ಪಾಕ್ ಕಲಾವಿದರನ್ನು ನಿಷೇಧ ಮಾಡಿದ್ರೆ ನಾನು ದೇಶ ಬಿಡ್ತೀನಿ ಎಂದ ಕಿಂಗ್ ಖಾನ್..!?

23 Feb 2019 9:56 AM | Entertainment
191 Report

ಇತ್ತಿಚಿಗೆ ಪುಲ್ವಾಮದಲ್ಲಿ ನಡೆದ ಭಾರತೀಯ ಸೈನಿಕರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ನಂತರ ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಿವೆ.. ಇದರ ಜೊತೆ ಸುಳ್ಳು ಸುದ್ದಿಗಳು ಕೂಡ ಹೆಚ್ಚು ಪ್ರಸಾರವಾಗುತ್ತಿವೆ.. ಸದ್ಯ ಖ್ಯಾತ ಬಾಲಿವುಡ್‌ ನಟ ಶಾರುಖ್‌ ಖಾನ್‌, 'ಭಾರತದಲ್ಲಿ ಪಾಕಿಸ್ತಾನ ಕಲಾವಿದರನ್ನು ನಿಷೇಧಿಸಿದರೆ ತಾನು ಭಾರತ ಬಿಡುತ್ತೇನೆ' ಎಂದು ಹೇಳಿಕೆ ನೀಡಿದ್ದಾರೆಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.

ಆದರೆ ಇದನ್ನೆಲ್ಲಾ ನಿಜಕ್ಕೂ ಶಾರುಖ್‌ ಖಾನ್‌ ಹೀಗೆ ಹೇಳಿಕೆ ನೀಡಿದ್ದರಾ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಗೊತ್ತಾಗಿದೆ. ಆದರೆ ನಿಜವಾಗಿಯೂ ಶಾರೂಖ್ ಖಾನ್‌ ಈ ರೀತಿಯ ಯಾವ ಹೇಳಿಕೆಯನ್ನೂ ನೀಡಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳೂ ವರದಿ ಮಾಡಿಲ್ಲ. ಬದಲಾಗಿ ಫೆ.15ರಂದು ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿ, ಹುತಾತ್ಮ ಯೋದರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು. ಫೆ.18ರಂದು ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ ಭಾರತದ ಚಲನಚಿತ್ರೋದ್ಯಮದಲ್ಲಿರುವ ಎಲ್ಲಾ ಪಾಕಿಸ್ತಾನಿ ಕಲಾವಿದರಿಗೆ ನಿಷೇಧ ಹೇರಿತ್ತು. ಈ ಬಗ್ಗೆ ಶಾರುಖ್‌ ಖಾನ್‌ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ತಿಳಿದುಬಂದಿದೆ.

Edited By

Manjula M

Reported By

Manjula M

Comments