ಶ್ರೀದೇವಿ ಹಾಕಿದ ಕೊನೆಯ ಪೋಸ್ಟ್ ಈಗಲೂ ಹಾಗೆ ಇದೆ..!! ಯಾವುದು ಗೊತ್ತಾ…?

23 Feb 2019 12:32 PM | Entertainment
155 Report

ಶ್ರೀದೇವಿ… ಬಾಲಿವುಡ್‍ ನ ಖ್ಯಾತ ನಟಿ ಶ್ರೀದೇವಿ ನಮ್ಮನ್ನೆಲ್ಲ ಅಗಲಿ ನಾಳೆಗೆ ಒಂದು ವರ್ಷ ಕಳೆಯುತ್ತಿದೆ.. ಶ್ರೀದೇವಿ ಮಾತ್ರ ನಮ್ಮೊಂದಿಗಿಲ್ಲ.. ಆದರೆ ಅವರ ನೆನಪು ಮಾತ್ರ ಯಾರಲ್ಲೂ ಮಾಸಿಲ್ಲ.. ಬಾವಿವುಡ್ ಸಿನಿರಂಗವನ್ನು ಆಳಿದ ನಟಿ ಈಕೆ... ಆದರೆ ಅವರ ಇನ್‍ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಅಲ್ಲಿ ಅವರ ಕುಟುಂಬ ಸದಸ್ಯರ ಜೊತೆಗೆ ಕಾಣಿಸುತ್ತಾರೆ. ಅವರ ಪೋಸ್ಟ್ ಇನ್ನೂ ಹಾಗೇಯೆ ಇದೆ.. ಪತಿ ಬೋನಿ ಕಪೂರ್, ಪುತ್ರಿ ಖುಷಿ ಕಪೂರ್ ಅವರೊಂದಿಗೆ ಈ ಫೋಟೋದಲ್ಲಿ ಶ್ರೀದೇವಿ ನಗುನಗುತ್ತಾ ಪೋಟೋಗೆ ಪೋಜ್ ಕೊಟ್ಟಿದ್ದಾರೆ..  

ಅದು ದುಬೈನಲ್ಲಿ ನಡೆದ ಸಹೋದರ ಸಂಬಂಧಿ ಮದುವೆ ಸಮಯದಲ್ಲಿ ತೆಗೆದ ಚಿತ್ರ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ಅದು ಶ್ರೀದೇವಿಯವರ ಕೊನೆ ಪೋಸ್ಟ್. ಕಳೆದ ವರ್ಷ ಫೆ.24 ರಂದು ದುಬೈನ ಐಷಾರಾಮಿ ಹೋಟೆಲೊಂದರ ಬಾತ್‍ ಟಬ್‍ ನಲ್ಲಿ ಶ್ರೀದೇವಿ ಸಾವನ್ನಪ್ಪಿದ್ದರು. ಅವರ ಸಾವು ನಿಗೂಢ ಎಂದು ಪೂರ್ತಿಯಾಗಿ ಹೇಳಲಾಗದಿದ್ದರೂ ಹೇಗೆ ಸತ್ತರು ಎಂಬುದಕ್ಕೆ ಒಪ್ಪಬಹುದಾದಂಥ ಸ್ಪಷ್ಟ ಕಾರಣ ಇನ್ನೂ ಕೂಡ ಬಹಿರಂಗವಾಗಿಲ್ಲ. 5 ದಶಕಗಳ ಕಾಲ ವೃತ್ತಿ ಜೀವನದಲ್ಲಿದ್ದ ಅವರು ಮಧ್ಯೆ ಸ್ವಲ್ಪ ಬ್ರೇಕ್ ತೆಗೆದುಕೊಂಡು 2012ರಲ್ಲಿ "ಇಂಗ್ಲಿಷ್ ವಿಂಗ್ಲಿಷ್" ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. ನಂತರ "ಮಾಮ್" ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು. "ಝೀರೋ" ಶ್ರೀದೇವಿ ನಟಿಸಿದ ಕೊನೆಯ ಚಿತ್ರವಾಗಿತ್ತು.

Edited By

Manjula M

Reported By

Manjula M

Comments