ವಂಚನೆ ಆರೋಪದ ಮೇಲೆಖ್ಯಾತ ನಟಿ ವಿರುದ್ಧ ಕೇಸ್..!!!

23 Feb 2019 12:37 PM | Entertainment
181 Report

ಕೆಲ ಸೆಲೆಬ್ರಿಟಿಗಳು ಕೆಲವೊಂದು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಆ ನಂತರ ಕೈ ಎತ್ತುವುದು ಹೊಸ ಸುದ್ದಿಯೇನಲ್ಲಾ, ಈಗಾಗಲೇ ಬಾಲಿವುಡ್ ‘ನ ಒಂದಷ್ಟು ತಾರೆಗಳು ವಂಚನೆ ಆರೋಪ ಎದುರಿಸುತ್ತಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಖ್ಯಾತ ನಟಿ ಕೂಡ ಸೇರಿದ್ದಾರೆ. ನಟಿ ಜೊತೆ 7 ಮಂದಿಯ ವಿರುದ್ಧ  ದೂರುದಾರ ಕಂಪ್ಲೇಂಟ್ ಕೊಟ್ಟಿದ್ರೂ, ಪೊಲೀಸರು ಯಾವ ಆ್ಯಕ್ಷನ್ ತೆಗೆದುಕೊಂಡಿರಲಿಲ್ಲ, ಯಾವಾಗ ದೂರುದಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಂತರ ನಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೇ 7 ಮಂದಿ ವಿರುದ್ಧ 37 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ.

ದೂರುದಾರ ದೀಪಕ್ ಎಂಬುವವರು, ಸೋನಾಕ್ಷಿ ಸೇರಿ 7 ಮಂದಿ ವಿರುದ್ಧ ದೂರು ನೀಡಿದ್ದಾರೆ. ಸೆಪ್ಟೆಂಬರ್ 30ರಂದು ನಡೆದ ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿ ಸಿನ್ಹಾ ಬರಬೇಕಿತ್ತು. ಕಂಪನಿಯೊಂದರ ಜೊತೆ ದೀಪಕ್ ಒಪ್ಪಂದ ಮಾಡಿಕೊಂಡಿದ್ದರು. ಆ ಕಂಪನಿ ಮಾಲೀಕರು, ಸೋನಾಕ್ಷಿ ಜೊತೆ ಮಾತುಕತೆ ನಡೆಸಿ, ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಬಗ್ಗೆ ಸೋನಾಕ್ಷಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಒಪ್ಪಂದದ ಮೇಲೆ 37 ಲಕ್ಷ ರೂಪಾಯಿಯನ್ನು ಕಂಪನಿ ಹಾಗೂ ಸೋನಾಕ್ಷಿ ಖಾತೆಗೆ ಹಾಕಲಾಗಿತ್ತು. ಆದರೆ ಹಣ  ತೆಗೆದುಕೊಂಡು ನಟಿ ಕಾರ್ಯಕ್ರಮಕ್ಕೆ ಗೈರಾದರು. ಆ ನಂತರ ದೀಪಕ್ ಹಣ ವಾಪಸ್ ಕೇಳಿದ್ದಾರೆ.ಆದರೆ ಸೋನಾಕ್ಷಿ ಹಣ ವಾಪಸ್ ಕೊಡದೇ ಸತಾಯಿಸಿದ್ದಾರೆ, ಹಣ ಸಿಗದೇ ದೀಪಕ್ ಡಿಸ್ಟರ್ಬ್ ಆಗಿದ್ದಾರೆ.ಮೂರು ತಿಂಗಳ ಹಿಂದೆ ದೂರು ನೀಡಿದ್ದರು. ದೂರು ದಾಖಲಾಗಿರಲಿಲ್ಲ. ನಂತ್ರ ದೀಪಕ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದರು. ಈಗ ಸೋನಾಕ್ಷಿ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Edited By

Kavya shree

Reported By

Kavya shree

Comments