ರಶ್ಮಿಕಾಳನ್ನ ಮದುವೆಯಾಗ್ತಾನಂತೆ ಈ ಹೈದ್ರಾಬಾದ್ ಪೋರ..?!

22 Feb 2019 1:50 PM | Entertainment
781 Report

ಕೇವಲ ಒಂದೆ ಒಂದು ಸಿನಿಮಾದ ಮೂಲಕ ಸಿನಿ ರಸಿಕರ ಮನಗೆದ್ದ ಚೆಲುವೆ ಅಂದ್ರೆ ಅದು ರಶ್ಮಿಕಾ ಮಂದಣ್ಣ.. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಾನ್ವಿ ಅಂತಾನೇ ಫೇಮಸ್ ಆದ್ರು… ಅಷ್ಟೆ ಅಲ್ಲ ಕರ್ನಾಟಕ ಕ್ರಶ್ ಯಾರು ಅಂದ್ರೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅಂದು ಬಿಡೋದಾ..?  ಸಾನ್ವಿಯಾಗಿ ಎಂಟ್ರಿ ಕೊಟ್ಟ ಈಕೆ ಟಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ… ಕಿರಿಕ್ ಪಾರ್ಟಿ ಸಿನಿಮಾ ನೋಡಿದ ಪ್ರತಿಯೊಬ್ಬರು ಕರ್ಣ ಮತ್ತೆ ಸಾನ್ವಿ ಜೋಡಿ ಮೇಡ್ ಫಾರ್ ಈಚ್ ಅದರ್ ಅಂದ್ರೂ.. ಅಂತೂ ಇಂತೂ ಇಬ್ಬರು ಕೂಡ ರಿಯಲ್ ಲೈಫ್ ನಲ್ಲೂ ಕೂಡ ಪಾಟ್ನರ್ ಆಗೋಕೆ ಸಿದ್ದವಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡ್ರು.. ಆದರೆ ಆ ಜೋಡಿ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ.. ಇಬ್ಬರು ಬ್ರೇಕ್ ಅಫ್ ಮಾಡಿಕೊಂಡರು.. ಆದರೆ ಇಲ್ಲೊಬ್ಬ ಹುಡುಗ ರಶ್ಮಿಕಾಳನ್ನು ನಾನು ಮದುವೆಯಾಗ್ತೀನಿ ಅಂತ ಹೇಳ್ತಿದ್ದಾನೆ..

ಕಿರಿಕ್ ಪಾರ್ಟಿ ಸಾನ್ವಿ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಮೋಡಿ ಮಾಡಿದ್ದಾರೆ. ವಯಸ್ಸಿನ ಹಂಗಿಲ್ಲದೇ ಫ್ಯಾನ್ ಹೊಂದಿರುವ ರಶ್ಮಿಕಾಗೆ ಹೈದರಾಬಾದ್ ಪುಟ್ಟ ಹುಡುಗನೊಬ್ಬ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾನೆ. ಈ ಎಂಟು ವರ್ಷದ ಪುಟ್ಟ ಪೋರ 'ನೀನು ಯಾರನ್ನು ಮದ್ವೆ ಆಗ್ತೀಯಾ' ಅಂತ ಕೇಳಿದ್ದಕ್ಕೆ 'ರಶ್ಮಿಕಾರನ್ನು ಮದುವೆ ಆಗುವೆ' ಎಂದು ತೆಲುಗಿನಲ್ಲಿ ಮಾತನಾಡಿರುವುದನ್ನು ಟ್ವಿಟರ್ ನಲ್ಲಿ ಪ್ರವೀಣ್ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಪೋರನಿಗೆ ಬೋಲ್ಡ್ ಆದ ರಶ್ಮಿಕಾ ಏನು ರಿಟ್ವೀಟ್ ಮಾಡಿದ್ದಾರೆ .. Awwwnannu pelli cheskuntava? aiyooo naku full shy happening.. so cute! too much love to you little man.. mwahs xoxo ಎಂದು ರಿಟ್ವೀಟ್ ಮಾಡಿದ್ದಾರೆ.

Edited By

Manjula M

Reported By

Manjula M

Comments