ನೀಲಿಚಿತ್ರಗಳಲ್ಲೂ ಟಾಪರ್…! ಇಂಜಿನಿಯರ್ ಪರೀಕ್ಷೆಯಲ್ಲೂ ಟಾಪರ್ : ಈ ನಟಿ ಯಾರು ಗೊತ್ತಾ…?!!!

21 Feb 2019 10:58 AM | Entertainment
301 Report

ಇಂಜಿನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲೂ ಟಾಪರ್ ಅಂತೆ,ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.. ಹಾಗಿದ್ರೆ ಆ ನಟಿ ಯಾರು ಅಂತೀರಾ.. ಬಾಲಿವುಡ್ ಕ್ವೀನ್ ಸನ್ನಿ ಲಿಯೋನ್. ಈಕೆ ನಟನೆ ಬಿಟ್ಟು ಇಂಜನಿಯರ್ ಆಗೋದ್ರಾ..? ಅಂತಾ ಅಚ್ಚರಿ ಪಡಬೇಡಿ. ಆಕೆ ಪರೀಕ್ಷೆಯಲ್ಲಿ ಪಾಸಾಗಿದ್ದೇನೋ ನಿಜ. ಅದು ಹೇಗೆ ಅಂತೀರಾ… ಹಾಗಿದ್ರೆ ಸುದ್ದಿ ಓದಿ...

ಬಾಲಿವುಡ್ ನಟಿ ಸನ್ನಿ ಲಿಯೋನ್  ಕೆಲವೇ ದಿನಗಳಲ್ಲಿ ನಟನೆ ಬಿಟ್ಟು ಇಂಜಿನಿಯರ್ ಕೆಲಸ ಮಾಡಿದ್ರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇತ್ತೀಚೆಗೆ ಬಿಹಾರ ಸರ್ಕಾರ ನಡೆಸಿದ ಪರೀಕ್ಷೆಯಲ್ಲಿ ಸನ್ನಿ ಟಾಪರ್ ಆಗಿದ್ದಾರೆ. ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಖಾಲಿಯಿದ್ದ 200 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 17,000 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಅವರಲ್ಲಿ 200 ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿತ್ತು. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರೂ ಇದೆ. ಅಷ್ಟೇ ಅಲ್ಲ, ಟಾಪರ್ಸ್ ಗಳ ಪಟ್ಟಿಯಲ್ಲಿಯೂ ಸನ್ನಿ ಲಿಯೋನ್ ಹೆಸರಿದೆ. ಅಂದಹಾಗೇ ಸನ್ನಿ ಲಿಯೋನ್ ತಾಂತ್ರಿಕ ದೋಷದಿಂದ  ಈ ಪ್ರಮಾದವಾಗಿದೆ. ಅದನ್ನು ಸರಿ ಮಾಡಿ ಮತ್ತೆ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ. 'ಸನ್ನಿ ಲಿಯೋನ್' ಎಂಬ ಹೆಸರಿದ್ದಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲೂ ಹೆಚ್ಚು ಸುದ್ದಿಯಾಗಿದೆ. ಅಂದಹಾಗೇ ಈ ಪ್ರಮಾದದ ಪಟ್ಟಿಯಲ್ಲಿ ಸನ್ನಿ ಲಿಯೋನ್ ಜನರಲ್ ಕೆಟಗೆರಿಗೆ ಸೇರಿದವರೆಂದು ಅರ್ಜಿಯಲ್ಲಿ ಬರೆಯಲಾಗಿದ್ದು, ತಂದೆಯ ಹೆಸರನ್ನು ಲಿಯೋನಾ ಲಿಯೋನ್  ಎಂದು ಮುದ್ರಿಸಲಾಗಿದೆ ಅವರು 98.5 ಮತ್ತು 73.5 ಪಡೆದಿದ್ದಾಗಿ  ಬರೆದಿದ್ದಾರೆ.ಸನ್ನಿ ಲಿಯೋನ್ ಈ ಸುದ್ದಿಯ ಬಗ್ಗೆ ಓದಿದ ನಂತರ 'ನನ್ನಂಥ ಮತ್ತೊಬ್ಬರು ಇಷ್ಟು ಒಳ್ಳೆಯ ಸ್ಕೋರ್ ಮಾಡಿದ್ದಕ್ಕೆ ಸಂತಸವಾಗಿದೆ' ಎಂದು ಟ್ವೀಟ್  ಮಾಡಿದ್ದಾರೆ ನೀಲಿ ಚಿತ್ರಗಳ ರಾಣಿ ಸನ್ನಿ.

Edited By

Kavya shree

Reported By

Kavya shree

Comments