“ದಿನಾ ಸಾಯೋರ್ಗೆ ಅಳೋಕಾಗುತ್ತಾ” ಹುತಾತ್ಮ ಯೋಧರ ಸಾವನ್ನ ಟೀಕೆ ಮಾಡಿದ ನಟಿ..!!!

21 Feb 2019 9:56 AM | Entertainment
312 Report

ಫೆಬ್ರವರಿ 14 ಎಲ್ಲೆಡೆ ಪ್ರೇಮಿಗಳ ದಿನಾಚರಣೆಯ ಸಂಭ್ರಮ.. ಕೈಯಲ್ಲಿ ರೋಜ್ ಹಿಡಿದುಕೊಂಡು ಪ್ರಪೋಸ್ ಮಾಡೋದನ್ನ ನೋಡೋದೆ ಒಂಥರಾ ಚಂದ… ಪ್ರೇಮಿಗಳ ದಿನದ ಗುಂಗಿನಲ್ಲಿದ್ದವರಿಗೆ ಹಾಗೂ ಇಡೀ ದೇಶಕ್ಕೆ ಆ ದಿನ ಮರೆಯಲಾಗದ ದಿನ ಆಗಿ ಹೋಯಿತು… ಪ್ರೇಮಿಗಳ ದಿನ ಕರಾಳ ದಿನ ಆಗಿ ಹೋಯಿತು,.. ಇದೇ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ರಕ್ಕಸಿಗರ ಉಗ್ರರ ಕೃತ್ಯಕ್ಕೆ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಈ ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯರೆಲ್ಲರನ್ನು ದುಃಖದ ಮಡುವಿನಲ್ಲಿ ಇರುವಂತೆ ಮಾಡಿ ಬಿಟ್ಟಿತು... ರಾತ್ರಿ ಹಗಲೆನ್ನದೇ ಯೋಧರ ವೀರಮರಣಕ್ಕೆ ಸಂತಾಪ, ಶ್ರದ್ಧಾಂಜಲಿ ಅರ್ಪಿಸಲಾಯಿತು. .ಇಡೀ ದೇಶಕ್ಕೆ ಸೂತಕದ ಛಾಯೆ ಆವರಿಸಿದಂತಾಯಿತು. ಇದರ ಬೆನ್ನಲ್ಲೆ ದೇಶವಾಸಿಗಳ ಸಹನೆ ಕಟ್ಟೆಯೊಡೆದು, ಪಾಕ್ ವಿರುದ್ಧ ಪ್ರತಿಕಾರದ ನುಡಿಗಳು ಹೊರ ಬೀಳಲು ಶುರುವಾದವು... ಇದೇ ವೇಳೆ ನಟಿ ಮಲ್ಲಿಕಾ ದುವಾ ಫೇಸ್​ಬುಕ್​​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ದೇಶಭಕ್ತರನ್ನು ಅಣಕಿಸುವ ಕೆಲಸ ಮಾಡಿ ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

‘ಇಡೀ ದೇಶವೇ ದುಃಖಿಸುತ್ತಿದೆ, ಇಂತಹ ವೇಳೆಯಲ್ಲಿ ಹೇಗೆ ಸಂತೋಷವಾಗಿರಲು ಸಾಧ್ಯ ಎಂದು ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೋವನ್ನು ಹೊರಹಾಕುತ್ತಿದ್ದಾರೆ..  ಪುಲ್ವಾಮಾ ಘಟನೆ ಕುರಿತು ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಹಸಿವು, ನಿರುದ್ಯೋಗ, ಖಿನ್ನತೆ ಸೇರಿದಂತೆ ಸಾಕಷ್ಟು ಕಾರಣಗಳಿಂದ ಪ್ರತಿನಿತ್ಯ ನೂರಾರು ಜನರು ಸಾಯುತ್ತಾರೆ. ಇದು ಕೇವಲ ನಮ್ಮ ದೇಶವಲ್ಲ, ಇಡೀ ವಿಶ್ವದಲ್ಲಿ ಜನರು ಒಂದಿಲ್ಲೊಂದು ಕಾರಣಕ್ಕೆ ಸಾಯುತ್ತಾರೆ.ಇವರಿಗಾಗಿ ನೀವು ನಿಮ್ಮ ಜೀವನವನ್ನು ನಿಲ್ಲಿಸುತ್ತೀರಾ? ಇವರ ಸಾವಿಗೆ ಶೋಕ ವ್ಯಕ್ತಪಡಿಸುವುದೇ ನಮ್ಮ ಕರ್ತವ್ಯವೇ ? ಹೀಗೆ ಯೋಚಿಸಿದ್ರೆ ಪ್ರತಿನಿತ್ಯ ನಾವು ಸಂತಾಪ ಸೂಚಿಸಬೇಕಾಗುತ್ತೆ. ಇದೆಂತಹ ನಾನ್​ಸೆನ್ಸ್​ ಎಂದು ಹೇಳಿಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ಮಲ್ಲಿಕಾ​ ದೇಶಭಕ್ತರೇ ಭಾರತೀಯರು ಯಾರು ಎಂಬುದನ್ನು ನೀವು ನಿರ್ಧರಿಸಬೇಕಾಗಿಲ್ಲ ಎಂದು ಸ್ಟೇಟಸ್ ಕೂಡ ಹಾಕಿದ್ದಾರೆ. ಇವರ ಈ ಪೋಸ್ಟ್​ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.. ಹುತಾತ್ಮ ಯೋಧನ ಸಾವಿಗೆ ಈ ರೀತಿ ಪೋಸ್ಟ್ ಹಾಕಿರುವುದಕ್ಕೆ ಎಲ್ಲರೂ ನಟಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ..

Edited By

Manjula M

Reported By

Manjula M

Comments