ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ಗರ್ಭಪಾತ' ಮಾಡಿಸಿಕೊಂಡಿದ್ಲು ಈ ನಟಿ..!! ಯಾರ್ ಗೊತ್ತಾ..?

21 Feb 2019 12:34 PM | Entertainment
1261 Report

ಸ್ಟಾರ್ ನಟ ನಟಿಯರ ಆತ್ಮಹತ್ಯೆ ಹೆಚ್ಚಾಗಿ ಹೋಗಿದೆ.. ಚಿಕ್ಕ ಚಿಕ್ಕ ವಿಷಯಗಳನ್ನು ಎದುರಿಸಲು ಆಗದೆ ಚಿಕ್ಕ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಅದೇ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಹಾಗೂ ಹಾಡುಗಾರ್ತಿ ಜಿಯಾ ಖಾನ್.. ಈಕೆ ಫೆಬ್ರವರಿ 21 ರಂದು ಜನಿಸಿದ್ದಳು.ಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣವೇನು ಎಂಬುದು ಈಗಲೂ ಕೂಡ  ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ. ಆದರೆ ಜಿಯಾ ಸಾಯುವ ಮುನ್ನಾ ಡೆತ್ ನೋಟ್ ಬರೆದಿದ್ದರೂ, ಸಾವಿಗೆ ಸ್ಪಷ್ಟ ಕಾರಣ ಸಿಕ್ಕಿರಲಿಲ್ಲ..ಜಿಯಾ  2013 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೂನ್ 3, 2013 ರಾತ್ರಿ 9.30 ರ ಸುಮಾರಿಗೆ ಜಿಯಾ, ತಾಯಿಗೆ ಫೋನ್ ಮಾಡಿದ್ದಳಂತೆ. ನಂತ್ರ 11.20ರ ಸುಮಾರಿಗೆ ಆಕೆ ಮೃತದೇಹ ಮುಂಬೈನ ಮನೆಯಲ್ಲಿ ಸಿಕ್ಕಿದೆ.

ಈ ಘಟನೆ ನಡೆದ ವಾರದ ಬಳಿಕ ಜಿಯಾ ಸಹೋದರಿಗೆ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಜಿಯಾ, ಹೆಸರು ಹೇಳದೆ ತನ್ನ ನೋವನ್ನು ತೋಡಿಕೊಂಡಿದ್ದಳು. ಪತ್ರ ನೋಡಿ ಇದು ಜಿಯಾ ತನ್ನ ಬಾಯ್ ಫ್ರೆಂಡ್ ಗೆ ಬರೆದಿದ್ದು ಎಂದು ಅಂದಾಜಿಸಲಾಗಿದೆ.ಆದ್ರೆ ಯಾವುದೇ ಸಾಕ್ಷಿಯೂ ಕೂಡ ಸಿಕ್ಕಿಲ್ಲ. ಪತ್ರದಲ್ಲಿ ಜಿಯಾ, ನಿನ್ನಿಂದ ಎಲ್ಲ ಹಾಳಾಯ್ತು. ನಾನು ಪ್ರೀತಿ ಬಯಸಿದ್ದೆ. ಆದ್ರೆ ನನಗೆ ಏನೂ ಸಿಗಲಿಲ್ಲ. ನನ್ನಲ್ಲಿ ಇನ್ನು ಏನೂ ನಿನಗೆ ಕೊಡಲು ಉಳಿದಿಲ್ಲ. ನಿನ್ನ ಚಿತ್ರ ಹಿಂಸೆಗೆ ನನ್ನ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡೆ ಎಂದು ಬರೆದಿದ್ದಳು. ಬಾಯ್ ಫ್ರೆಂಡ್ ಹೆಸರು ಬರೆಯದೆ ಜಿಯಾ ಅನೇಕ ವಿಷ್ಯಗಳನ್ನು ಪತ್ರದಲ್ಲಿ ಬರೆದಿದ್ದಳು ಎನ್ನಲಾಗಿದೆ.. ಒಟ್ಟಾರೆ ಜಿಯಾ ಖಾನ್ ಆತ್ಮಹತ್ಯೆಗೆ ಈವರೆಗೂ ಕೂಡ ಯಾವುದೇ ಉತ್ತರ ಸಿಕ್ಕಿಲ್ಲ… ಇನ್ನೂ ಈ ಸಾವು ನಿಗೂಢವಾಗಿಯೇ ಉಳಿದಿದೆ.

Edited By

Manjula M

Reported By

Manjula M

Comments