ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್’ ವುಡ್ ನಟಿ…!

22 Feb 2019 1:11 PM | Entertainment
257 Report

ಸ್ಯಾಂಡಲ್ವುಡ್ ನಲ್ಲಿ ನಟ-ನಟಿಯರ ಮದುವೆ ಕಮಾಲ್ ಜೋರಾಗಿಯೇ ನಡೆಯುತ್ತಿದೆ. ಒಬ್ಬರ ಹಿಂದೆ ಒಬ್ಬರು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ನಟಿಯೊಬ್ಬರು ಹಸೆಮಣೆ ಏರಿದ್ದಾರೆ. ಹುಬ್ಬಳ್ಳಿ ಮೂಲದ ಈ ಚೆಲುವೆ ಬೆಂಗಳೂರು ಮೂಲದ ಎಂಜಿನಿಯರ್ ಹುಡುಗನನ್ನು ವರಿಸಿದ್ದಾರೆ. ಇಂಜಿನಿಯರ್ ಆಗಿರುವ ಪ್ರಣವ್ ಅವರ ಜೊತೆ ನಟಿ ನೇಹಾ ಪಾಟೀಲ್ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಇಬ್ಬರ ಆರತಕ್ಷತೆ ನೆರವೇರಿದ್ದು, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆರತಕ್ಷತೆಯಲ್ಲಿ ನಟಿ ದಿಪೀಕಾ ದಾಸ್, ಶರಣ್ಯ, ನಿರ್ದೇಶಕ ಮುರಳಿಕೃಷ್ಣ ಹಾಗೂ ನಿರೂಪಕ ರೆಹಮಾನ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದು, ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೇ ನೇಹಾ, ಮನೆಯವರು ನೋಡಿದ ಹುಡುಗನೊಟ್ಟಿಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ಅಕ್ಟೋಬರ್ 19 ರಂದು ಕುಟುಂಬರ ಸಮ್ಮುಖದಲ್ಲಿ ನೇಹಾ ಪ್ರಣವ್ ನಿಶ್ಚಿತಾರ್ಥವು ಕೂಡ ನೆರವೇರಿತ್ತು.

ನೇಹಾ, ಸಂಕ್ರಾಂತಿ, ಸಂಯುಕ್ತ, ಸಿತಾರಾ, ವರ್ಧನ, ಟೈಟ್ಲು ಬೇಕಾ, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಕಿರುತೆಯಲ್ಲೂ ನಟನೆ ಮಾಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ನೇಹಾ ಪಾಟೀಲ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸದ್ಯಕ್ಕೆ ನೇಹಾ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಮದುವೆಯ ಬಳಿಕವೂ ಅಭಿನಯ ಮುಂದುವರಿಸಲು ನೇಹಾ ನಿರ್ಧರಿಸಿದ್ದಾರೆ.

Edited By

Kavya shree

Reported By

Kavya shree

Comments