವ್ ಮಾಡಿದ್ದಾರೆ. ಖಾಸಗಿ ವಾಹಿನಿ ಶೋ ವೊಂದರಲ್ಲಿ ಅವರ ವರ್ತನೆ ನನಗೆ ಹಿಡಿಸಲಿಲ್ಲ. ಹಾಗಾಗಿ  ಆ್ಯಂಡಿ ವಿರುದ್ಧ ಕವಿತಾ ದೂರು ಕೊಡಲು  ಮುಂದಾದರು. ಆ್ಯಂಡಿ ಟಾಸ್ಕ್’ನಲ್ಲಿ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದರು.ನಾನು ಹೊರ ಬಂದ ಮೇಲೆ ವೂಟ್ ನಲ್ಲಿ ನೋಡಿ ಆ್ಯಂಡಿ ವಿರುದ್ಧ ದೂರು ಕೊಡಬೇಕೆಂದು ನಿರ್ಧರಿಸಿದೆ.ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಆಗಾಗದೇ ಇದ್ದ ಲೈಂಗಿಕ ಕಿರುಕುಳ ಈಗ ಹೇಗಾಯ್ತು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ.  ಅಂದಹಾಗೇ ಬಿಗ್ ಬಾಸ್ ಶೋ ಗೆಲ್ಲಲಾಗಲಿಲ್ಲವೆಂದು ಹೀಗೆಲ್ಲಾ ಬೇರೊಬ್ಬರ ಮೇಲೆ ಆರೋಪ ಮಾಡುವುದು ಸರಿಯಿಲ್ಲವೆಂದು ಆ್ಯಂಡಿ ವಿಚಾರಣೆ ವೇಳೆ ಹೇಳಿದ್ದಾರೆ.

Edited By

Kavya shree

Reported By

Kavya shree

Comments