ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗಬೇಕಿದ್ದ ಈ ಖ್ಯಾತ ನಟ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ…?!!!

22 Feb 2019 2:27 PM | Entertainment
4903 Report

ಅಂದಹಾಗೇ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಹೆಸರು ಮಾಡಿದ ಆ ಖ್ಯಾತ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ಯಾರಿಗೂ ಅರಗಿಸಿಕೊಳ್ಳಲಾಗಲಿಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಚಿತ್ರದಲ್ಲೇ ಯಶಸ್ಸಿನ ಶಿಖರವೇರಿದ್ರು ಆ ನಟ. ಅವರದು ಒಂದು ಸೆನ್ಸೇಷನ್ . 2014 ರ ಜನವರಿ 5 ರಂದು ತಾವು ವಾಸ ಮಾಡುತ್ತಿದ್ದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟ ಸುದ್ದಿ ಕೇಳಿ ಇಡೀ ಟಾಲಿವುಡ್ ಬೆಚ್ಚಿಬಿದ್ದಿತ್ತು. ಅಂದಹಾಗೇ ಬಾಳಿ ಬದುಕಬೇಕಿದ್ದ ಆ ಹ್ಯಾಂಡ್ಸಮ್ ಹೀರೋ ಅತೀ ಚಿಕ್ಕ ವಯಸ್ಸಿಗೇ ಇಹಲೋಕ ತ್ಯಜಿಸಿದರು.

ನಟ ಉದಯ್ ಕಿರಣ್ ಹೆಸರು ಕೇಳಿರಬೇಕಲ್ಲವೇ, ಪ್ರೇಮಕಥೆಯಾಧರಿತ  ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಉದಯ್ ಕಿರಣ್ ಸಾವಿಗೆ ಒಂದು ಕಾರಣವಿತ್ತು. ಮನಸ್ಸಂತಾ ನುವ್ವೇ, ನುವ್ವು ನೇನು, ನೀ ಸ್ನೇಹಂ, ಚಿತ್ರಂಗಳಲ್ಲಿ ನಟಿಸಿದ ಉದಯ್ ಅವರು ಅಚಾನಕ್ ಆಗಿ ಸಾವೀಗೀಡಾದರು.  ಅದರ ರಹಸ್ಯವೇನು,ಅಂತದ್ದೇನಾಗಿತ್ತು ನಟ ಉದಯ್ ಕಿರಣ್ ಗೆ  ಹೀಗೆ ಸಾಕಷ್ಟು ಅನುಮಾನದ ಅಲೆಗಳು ಹಬ್ಬಿದ್ರೂ ಉತ್ತರ ಮಾತ್ರ ಕ್ಷಣಕ್ಕೆ ಸಿಕ್ಕಿರಲಿಲ್ಲ.ಉದಯ್ ಕಿರಣ್ ನಟಿಸಿದ ಮೊದಲ ಮೂರು ಚಿತ್ರಗಳು ಸೂಪರ್ ಹಿಟ್ ಆದವು.  ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ಗಳು ಈ ಆಕರ್ಷಕ ನಟನ ಮೇಲೆ ಬಿದ್ದಿತ್ತು. ದಿನ ಕಳೆದಂತೇ ಉದಯ್ಗೂ' ಡಿಮ್ಯಾಂಡ್ ಜಾಸ್ತಿಯಾಯ್ತು.

ಖುದ್ದು ಮೆಗಾಸ್ಟಾರ್ ಚಿರಂಜೀವಿನೇ ತಮ್ಮ ಮಗಳನ್ನು ಉದಯ್’ಗೆ ಕೊಡಲು ಮುಂದಾಗಿದ್ರಂತೆ. ಮದುವೆ ಮಾತುಕತೆ ನಡೆಸಿದ ಅವರು ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ರಂತೆ. ಈ ವಿಚಾರ ಸಿನಿಮಾ ಇಂಡಸ್ಟ್ರಿಯ ಒಂದಷ್ಟು ಮಂದಿಗೆ ಮಾತ್ರ ತಿಳಿದಿತ್ತು. ಆದರೆ ಕೆಲವು ದಿನಗಳ ನಂತರ ಎರಡು ಮನೆಯವರು ಮದುವೆ ಕ್ಯಾನ್ಸಲ್ ಮಾಡಿದರು. ಆದರೆ ಮದುವೆ ಕ್ಯಾನ್ಸಲ್ ಆಗಲು ಏನು ಕಾರಣ ಮಾತ್ರ ಇದೂವರೆವಿಗೂ ರಹಸ್ಯವಾಗಿಯೇ ಉಳಿದು ಹೋಯ್ತು. ಯಾರೊಬ್ಬರ ಮನೆಯವರು ಈ ವಿಚಾರವಾಗಿ ಬಾಯಿ ಬಿಡಲೇ ಇಲ್ಲ. ಇನ್ನು ಸಮಯ ಕಳೆದಂತೇ ಉದಯ್ ಕಿರಣ್ ಅವರಿಗೆ ಅವಕಾಶಗಳು ಕಡಿಮೆಯಾಗ ತೊಡಗಿದವು. ಉದಯ್ ಜೊತೆ ಸಿನಿಮಾ ಮಾಡಬಾರದು ಅಂತಾ ಒತ್ತಡ ಬರುತ್ತಿವೆ ಎಂದು ಕೆಲವರು ಓಪನ್ ಆಗಿ ಹೇಳಿಕೆ ಕೊಟ್ಟಿದ್ದರು.

ಉದಯ್'ಗೆ ಅವಕಾಶಗಳು ಕಡಿಮೆಯಾಗ ತೊಡಗಿದವು. ಆ ನಂತರ ಉದಯ್ ವಿಶೀತಾ ಎಂಬಾಕೆಯನ್ನು ಮದುವೆ ಮಾಡಿಕೊಂಡರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡರು. ಅಂದಹಾಗೇ ಆ ಡೆತ್ ನೋಟ್ ಕೂಡ ಬರೆದಿಟ್ಟಿದ್ದರು. ಆ ಪತ್ರದಲ್ಲಿ, ಸಿನಿಮಾ ಹುಚ್ಚಿನಿಂದಾಗಿ ನಾನು ಇಂಡಸ್ಟ್ರಿಗೆ ಬಂದೆ. ಆದರೆ ಎಲ್ಲರು ನನ್ನನ್ನು ಹುಚ್ಚನಂತೆ ಟ್ರೀಟ್ ಮಾಡಿದ್ರು. ವಿಶೀತಾ ನನ್ನನ್ನು ನಂಬು, ಅವನು ಒಳ್ಳೆಯವನಲ್ಲ. ನನ್ನ ತಾಯಿಯ ಒಡವೆಗಳನ್ನು ನನ್ನ ಅಕ್ಕನಿಗೆ ಕೊಡು ಇದು ನನ್ನ ಕೊನೆ ಆಸೆ ಎಂದು ಬರೆದಿದ್ದರು. ಆದರೆ ಇತ್ತೀಚಿಗೆ ಉದಯ್ ಅಕ್ಕ ಮಾಧ್ಯಮವೊಂದರಲ್ಲಿ ಮಾತನಾಡಿ ನನ್ನ ತಾಯಿಯ ಒಡವೆ ನನಗೆ ಸೇರಲಿಲ್ಲ, ವಿಶೀತಾ ಎಲ್ಲಿದ್ದಾಳೆ ಅಂತಾ ನನಗೆ ಗೊತ್ತಿಲ್ಲ. ಅವರಿಬ್ಬರ ನಡುವೆ ಏನು ನಡಿದದೆ ಎಂಬುದು  ಕೂಡ ನನಗೆ ತಿಳಿದಿಲ್ಲವೆಂದು ಕಣ್ಣೀರಿಟ್ಟರು. ಅಷ್ಟೇ ಅಲ್ದೇ ಪತಿ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಹೆಂಡತಿ ವಿಶೀತಾ ಪಾರ್ಟಿಗೆ ಹೋಗಿದ್ದಳು. ಆದರೆ ಅದು ಉದಯ್ ಗೆ ಇಷ್ಟವಿರಲಿಲ್ವಂತೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕು ಕಟ್ಟಿಕೊಳ್ಳ ಬೇಕೆಂಬ ಆಸೆಯಿಂದ ಬಂದ ಈ ಯುವನಟ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು ಯಾಕೆ ಎಂದು ಇದೂವರೆಗೂ ತಿಳಿದಿಲ್ಲ.

Edited By

Kavya shree

Reported By

Kavya shree

Comments