ರಿಷಬ್ ಶೆಟ್ಟಿಗೆ ಸರ್ಪ್ರೈಸ್ ಕೊಟ್ಟ ಸಿಎಂ ಕುಮಾರಸ್ವಾಮಿ..!!

22 Feb 2019 4:40 PM | Entertainment
12585 Report

ರಾಜ್ಯದ ಮುಖ್ಯಮಂತ್ರಿಯಾದ  ಎಚ್ ಡಿ ಕುಮಾರಸ್ವಾಮಿವರು ರಾಜಕೀಯಕ್ಕೂ ಬರುವ ಮೊದಲೇ  ಸಿನಿಮಾ ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಕೆಲಸ ಮಾಡಿದ್ದಾರೆ ಎಂಬುದು ಕೂಡ ಎಲ್ಲರಿಗೂ ತಿಳಿದೆ ಇದೆ.. ಚಿತ್ರರಂಗಕ್ಕೂ ಸಿಎಂ ಕುಮಾರಸ್ವಾಮಿಗೂ ಒಂಥರಾ ಅವಿನಾಭಾವ ಸಂಬಂಧವಿದೆ... ನಿನ್ನೆ ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಟಾಟನೆ ಕಾರ್ಯಕ್ರಮನಡೆಯಿತು. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಾಲನೆ ನೀಡಿದರು...

ಸಿನಿಮಾಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾ ಇದೇ ವೇಳೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ರಿಷಬ್ ಶೆಟ್ಟಿ ಅವರನ್ನ ಗಮನಿಸಿದ ಮುಖ್ಯಮಂತ್ರಿ ''ನೋಡಿ ಇಲ್ಲೇ ರಿಷಬ್ ಶೆಟ್ಟಿ ಇದ್ದಾರೆ, ವೇದಿಕೆ ಮೇಲೆ ಅನಂತ್ ನಾಗ್ ಅವರಿದ್ದಾರೆ. ಇವರ ಜೋಡಿಯಲ್ಲಿ ಬಂದ ಸ.ಹಿ.ಪ್ರಾ.ಶಾಲೆ ಕಾಸರಗೂಡು, ಕಡಿಮೆ ಬಜೆಟ್ ಆಗಿದ್ರೂ, ತುಂಬಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸಿನಿಮಾಗೆ ಗುಣಮಟ್ಟದ ಕಥೆ ಮತ್ತು ಮೇಕಿಂಗ್ ಬೇಕು'' ಎಂದು ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ರಿಷಬ್ ಶೆಟ್ಟಿ ತುಂಬಾ ಖುಷಿ ಪಟ್ಟರು.. ರಿಷನ್ ಶೆಟ್ಟಿ ಮುಖ್ಯಮಂತ್ರಿಯವರು ನನ್ನ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಸಂತಸ ಹಂಚಿಕೊಂಡರು

Edited By

Manjula M

Reported By

Manjula M

Comments