ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ಮಗಳಿಗೆ ಮದುವೆ ಫಿಕ್ಸ್ ...

21 Feb 2019 12:06 PM | Entertainment
1049 Report

ಅಂದಹಾಗೇ ಸ್ಯಾಂಡಲ್ ‘ವುಡ್ ನ ಕ್ರೇಜಿ ಸ್ಟಾರ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ರವಿಚಂದ್ರನ್ ಫೆ. 14 ರಂದು ಮದುವೆ ವಾರ್ಷಿಕೋತ್ಸವ ಮುಗಿಸಿಕೊಂಡಿದ್ದರು. ಆ ಸಂಭ್ರಮದಲ್ಲೇ ಇದ್ದ ರವಿಚಂದ್ರನ್ ಗೆ ಇದೀಗ ಡಬಲ್  ಖುಷಿಯಂತೆ. ಅದಕ್ಕೆ ಕಾರಣ ಮಗಳ ಮದುವೆ ನಿಶ್ಚಯವಾಗಿರುವುದು. ನಟ ರವಿಚಂದ್ರನ್ ಫ್ಯಾಮಿಲಿ ಯಾವುದೇ ಸಿನಿ ಕಾರ್ಯಕ್ರಮ ಅಥವಾ ಸಾರ್ವಜನಿಕ ಫಂಕ್ಷನ್ ಗಳಿಂದ ದೂರ ಉಳಿಯುತ್ತಾರೆ.

ಅದಕ್ಕೆ ಕಾರಣವನ್ನು ಕ್ರೇಜಿಸ್ಟಾರ್ ಅವರೇ ಕಾರ್ಯಕ್ರಮದ ವೇದಿಕೆಯಲ್ಲಿ ಕೊಟ್ಟಿದ್ದರು. ಅವರಿಗೆ  ಸ್ವಲ್ಪ ಜನರನ್ನು ಕಂಡರೆ ಮುಜುಗರ. ಸೋ ಹಾಗಾಗಿ ಅವರು ಎಲ್ಲಿಗೂ ಬರಲು ಇಷ್ಟಪಡುವುದಿವೆಂದು ಮಗಳು ಮತ್ತು ಪತ್ನಿ ಸುಮತಿಯ ಬಗ್ಗೆ ಹೇಳಿಕೊಂಡಿದ್ದರು.ಸದ್ಯ ರವಿಚಂದ್ರನ್ ಅವರ ಒಬ್ಬಳೇ ಪುತ್ರಿಯಾಗಿರುವ ಗೀತಾಂಜಲಿಗೆಮದುವೆ ಫಿಕ್ಸ್ ಆಗಿದೆ.ರವೀಚಂದ್ರನ್ ಸದ್ಯ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋ ವೊಂದರಲ್ಲಿ ಜಡ್ಜ್ ಆಗಿದ್ದಾರೆ.

ಪುತ್ರರಾದ ಮನೋರಂಜನ್ ಮತ್ತು ವಿಕ್ರಂ ಅವರು ಈಗಾಗಲೇ ಸ್ಯಾಂಡಲ್’ವುಡ್ ಗೆ ಪ್ರವೇಶಿಸಿದ್ದು ಹೊಸ ಭರವಸೆ ಮೂಡಿಸಿದ್ದಾರೆ. ಖುದ್ದು ರವೀಚಂದ್ರನ್ ಕೂಡ ಸದ್ಯಕ್ಕೆ ಯಾವುದೇ ಚಿತ್ರದ ನಿರ್ದೇಶನ ಕೈಗೆತ್ತಿಕೊಳ್ಳದೆ, ಅಭಿನಯದಲ್ಲೆ ಬ್ಯುಸಿಯಾಗಿದ್ದಾರೆ. ರವಿಚಂದ್ರನ್ ಅಭಿನಯದ 'ದಶರಥ' ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಡೊಂದನ್ನು ಹಾಡಿದ್ದಾರೆ.ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಮತ್ತು ಬೆಂಗಳೂರಿನ ಉದ್ಯಮಿ ಅಜಯ್ ಅವರ ನಿಶ್ಚಿತಾರ್ಥ ನಾಳೆ ಬೆಂಗಳೂರಿನಲ್ಲಿಯೇ ನಡೆಯಲಿದೆ. ಕಾರ್ಯಕ್ರಮ ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಆಪ್ತರಷ್ಟೇ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

Edited By

Kavya shree

Reported By

Kavya shree

Comments