ನಿರ್ಮಾಪಕರ 'ಲೈಂಗಿಕ' ಕಿರುಕುಳದ ಬೇಡಿಕೆಗೆ ಬೇಸತ್ತ ನಟಿ..!! ಮುಂದೇನಾಯ್ತು..!!!

20 Feb 2019 5:57 PM | Entertainment
665 Report

ಬಣ್ಣದಲೋಕದಲ್ಲಿ ಹೆಚ್ಚಾಗಿ ಕೇಳಿಬರುವ ಮಾತ್ತೆಂದರೆ ಅದು ಲೈಂಗಿಕ ಶೋಷಣೆಯ ಬಗ್ಗೆ..  ಈ ಬಗ್ಗೆ ಸಾಕಷ್ಟು ವಿಚಾರಗಳು ನಡೆದಿದ್ದಾದ್ದರೂ ಕೂಡ ಯಾವ ಪ್ರಯೋಜನಕ್ಕೂ ಬರಲಿಲ್ಲ.. ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ನಟಿಯರಿಗೆ ಈ ವಿಷಯ ದೊಡ್ಡ ತಲೆನೋವಾಗಿದೆ… ಅವಕಾಶ ಬೇಕು ಅಂದರೆ ಹಾಸಿಗೆಗೆ ಕರೆಯುವವರೆ ಹೆಚ್ಚು.. ಇಂತಹವರ ನಡುವೆ ನಟಿಯಾಗುವ ಕನಸನ್ನು  ನನಸು ಮಾಡಿಕೊಳ್ಳುವ  ಆಸೆಯನ್ನು ಈಡೇರಿಸಿಕೊಳ್ಳೂವುದು ಹೇಗೆ ಹೇಳಿ..? ಇದೀಗ ಇದೇ ಸಾಲಿಗೆ ಮತ್ತೊಬ್ಬ ನಟಿ ಮಣಿ ಸೇರಿಕೊಂಡಿದ್ದಾರೆ. ಯಾರ್ ಅದು ಅಂತೀರಾ…? ಮುಂದೆ ಓದಿ..

ನಟಿ ಕಣಿ ಕಸ್ರುಟಿ, ಮಲಯಾಳಂ ಚಲನಚಿತ್ರೋದ್ಯಮದ ವಿರುದ್ಧ ಆರೋಪ ಮಾಡಿದ್ದಾರೆ. ವರದಿಗಳ ಪ್ರಕಾರ, ಚಿತ್ರ ನಿರ್ಮಾಪಕರ ಲೈಂಗಿಕ ಬೇಡಿಕೆಯಿಂದ ಬೇಸತ್ತು ನಟಿ ಬಣ್ಣದ ಲೋಕದ ನಂಟನ್ನೆ ಬಿಟ್ಟಿದ್ದಾರಂತೆ. ತನ್ನನ್ನು ಒಪ್ಪಿಸುವಂತೆ ತಾಯಿ ಮುಂದೆಯೂ ಈ ಬಗ್ಗೆ ನಿರ್ಮಾಪಕರು ಮಾತನಾಡಿದ್ದರು ಎಂದು ಕಣಿ ಕಸ್ರುಟಿ ಗಂಭೀರ ಆರೋಪವನ್ನು ಮಾಡಿದ್ದಾರೆ. ನಿರ್ಮಾಪಕರು, ತಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಬಯಸಿದ್ದರು. ಇದೇ ಕಾರಣಕ್ಕೆ ನನ್ನ ತಾಯಿಯನ್ನು ಕೂಡ ಭೇಟಿಯಾಗಿದ್ದರು.

ಮೀಟೂ ಅಭಿಯಾನ ಹಾಗೂ Women in Cinema Collective ನಂತ್ರ ಮಲಯಾಳಂ ಚಿತ್ರೋದ್ಯಮದ ಪರಿಸ್ಥಿತಿ ಬದಲಾಗುತ್ತೆ ಎಂದು ಎಂದುಕೊಂಡಿದ್ದೆ. ಆದರೆ ಅದ್ಯಾವುದು ಆಗಲೇ ಇಲ್ಲ… ಮಲಯಾಳಂ ಚಿತ್ರೋದ್ಯಮದಲ್ಲಿರುವ ಮಹಿಳೆಯರ ಕಲ್ಯಾಣಕ್ಕಾಗಿ 2017 ರಲ್ಲಿ Women in Cinema Collective ಸಂಘ ಸ್ಥಾಪನೆಯನ್ನು ಮಾಡಲಾಗಿದೆ. ಕಣಿ ಮಲೆಯಾಳಂ ಜೊತೆ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾ ಹೆಸರಿನ ಶಾರ್ಟ್ ಫಿಲ್ಮ್ ಕಣಿಗೆ ಹೆಸರು ತಂದುಕೊಟ್ಟಿದೆ. ಒಟ್ಟಾರೆಯಾಗಿ ಹೆಣ್ಣು ಮಕ್ಕಳಿಗೆ ಯಾವಾಗ ಈ ಲೈಂಗಿಕ ಶೋಷಣೆಯಿಂದಾಗಿ ಯಾವಾಗ ಮುಕ್ತಿ ಸಿಗುತ್ತದೆ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ…

Edited By

Manjula M

Reported By

Manjula M

Comments